ನೀತಿ ಸಂಹಿತೆ ಉಲ್ಲಂಘನೆ, ಚುನಾವಣಾ ಅಕ್ರಮ: ಒಟ್ಟು 150 ಕೋಟಿ ರೂಪಾಯಿ ಜಪ್ತಿ

ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ರಾಜ್ಯದಲ್ಲಿ ಮಾ.29 ರಿಂದ ಈ ವರೆಗೂ ಒಟ್ಟು 150 ಕೋಟಿ ರೂಪಾಯಿ ಮೌಲ್ಯದ ನಗದು, ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. 
ಚುನಾವಣೆ (ಸಾಂಕೇತಿಕ ಚಿತ್ರ)
ಚುನಾವಣೆ (ಸಾಂಕೇತಿಕ ಚಿತ್ರ)

ಬೆಂಗಳೂರು: ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ರಾಜ್ಯದಲ್ಲಿ ಮಾ.29 ರಿಂದ ಈ ವರೆಗೂ ಒಟ್ಟು 150 ಕೋಟಿ ರೂಪಾಯಿ ಮೌಲ್ಯದ ನಗದು, ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. 

ಮಾ.29 ರಿಂದ ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು, ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳಲ್ಲಿ ಒಟ್ಟು 150 ಕೋಟಿ ರೂಪಾಯಿಗಳನ್ನು ವಶಕ್ಕೆ ಪಡೆಯಲಾಗಿದೆ.
 
ಒಟ್ಟು 149.58 ಕೋಟಿ ರೂಪಾಯಿ ಮೌಲ್ಯದ ಪೈಕಿ 61 ಕೋಟಿ ರೂಪಾಯಿಗಳಷ್ಟು ನಗದು, 33 ಕೋಟಿ ರೂಪಾಯಿ ಮೌಲ್ಯದ ಮದ್ಯ, 24 ಕೋಟಿ ರೂಪಾಯಿ ಮೌಲ್ಯದ ಅಮೂಲ್ಯ ಲೋಹಗಳು, 18 ಕೋಟಿ ರೂಪಾಯಿ ಮೌಲ್ಯದ ಉಚಿತ ಕೊಡುಗೆಗಳು, 13 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್, ನಾರ್ಕೊಟಿಕ್ಸ್ ಸೇರಿದೆ ಎಂದು ಮುಖ್ಯ ಚುನಾವಣಾ ಅಧಿಕಾರಿ ತಿಳಿಸಿದ್ದಾರೆ.

ವಶಕ್ಕೆ ಪಡೆಯಲಾಗಿರುವ ಪ್ರಕರಣಗಳಲ್ಲಿ 1,262 ಎಫ್ಐಆರ್ ಗಳನ್ನು ದಾಖಲಿಸಲಾಗಿದೆ.  ಮೇ.10 ಕ್ಕೆ ಚುನಾವಣೆ ಘೋಷಣೆಯಾಗುವುದಕ್ಕೂ ಮುನ್ನ ಅಂದರೆ ಮಾ.09 ರಿಂದ ಮಾ.27 ವರೆಗೆ 58 ಕೋಟಿ ರೂಪಾಯಿಗಳನ್ನು ಜಪ್ತಿ ಮಾಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com