ಮಂಡ್ಯ: ನಾಲೆಯಲ್ಲಿ ಈಜಲು ಹೋಗಿ ಒಂದೇ ಕುಟುಂಬದ ಐವರು ನೀರುಪಾಲು; ಬೇಸಿಗೆ ರಜೆಗೆ ಬಂದವರ ದುರಂತ ಅಂತ್ಯ

ಜಿಲ್ಲೆಯ ವಿ.ಸಿ. ನಾಲೆಯಲ್ಲಿ ಆಟವಾಡಲು ಹೋದ ಒಂದೇ ಕುಟುಂಬದ ಐವರು ನೀರುಪಾಲಾಗಿರುವ ಘಟನೆ ತಾಲೂಕಿನ ದೊಡ್ಡಕೊತ್ತಗೆರೆ ಗ್ರಾಮದ ಬಳಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಮಂಡ್ಯ: ಜಿಲ್ಲೆಯ ವಿ.ಸಿ. ನಾಲೆಯಲ್ಲಿ ಆಟವಾಡಲು ಹೋದ ಒಂದೇ ಕುಟುಂಬದ ಐವರು ನೀರುಪಾಲಾಗಿರುವ ಘಟನೆ ತಾಲೂಕಿನ ದೊಡ್ಡಕೊತ್ತಗೆರೆ ಗ್ರಾಮದ ಬಳಿ ನಡೆದಿದೆ.

ಬೆಂಗಳೂರಿನ ನೀಲಸಂದ್ರ ಬಡಾವಣೆಯ ಅನೀಷಾ ಬೇಗಂ(10), ತಸ್ಮಿಯಾ (22), ಮೆಹತಾಬ್ (10), ಅಶ್ರಕ್ (28), ಅಫೀಕಾ (22) ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ

ಬೇಸಿಗೆ ರಜೆ ಇದ್ದ ಕಾರಣ, ಅವರೆಲ್ಲರೂ ದೊಡ್ಡಕೊತ್ತಗೆರೆಯಲ್ಲಿದ್ದ ತಮ್ಮ ಸಂಬಂಧಿಗಳ ಮನೆಗೆ ಬಂದಿದ್ದರು. ಬಿಸಿಲಿದ್ದ ಕಾರಣ, ಈಜಲು ಕಾಲುವೆಗೆ ತೆರಳಿದ್ದರು.  ದೊಡ್ಡಕೊತ್ತಗೆರೆ ಬಳಿಯ ವಿಶ್ವೇಶ್ವರಯ್ಯ ನಾಲೆ ಬಳಿ ತೆರಳಿ ನಾಲೆಯಲ್ಲಿ ಆಡವಾಡುತ್ತಿದ್ದರು. ಈಜುತ್ತಿದ್ದ ವೇಳೆ ಬಾಲಕನೋರ್ವ ನೀರಿನ ಸೆಳೆತಕ್ಕೆ ಸಿಕ್ಕಿ ಕೊಚ್ಚಿ ಹೋಗುತ್ತಿದ್ದ. ಆತನನ್ನು ರಕ್ಷಿಸಲು ಹೋದ ಉಳಿದ ನಾಲ್ವರೂ ಸಹ ನೀರಿನಲ್ಲಿ ಕೊಚ್ಚಿ ಹೋಗಿ ಮುಳುಗಿ ಸಾವನ್ನಪ್ಪಿದ್ದಾರೆ.

ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ‌ ಸಿಬ್ಬಂದಿ ಮೂವರ ಮೃತ ದೇಹವನ್ನು ಹೊರ ತೆಗೆದಿದೆ. ಇನ್ನಿಬ್ಬರ ಮೃತ ದೇಹಕ್ಕಾಗಿ ಶೋಧ ನಡೆಸುತ್ತಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಬಸರಾಳು ಪೊಲೀಸ್ ಠಾಣೆಯ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com