ಬೆಂಗಳೂರು: ಕಳ್ಳತನ ಆರೋಪದಡಿ 'ಮಿಸ್ಟರ್ ಆಂಧ್ರ' ಅರೆಸ್ಟ್; ಸರಣಿ ಸರಗಳ್ಳತನಕ್ಕಿಳಿದ 'ಬಾಡಿ ಬಿಲ್ಡರ್' ಕತೆ!

ಬಾಡಿ ಬಿಲ್ಡಿಂಗ್‌ ಮಾಡಿ ಮಿಸ್ಟರ್‌ ಆಂಧ್ರಪ್ರದೇಶ ಸ್ಪರ್ಧೆಯಲ್ಲಿ  3ನೇ ಸ್ಥಾನ ಪಡೆದು ಮಿಂಚಿದ್ದ ದೇಹದಾರ್ಡ್ಯ ಪಟುಯೊಬ್ಬ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಬಂಧಿತ ಆರೋಪಿ ಸೈಯ್ಯದ್ ಬಾಷಾ
ಬಂಧಿತ ಆರೋಪಿ ಸೈಯ್ಯದ್ ಬಾಷಾ

ಬೆಂಗಳೂರು: ಬಾಡಿ ಬಿಲ್ಡಿಂಗ್‌ ಮಾಡಿ ಮಿಸ್ಟರ್‌ ಆಂಧ್ರಪ್ರದೇಶ ಸ್ಪರ್ಧೆಯಲ್ಲಿ  3ನೇ ಸ್ಥಾನ ಪಡೆದು ಮಿಂಚಿದ್ದ ದೇಹದಾರ್ಡ್ಯ ಪಟುಯೊಬ್ಬ ಈಗ ಪೊಲೀಸರ ಅತಿಥಿಯಾಗಿದ್ದಾನೆ.

ಆಂಧ್ರ ಮೂಲದ ಸೈಯದ್ ಬಾಷ ಬಂಧಿತ ಆರೋಪಿಯಾಗಿದ್ದಾನೆ. ಗಿರಿನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಸೈಯದ್ ಬಾಷಾ ಜೊತೆಗೆ ಈತನ ಕಳ್ಳ ಸ್ನೇಹಿತ ಶೇಖ್ ಅಯೂಬ್ ನನ್ನು ಬಂಧಿಸಿದ್ದಾರೆ.

ದಕ್ಷಿಣ ಬೆಂಗಳೂರಿನ ಗಿರಿನಗರ ಪೊಲೀಸರು ಎರಡು ಚೈನ್ ಸ್ನ್ಯಾಚಿಂಗ್, ಚೈನ್ ಸ್ನ್ಯಾಚಿಂಗ್ ಯತ್ನ ಮತ್ತು ಎರಡು ವಾಹನ ಕಳ್ಳತನವನ್ನು ಬಂಧಿಸುವ ಮೂಲಕ ಭೇದಿಸಿದ್ದಾರೆ. 6 ಲಕ್ಷ ಮೌಲ್ಯದ 10 ಗ್ರಾಂ ಚಿನ್ನಾಭರಣ ಹಾಗೂ ಎರಡು ಬೈಕ್ ವಶಪಡಿಸಿಕೊಂಡಿದ್ದಾರೆ.

ಆಂಧ್ರಪ್ರದೇಶದ ಕಡಪಾ ಮೂಲದ ಸೈಯದ್ ಬಾಷಾ (34) ಮತ್ತು ಶೇಕ್ ಅಯೂಬ್ (32) ಶಂಕಿತ ಆರೋಪಿಗಳು. ಬಾಷಾ ದೇಹದಾರ್ಢ್ಯ ಪಟು. ಸೈಯದ್ ಬಾಷಾ ಆಂಧ್ರಪ್ರದೇಶದಲ್ಲಿ ಬಾಡಿಬಿಲ್ಡಿಂಗ್‌ನಲ್ಲಿ ದೊಡ್ಡ ಹೆಸರು ಮಾಡಿದ್ದ. ಆದರೆ ಐಷಾರಾಮಿ ಬದುಕಿನ ದುರಾಸೆಗೆ ಬಿದ್ದ ಈತ, ಶೇಖ್ ಅಯೂಬ್ ಜೊತೆ ಸೇರಿ ಕಳ್ಳತನವನ್ನ ಕಾಯಕ ಮಾಡಿಕೊಂಡಿದ್ದ.

ಆಂಧ್ರದಲ್ಲಿ ಈ ಬಂಧಿತರ ಮೇಲೆ ಬರೋಬ್ಬರಿ 32 ಪ್ರಕರಣಗಳಿವೆ. ಮಹಿಳೆಯರನ್ನ ಟಾರ್ಗೆಟ್‌ ಮಾಡುತ್ತಿದ್ದ ಐನಾತಿಗಳು, ಬೈಕಲ್ಲಿ ಬಂದು ಸರಗಳ್ಳತನ ಮಾಡಿ ಎಸ್ಕೇಪ್‌ ಆಗುತ್ತಿದ್ದರು.. ಹೀಗಾಗಿ ಆಂಧ್ರ ಪೊಲೀಸರು ಇಬ್ಬರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು.

ಆದರೆ ಜಾಮೀನು ಪಡೆದು ಹೊರಬಂದ ಆರೋಪಿಗಳು  ಸಿಲಿಕಾನ್‌ ಸಿಟಿಗೆ ಎಂಟ್ರಿ ಕೊಟ್ಟು ಕೈಚಳಕ ಶುರುಮಾಡಿದ್ದರು. ಸುಬ್ರಮಣ್ಯಪುರದಲ್ಲಿ 2, ಕಾಟನ್‌ಪೇಟೆ 1,ಜ್ಞಾನಭಾರತಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ 1 ಸರಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದರು. ಹೀಗೆಯೇ ಪ್ರವೃತ್ತಿ ಮುಂದುವರೆಸಿದ್ದ ಆಸಾಮಿಗಳು ಕಳೆದ ತಿಂಗಳ 23ನೇ ತಾರೀಖು ಗಿರಿನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯ ಸರ ಕದ್ದು ತಮ್ಮ ಎಸ್ಕೇಪ್‌ ಆಗಿದ್ದರು.

ಸರ ಕಳೆದುಕೊಂಡ ಮಹಿಳೆ ದೂರಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ್ದ ಪೊಲೀಸರು ಸದ್ಯ ಆರೋಪಿಗಳನ್ನು ಬಂಧಿಸಿ 6 ಲಕ್ಷ ಮೌಲ್ಯದ ಚಿನ್ನದ ಸರಗಳು,ಕೃತ್ಯಕ್ಕೆ ಬಳಸಿದ್ದ ಎರಡು ಬೈಕ್ ಸೀಜ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com