ಮಾನಸಿಕ ಆರೋಗ್ಯ ಕಾರ್ಯಕ್ರಮವನ್ನು ಕರ್ನಾಟಕ, ಉತ್ತರಾಖಂಡ್ ತಾಲ್ಲೂಕು ಕೇಂದ್ರಗಳಿಗೆ ತಲುಪಿಸುತ್ತಿರುವ ನಿಮ್ಹಾನ್ಸ್

ಗ್ರಾಮೀಣ ಪ್ರದೇಶಗಳ ಜನರಿಗೆ ಮಾನಸಿಕ ಆರೋಗ್ಯ ಸೇವೆಗಳನ್ನು ತಲುಪಿಸುವ ಕ್ರಮದಲ್ಲಿ, ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ ನಿಮ್ಹಾನ್ಸ್ ಮತ್ತು ಆಶ್ರಯ ಹಸ್ತ ಟ್ರಸ್ಟ್ (AHT) ಮಾದರಿ ಸಮಗ್ರ ಗ್ರಾಮೀಣ ಮಾನಸಿಕ ಆರೋಗ್ಯ ಕಾರ್ಯಕ್ರಮ ನಮನ್ (Nimhans-AHT) ಅನುಷ್ಠಾನಗೊಳಿಸುವ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಿವೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಗ್ರಾಮೀಣ ಪ್ರದೇಶಗಳ ಜನರಿಗೆ ಮಾನಸಿಕ ಆರೋಗ್ಯ ಸೇವೆಗಳನ್ನು ತಲುಪಿಸುವ ಕ್ರಮದಲ್ಲಿ, ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ ನಿಮ್ಹಾನ್ಸ್ ಮತ್ತು ಆಶ್ರಯ ಹಸ್ತ ಟ್ರಸ್ಟ್ (AHT) ಮಾದರಿ ಸಮಗ್ರ ಗ್ರಾಮೀಣ ಮಾನಸಿಕ ಆರೋಗ್ಯ ಕಾರ್ಯಕ್ರಮ ನಮನ್ (Nimhans-AHT) ಅನುಷ್ಠಾನಗೊಳಿಸುವ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಿವೆ. 

ಕಾರ್ಯಕ್ರಮದ ಕಾರ್ಯಸಾಧ್ಯತೆಯನ್ನು ಪರೀಕ್ಷಿಸಲು ಎರಡು ತಾಲ್ಲೂಕುಗಳಲ್ಲಿ ಗ್ರಾಮೀಣ ಸಮುದಾಯಗಳಿಗೆ ಮಾನಸಿಕ-ಆರೋಗ್ಯ ಕ್ರಿಯಾ ಕಾರ್ಯಕ್ರಮಗಳನ್ನು ಪ್ರಾಯೋಗಿಕವಾಗಿ ಏರ್ಪಡಿಸಲಾಗಿದೆ. 

ಉತ್ತರಾಖಂಡ ರಾಜ್ಯದ ಪಿಥೋರಗಢ ಜಿಲ್ಲೆಯ ಮುನ್ಸಿಯಾರಿ ಮತ್ತು ಕರ್ನಾಟಕದ ಹಾಸನ ಜಿಲ್ಲೆಯ ಬೇಲೂರುಗಳಲ್ಲಿ ನಿಮ್ಹಾನ್ಸ್ ಸಂಸ್ಥೆ ಕಾರ್ಯಕ್ರಮಗಳನ್ನು ಏರ್ಪಡಿಸಿದೆ. ಪ್ರಾಯೋಗಿಕ ಮಾನಸಿಕ ಆರೋಗ್ಯ ಕಾರ್ಯಕ್ರಮವನ್ನು ಮೂರು ವರ್ಷಗಳಲ್ಲಿ ನಾಲ್ಕು ಹಂತಗಳಲ್ಲಿ ಜಾರಿಗೊಳಿಸಲಾಗುವುದು, ಇದರಲ್ಲಿ ಸಂಪನ್ಮೂಲ ನಿರ್ಮಾಣ, ಸಾಂದರ್ಭಿಕ ವಿಶ್ಲೇಷಣೆ, ಮಧ್ಯಸ್ಥಿಕೆ ಮತ್ತು ಮೌಲ್ಯಮಾಪನ ಸೇರಿವೆ.

ನಿಮ್ಹಾನ್ಸ್ ಸಂಸ್ಥೆ ಕಾರ್ಯಕ್ರಮದ ಒಟ್ಟಾರೆ ಮಾರ್ಗ ನಕ್ಷೆಯನ್ನು ಅಭಿವೃದ್ಧಿಪಡಿಸಿ ಅನುಷ್ಠಾನಗೊಳಿಸಲಿದೆ. ರಿಷಿಕೇಶದ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (AIIMS), ಉತ್ತರಾಖಂಡದಲ್ಲಿ ಕಾರ್ಯಕ್ರಮವನ್ನು ನೀಡಲು ನಿಮ್ಹಾನ್ಸ್‌ನೊಂದಿಗೆ ಸಹಕರಿಸುತ್ತದೆ. ಕರ್ನಾಟಕ ಮತ್ತು ಉತ್ತರಾಖಂಡ ಸರ್ಕಾರಗಳು ಅನುಷ್ಠಾನದ ಪಾಲುದಾರರಾಗಿರುತ್ತವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com