ಸಿಆರ್ ಪಿಎಫ್ ನೇಮಕಾತಿ: ಕನ್ನಡದಲ್ಲೂ ಪರೀಕ್ಷೆ ಬರೆಯಲು ಕೇಂದ್ರದ ಆದೇಶ, ಇದು ನಮ್ಮ ಹಕ್ಕು ಎಂದ ಜೆಡಿಎಸ್!

ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್ ಪಿಎಫ್) ಹುದ್ದೆಗಳ ಪರೀಕ್ಷೆಗಳನ್ನು ಕನ್ನಡ ಸೇರಿದಂತೆ ದೇಶದ ಪ್ರಮುಖ ಬರೆಯುವಂತೆ ಕೇಂದ್ರ ಗೃಹ  ಸಚಿವಾಲಯ ಆದೇಶ ನೀಡಿದೆ. ಈ ಹಿಂದೆ ಈ ಪರೀಕ್ಷೆಗಳನ್ನು ಹಿಂದಿ ಮತ್ತು ಇಂಗ್ಲಿಷ್ ನಲ್ಲಷ್ಟೇ ಬರೆಯಬೇಕೆಂಬ ಸರ್ಕಾರದ ಆದೇಶಕ್ಕೆ ಕರ್ನಾಟಕದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
ಸಿಆರ್ ಪಿಎಫ್ ಸಾಂದರ್ಭಿಕ ಚಿತ್ರ
ಸಿಆರ್ ಪಿಎಫ್ ಸಾಂದರ್ಭಿಕ ಚಿತ್ರ

ಬೆಂಗಳೂರು: ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್ ಪಿಎಫ್) ಹುದ್ದೆಗಳ ಪರೀಕ್ಷೆಗಳನ್ನು ಕನ್ನಡ ಸೇರಿದಂತೆ ದೇಶದ ಪ್ರಮುಖ ಬರೆಯುವಂತೆ ಕೇಂದ್ರ ಗೃಹ  ಸಚಿವಾಲಯ ಆದೇಶ ನೀಡಿದೆ. ಈ ಹಿಂದೆ ಈ ಪರೀಕ್ಷೆಗಳನ್ನು ಹಿಂದಿ ಮತ್ತು ಇಂಗ್ಲಿಷ್ ನಲ್ಲಷ್ಟೇ ಬರೆಯಬೇಕೆಂಬ ಸರ್ಕಾರದ ಆದೇಶಕ್ಕೆ ಕರ್ನಾಟಕದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

ಈ ಕುರಿತು ಟ್ವೀಟ್ ಮಾಡಿರುವ ಜೆಡಿಎಸ್, ಕನ್ನಡಿಗರ ಪರವಾದ ಒತ್ತಾಯಕ್ಕೆ ಮಣಿದು ಕೇಂದ್ರ ಗೃಹ ಸಚಿವಾಲಯ ಈ ಆದೇಶ ಹೊರಡಿಸಿದೆ. ಕನ್ನಡ ಸೇರಿದಂತೆ ದೇಶದ ಹಲವು ಭಾಷೆಗಳಿಗೆ ಸಾವಿರಾರು ವರ್ಷಗಳ ಶ್ರೀಮಂತ ಇತಿಹಾಸವಿದ್ದು, ವಿಶ್ವದಾದ್ಯಂತ ಕೋಟ್ಯಂತರ ಜನರು ಮಾತನಾಡುತ್ತಾರೆ. ಬಿಜೆಪಿಯ ಈ ಆದೇಶ ಅಮಿತ್ ಶಾ ಹೇಳಿದಂತೆ ಐತಿಹಾಸಿಕವಾಗಿ ಬಿಟ್ಟುಕೊಟ್ಟ ಔದಾರ್ಯವಲ್ಲ. ಇದು ನಮ್ಮ ಕನ್ನಡಿಗರ ಹಕ್ಕು ಎಂದಿದೆ.

ನಮ್ಮ ಭಾಷೆಯಲ್ಲಿ ಪರೀಕ್ಷೆ ಬರೆಯುವುದೂ ನಮ್ಮ ಹಕ್ಕು. ಅದನ್ನು ಈವರೆಗೆ ನಮಗೆ ನಿರಾಕರಿಸಲಾಗಿತ್ತು. ಈ ತಪ್ಪನ್ನು ತೀವ್ರ ಪ್ರತಿಭಟನೆಯ ಕಾರಣಕ್ಕೆ ಸರಿಪಡಿಸಲಾಗಿದೆ. ಇದರ ಕ್ರೆಡಿಟ್ ಕನ್ನಡಿಗರು ಮತ್ತು ಭಾಷಾಪ್ರೇಮಿಗಳಿಗೆ ಹೋಗಬೇಕೆ ಹೊರತು, ರಾಜ್ಯ ಬಿಜೆಪಿಯಂತಹ ಹಿಂದಿ ಪ್ರೇಮಿಗಳಿಗೆ ಅಲ್ಲ ಎಂದು ಟೀಕಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com