ಕಡೂರು ಜೆಡಿಎಸ್‌ ಅಭ್ಯರ್ಥಿ ವೈಎಸ್‌ವಿ ದತ್ತ ವಿರುದ್ಧ 41 ಚೆಕ್‌ ಬೌನ್ಸ್‌ ಪ್ರಕರಣ

ಕಡೂರು ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ವೈಎಸ್‌ವಿ ದತ್ತ ಅವರ ವಿರುದ್ಧ ಚೆಕ್‌ಬೌನ್ಸ್‌ನ 41 ಪ್ರಕರಣಗಳು ರಾಜ್ಯ ಮತ್ತು ಹೊರರಾಜ್ಯಗಳಲ್ಲಿ ದಾಖಲಾಗಿವೆ.
ವೈಎಸ್ ವಿ ದತ್ತಾ
ವೈಎಸ್ ವಿ ದತ್ತಾ

ಚಿಕ್ಕಮಗಳೂರು: ಕಡೂರು ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ವೈಎಸ್‌ವಿ ದತ್ತ ಅವರ ವಿರುದ್ಧ ಚೆಕ್‌ಬೌನ್ಸ್‌ನ 41 ಪ್ರಕರಣಗಳು ರಾಜ್ಯ ಮತ್ತು ಹೊರರಾಜ್ಯಗಳಲ್ಲಿ ದಾಖಲಾಗಿವೆ.

ಜೆಡಿಎಸ್ ಅಭ್ಯರ್ಥಿ ವೈಎಸ್​ವಿ ದತ್ತಾ ವಿರುದ್ಧ 41 ಚೆಕ್ ಬೌನ್ಸ್ ಪ್ರಕರಣಗಳು  ದಾಖಲಾಗಿವೆ ಎಂಬ ಮಾಹಿತಿಯನ್ನು ಚುನಾವಣಾ ಅಧಿಕಾರಿಗಳಿಗೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ  ನೀಡಿದ್ದಾರೆ. 2014 ರಿಂದ 2023ರ ವರೆಗೆ ರಾಜ್ಯ ಹೊರರಾಜ್ಯಗಳಲ್ಲಿ 41 ಚೆಕ್​​ಬೌನ್ಸ್ ಪ್ರಕರಣಗಳು ದಾಖಲಾಗಿವೆ.

ಚೆಕ್‌ ನಗದು ಆಗದಿರುವ ಕಾರಣ ಈ ಎಲ್ಲ ಪ್ರಕರಣಗಳು ನೆಗೋಷಿಯೇಬಲ್ ಇನ್‌ಸ್ಟ್ರುಮೆಂಟ್ಸ್ (ಎನ್‌ಐ) ಕಾಯ್ದೆ 1881 ರ ಕಲಂ 138ರ ಅಡಿಯಲ್ಲಿ ದಾಖಲಾಗಿವೆ. 2014ರಿಂದ 2020 ಅವಧಿಯಲ್ಲಿ ಈ ಪ್ರಕರಣಗಳು ದಾಖಲಾಗಿದ್ದು, ವಿಚಾರಣೆ ಹಂತದಲ್ಲಿವೆ.

ವೈಎಸ್​ವಿ ದತ್ತಾ ಅವರ ಬಳಿ 2022-23 ರಲ್ಲಿ 8 ಲಕ್ಷದ 15 ಸಾವಿರ ಆದಾಯ ಹೊಂದಿದ್ದಾರೆ. 17.89 ಲಕ್ಷ ಮೌಲ್ಯದ ಚರಾಸ್ತಿ, 2.94 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಒಟ್ಟು 93.19 ಲಕ್ಷ ಸಾಲ ಪಡೆದುಕೊಂಡಿದ್ದಾರೆ.

ಬೆಂಗಳೂರಿನ ಎಸಿಎಂಎಂ ನ್ಯಾಯಾಲಯದಲ್ಲಿ 6 ಪ್ರಕರಣ, ಬೆಂಗಳೂರಿನ ಎಸಿಎಂಎಂ 12, 15,18, 19, 23, 26, 36ನೇ ನ್ಯಾಯಾಲಯಗಳಲ್ಲಿ ತಲಾ ಒಂದು, ಬೆಂಗಳೂರಿನ ಎಸಿಎಂಎಂ 22 ನೇ ನ್ಯಾಯಾಲಯದಲ್ಲಿ ಮೂರು, 42ನೇ ನ್ಯಾಯಾಲಯದಲ್ಲಿ 6 ಪ್ರಕರಣ, ಬೆಂಗಳೂರಿನ ಎಸ್‌ಸಿಸಿಎಚ್‌ 6ನೇ ಮತ್ತು 8ನೇ ನ್ಯಾಯಾಲಯಗಳಲ್ಲಿ ತಲಾ ಒಂದು, ಮಂಗಳೂರಿನ ಜೆಂಎಫ್‌ಸಿ ನ್ಯಾಯಾಲಯದಲ್ಲಿ 5 ಮತ್ತು 4ನೇ ಜೆಎಂಎಫ್‌ಸಿಯಲ್ಲಿ 3 ಪ್ರಕರಣ, ಅಥಣಿ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಎರಡು, ಹಾಸನ ನ್ಯಾಯಾಲಯದಲ್ಲಿ ಎರಡು, ಹಾಸನ ಜಿಲ್ಲೆ ಬೇಲೂರು, ಹುಬ್ಬಳ್ಳಿ, ಗದಗ ನ್ಯಾಯಾಲಯಗಳಲ್ಲಿ ತಲಾ ಒಂದು. ಅನಂತಪುರ ನ್ಯಾಯಾಲಯದಲ್ಲಿ ಒಂದು, ಗುಂತಕಲ್‌ ನ್ಯಾಯಾಲಯದಲ್ಲಿ ಮೂರು ಪ್ರಕರಣ ದಾಖಲಾಗಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com