ಉತ್ತರ, ಪೂರ್ವ ಬೆಂಗಳೂರಿನಲ್ಲಿ 2 ಬಿಹೆಚ್ ಕೆ ಫ್ಲ್ಯಾಟ್ ಸರಾಸರಿ ಬಾಡಿಗೆ ಶೇ.24 ರಷ್ಟು ಏರಿಕೆ! 

ಉತ್ತರ ಹಾಗೂ ಪೂರ್ವ ಬೆಂಗಳೂರಿನ ಪ್ರದೇಶಗಳಲ್ಲಿ 1,000 ಚದರ ಅಡಿಯ 2 ಕೊಠಡಿಗಳಿರುವ ಅಪಾರ್ಟ್ ಮೆಂಟ್ ನ ಬಾಡಿಕೆ ಕಳೆದ ಒಂದು ವರ್ಷದಲ್ಲಿ ಶೇ.24 ರಷ್ಟು ಏರಿಕೆ ಕಂಡಿದೆ ಎಂದು ಪ್ರಾಪರ್ಟಿ ಕನ್ಸಲ್ಟೆಂಟ್ ಅನಾರಾಕ್ ಹೇಳಿದೆ. 
ಬಿಡಿಎ ಫ್ಲ್ಯಾಟ್ (ಸಾಂದರ್ಭಿಕ ಚಿತ್ರ)
ಬಿಡಿಎ ಫ್ಲ್ಯಾಟ್ (ಸಾಂದರ್ಭಿಕ ಚಿತ್ರ)
Updated on

ನವದೆಹಲಿ: ಉತ್ತರ ಹಾಗೂ ಪೂರ್ವ ಬೆಂಗಳೂರಿನ ಪ್ರದೇಶಗಳಲ್ಲಿ 1,000 ಚದರ ಅಡಿಯ 2 ಕೊಠಡಿಗಳಿರುವ ಅಪಾರ್ಟ್ ಮೆಂಟ್ ನ ಬಾಡಿಕೆ ಕಳೆದ ಒಂದು ವರ್ಷದಲ್ಲಿ ಶೇ.24 ರಷ್ಟು ಏರಿಕೆ ಕಂಡಿದೆ ಎಂದು ಪ್ರಾಪರ್ಟಿ ಕನ್ಸಲ್ಟೆಂಟ್ ಅನಾರಾಕ್ ಹೇಳಿದೆ. 

ಅನಾರಾಕ್ ವರದಿಯಲ್ಲಿ ಪ್ರಮುಖ 7 ನಗರಗಳ ಅಂಕಿ-ಅಂಶಗಳು ಉಲ್ಲೇಖವಾಗಿದ್ದು, ಈ ವರದಿಯ ಪ್ರಕಾರ, ಕಳೆದ ವರ್ಷದ ಜನವರಿ- ಮಾರ್ಚ್ ಅವಧಿಗೆ ಹೋಲಿಕೆ ಮಾಡಿದರೆ, ಈ ವರ್ಷ ಅದೇ ಅವಧಿಯಲ್ಲಿ ಥಣಿಸಂದ್ರ ಮುಖ್ಯರಸ್ತೆ, ಮಾರತ್ ಹಳ್ಳಿ ಹೊರ ವರ್ತುಲ ರಸ್ತೆ ಪ್ರದೇಶಗಳಲ್ಲಿನ ವಸತಿ ಬಾಡಿಗೆ ಬೆಳವಣಿಗೆ ಶೇ.24 ರಷ್ಟು ಏರಿಕೆಯಾಗಿದೆ.

ವೈಟ್ ಫೀಲ್ಡ್ ಹಾಗೂ ಸರ್ಜಾಪುರ ಬೆಂಗಳೂರು ಪ್ರದೇಶಗಳು ಅನುಕ್ರಮವಾಗಿ ಶೇ.21 ಹಾಗೂ ಶೇ.20 ರೊಂದಿಗೆ 2 ಹಾಗೂ 3 ನೇ ಸ್ಥಾನದಲ್ಲಿದೆ. ಪೂರ್ವ ಹಾಗೂ ಉತ್ತರ ಬೆಂಗಳೂರು ಪ್ರದೇಶಗಳಲ್ಲಿ ಬಾಡಿಗೆ ಮನೆಗಳ ಬೇಡಿಕೆ ಹೆಚ್ಚಿದೆ ಎಂದು ರಿಯಲ್ ಎಸ್ಟೇಟ್ ಕನ್ಸಲ್ಟೆಂಟ್ ಸಂಸ್ಥೆ ತಿಳಿಸಿದೆ. ಎಲ್ಲಾ ಪ್ರಮುಖ ನಗರಗಳ ಪೈಕಿ ಬೆಂಗಳೂರು 4.1 ರೊಂದಿಗೆ ಅತ್ಯಧಿಕ ಬಾಡಿಗೆ ಆದಾಯದ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿದ್ದು, ಶೇ.3.9 ರೊಂದಿಗೆ ಮುಂಬೈ ನಂತರದ ಸ್ಥಾನದಲ್ಲಿದೆ.

ಬಾಡಿಗೆ ಬೇಡಿಕೆಯ ವಿಷಯದಲ್ಲಿ ಹಾಗೂ ಜೂಮಿಂಗ್ ರೆಂಟ್ ವಿಷಯದಲ್ಲಿ 7 ಟಾಪ್ ನಗರಗಳ ಪೈಕಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ, ಈ ಪೈಕಿ ಐಟಿ/ಐಟಿಇಎಸ್ ಸಂಸ್ಥೆಗಳು ಹೆಚ್ಚಿರುವ ಪೂರ್ವ ಹಾಗೂ ಉತ್ತರ ಬೆಂಗಳೂರಿನಲ್ಲಿ ಬಾಡಿಗೆ ಬೇಡಿಕೆ ಅತಿ ಹೆಚ್ಚಿನ ಪ್ರಮಾಣದಲ್ಲಿದೆ ಎಂದು ಅನಾರಾಕ್ ಗ್ರೂಪ್ ನ  ಸಂಶೋಧನೆ ವಿಭಾಗದ ಹಿರಿಯ ನಿರ್ದೇಶಕ ಮತ್ತು ಮುಖ್ಯಸ್ಥ  ಪ್ರಶಾಂತ್ ಠಾಕೂರ್ ಹೇಳಿದ್ದಾರೆ. 

ವರದಿಯ ಪ್ರಕಾರ, 2022 ರ ಜನವರಿ- ಮಾರ್ಚ್ ನಲ್ಲಿ  ಮಾಸಿಕ 21,000 ಇದ್ದ ಥಣಿ ಸಂದ್ರ ಮುಖ್ಯರಸ್ತೆಯಲ್ಲಿ 1,000 ಚದರ ಅಡಿ ಇರುವ 2 ಬಿಹೆಚ್ ಕೆ ಫ್ಲ್ಯಾಟ್ ನ ಬಾಡಿಗೆ ಬೆಲೆ, 2023 ರ ಮೊದಲ ತ್ರೈಮಾಸಿಕದಲ್ಲಿ 26,000 ರೂಪಾಯಿಗಳಿಗೆ ಏರಿಕೆಯಾಗಿದೆ.
 
ಇನ್ನು ಮಾರತ್ ಹಳ್ಳಿ ಹೊರ ವರ್ತುಲ ರಸ್ತೆ ಬಳಿ ಇರುವ ಮನೆಗಳ ಬಾಡಿಗೆ ಬೆಲೆ 22,500 ರೂಪಾಯಿಗಳಿಂದ ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ 28,000 ರೂಪಾಯಿಗಳಿಗೆ ಏರಿಕೆಯಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com