ವಿಜಯಪುರದಲ್ಲಿ 'ಕೊಲ್ಹಾರ ಕೆನೆ ಮೊಸರು' ಸವಿದ ಪ್ರಧಾನಿ ಮೋದಿ; ಆದರೆ ಅಲ್ಲಿನ ಜಾನುವಾರುಗಳಿಗೆ ಮೇವಿನ ಕೊರತೆ ಸಮಸ್ಯೆ!

ಪ್ರಧಾನಿ ನರೇಂದ್ರ ಮೋದಿ ಶನಿವಾರ ಉತ್ತರ ಕರ್ನಾಟಕದ ಪ್ರಸಿದ್ಧ 'ಕೊರಟಿ-ಕೊಲ್ಹಾರ' ಕೆನೆ ಮೊಸರನ್ನು ಸವಿದಿದ್ದಾರೆ. ಇದು ಬಸವನ- ಬಾಗೇವಾಡಿ ವಿಧಾನಸಭಾ ಕ್ಷೇತ್ರದ ಕೊಲ್ಹಾರ ತಾಲೂಕಿನಿಂದ ಪೂರೈಕೆಯಾಗಿತ್ತು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ವಿಜಯಪುರ: ಪ್ರಧಾನಿ ನರೇಂದ್ರ ಮೋದಿ ಶನಿವಾರ ಉತ್ತರ ಕರ್ನಾಟಕದ ಪ್ರಸಿದ್ಧ 'ಕೊರಟಿ-ಕೊಲ್ಹಾರ' ಕೆನೆ ಮೊಸರನ್ನು ಸವಿದಿದ್ದಾರೆ. ಇದು ಬಸವನ- ಬಾಗೇವಾಡಿ ವಿಧಾನಸಭಾ ಕ್ಷೇತ್ರದ ಕೊಲ್ಹಾರ ತಾಲೂಕಿನಿಂದ ಪೂರೈಕೆಯಾಗಿತ್ತು.

ಕೊಲ್ಹಾರ ತಾಲೂಕಿನಲ್ಲಿ ಜಾನುವಾರಗಳಿಗೆ ಮೇವಿನ ಕೊರತೆಯಿದ್ದು, ಹೈನುಗಾರರು ಎಮ್ಮೆ ಸಾಕಾಣಿಕೆ ಮುಂದುವರೆಸಲು ಸಾಧ್ಯವಾಗುತ್ತಿಲ್ಲ. ಎಮ್ಮೆ ಹಾಲಿನಿಂದ ತಯಾರಿಸಿದ ಮತ್ತು ವಿಶೇಷವಾಗಿ ತಯಾರಿಸಿದ ಮಣ್ಣಿನ ಮಡಕೆಯಲ್ಲಿ ಘನೀಕರಿಸುವ 'ಕೊರಟಿ-ಕೊಲ್ಹಾರ ಮೊಸರು' ಕರ್ನಾಟಕದಲ್ಲಿ ತನ್ನ ವಿಶಿಷ್ಟ ರುಚಿ ಮತ್ತು ಗಟ್ಟಿಗಾಗಿ ಜನಪ್ರಿಯವಾಗಿದೆ.

ಕೊಲ್ಹಾರದಲ್ಲಿ ಈ ಮೊಸರು ಒಂದು ದಶಕದಿಂದೀಚೆಗೆ ಮಾರಾಟವಾಗುತ್ತಿದ್ದು, ಆಧುನಿಕ, ಸಂಸ್ಕರಿಸಿದ ಮೊಸರುಗಳಿಗಿಂತ ಇದು ರುಚಿಕರ ಮತ್ತು ಅಗ್ಗವಾಗಿದೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ರಾಷ್ಟ್ರೀಯ ನಾಯಕರಾದ ಬಿ ಸಿ ಖಂಡೂರಿ, ಬೂಟಾ ಸಿಂಗ್ ಮತ್ತು ಇತ್ತೀಚೆಗೆ ಜೆಪಿ ನಡ್ಡಾ ಮತ್ತು ರಾಜನಾಥ್ ಸಿಂಗ್ ಈ ಮೊಸರಿನ ರುಚಿ ನೋಡಿದ್ದಾರೆ.  ಹುಬ್ಬಳ್ಳಿ-ಹುಮನಾಬಾದ್ ರಾಷ್ಟ್ರೀಯ ಹೆದ್ದಾರಿ-218 ರಲ್ಲಿ ಪ್ರವಾಸಿಗರು ಮಣ್ಣಿನ ಮಡಕೆಗಳಲ್ಲಿ ಮಾರುವ ಮನೆಯಲ್ಲಿ ತಯಾರಿಸಿದ ಮೊಸರಿನ ರುಚಿಯನ್ನು ಪಡೆಯಲು ಇಲ್ಲಿ ನಿಲ್ಲುತ್ತಾರೆ.

“ಪ್ರಧಾನಿ ಅವರಿಗೆ ಉತ್ತರ ಕರ್ನಾಟಕ ಪಾಕಪದ್ಧತಿಯ ಭಾಗವಾಗಿ ನೀಡಲಾಗುವ ಕೊರಟಿ-ಕೋಲ್ಹಾರ ಮೊಸರನ್ನು ಪೂರೈಸಲು ಸ್ಥಳೀಯ ಮುಖಂಡರೊಬ್ಬರು ನನ್ನನ್ನು ಕೇಳಿದರು. ನಾನು 60 ಸಣ್ಣ ಮಣ್ಣಿನ ಮೊಸರುಗಳನ್ನು ಪೂರೈಸಿದೆ, ಅದನ್ನು ಪ್ರಧಾನ ಮಂತ್ರಿಗೆ ಬಡಿಸುವ ಮೊದಲು ಪ್ರಯೋಗಾಲಯದಲ್ಲಿ ಪರೀಕ್ಷಿಸಲಾಯಿತು ಎಂದು ರಾಜಶೇಖರ್ ಮಲ್ಲಿಕಾರ್ಜುನ್ ಗುಡ್ಡದೂರ್ ಪಿಟಿಐಗೆ ತಿಳಿಸಿದರು.

ತಮ್ಮ ಅಂಗಡಿಯ ಮೊಸರಿನ ರುಚಿಯನ್ನು ಪ್ರಧಾನಿ ಸವಿದಿರುವುದರಿಂದ ತುಂಬಾ ಸಂತೋಷವಾಗಿದೆ ಎಂದು ಗುಡ್ಡದೂರಿನ ರಾಷ್ಟ್ರೀಯ ಹೆದ್ದಾರಿ 218ರಲ್ಲಿರುವ ಅಂಗಡಿಯವರೊಬ್ಬರು ಹೇಳುತ್ತಾರೆ.  ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಮೊಸರಿಗೆ ಭಾರೀ ಬೇಡಿಕೆಯಿದೆ ಆದರೆ, ಮೇವಿನ ಕೊರತೆಯಿಂದ ಪೂರೈಕೆ ಸಾಕಷ್ಟಿಲ್ಲ ಎಂದು ಅವರು ವಿಷಾದಿಸಿದರು. ಎಮ್ಮೆ ಉತ್ತಮ ಗುಣಮಟ್ಟದ ಮತ್ತು ಹಾಲು ನೀಡಲು ಮೇವು ಮುಖ್ಯವಾಗಿದೆ. ರೈತರು ತಮ್ಮ ಎಮ್ಮೆಗಳಿಗೆ ಗುಣಮಟ್ಟದ ಮೇವು ಪಡೆಯಲು ಕಷ್ಟಪಡುತ್ತಿದ್ದಾರೆ ಮತ್ತು ಆದ್ದರಿಂದ ಹೆಚ್ಚು ಜಾನುವಾರುಗಳನ್ನು ಸಾಕುತ್ತಿಲ್ಲ ಎಂದು ಅವರು ಹೇಳಿದರು. 

ಜಾನುವಾರುಗಳಿಗೆ ಮೇಯಿಸಲು ಜಾಗವಿಲ್ಲದೇ ರೈತರು ಕಬ್ಬಿನಂತಹ ವಾಣಿಜ್ಯ ಬೆಳೆಗಳನ್ನು ಮಾತ್ರ ಬೆಳೆಯುತ್ತಿದ್ದಾರೆ. ಇದರಿಂದ ಇಲ್ಲಿ ಮೇವಿನ ಕೊರತೆ ಉಂಟಾಗಿದೆ ಎನ್ನುತ್ತಾರೆ ರೈತ ಹನುಮಂತ ನ್ಯಾಮಗೊಂಡ. ಸರಕಾರಿ ಪಶು ವೈದ್ಯಾಧಿಕಾರಿ ಎಂ.ಎನ್.ಪಾಟೀಲ ಮಾತನಾಡಿ, ಕೊಲ್ಹಾರ ಪಟ್ಟಣದಲ್ಲಿ 1,805 ಎಮ್ಮೆಗಳಿದ್ದರೆ, ಕೊಲ್ಹಾರ ತಾಲೂಕಿನಲ್ಲಿ ಸುಮಾರು 3 ಸಾವಿರ ಎಮ್ಮೆಗಳನ್ನು ಸಾಕಲಾಗುತ್ತಿದೆ ಎಂದು ತಿಳಿಸಿದರು. 

ಕರ್ನಾಟಕ ಹಾಲು ಮಹಾಮಂಡಳವು (ಕೆಎಂಎಫ್) 'ಕೊಲ್ಹಾರ್ ಮೊಸರು' ಅನ್ನು ಮಾರುಕಟ್ಟೆಗೆ ತರುತ್ತಿದೆ. ಈ ಮೊಸರು ರುಚಿಯಾಗಲು ಇನ್ನೊಂದು ಕಾರಣವೆಂದರೆ ಕೊಲ್ಹಾರದ ಕುಂಬಾರ ಕುಟುಂಬಗಳು ತಯಾರಿಸಿದ ಮಣ್ಣಿನ ಮಡಕೆಗಳ ಗುಣಮಟ್ಟ. ಹಾಲಿನಿಂದ ನೀರು ಹೀರಿಕೊಂಡು ಮೊಸರಿನಲ್ಲಿ ಗಟ್ಟಿ ಉಳಿಯುವ ರೀತಿಯಲ್ಲಿ ಇದನ್ನು ಮಣ್ಣಿನಿಂದ ತಯಾರಿಸಲಾಗುತ್ತದೆ. ಹಲವಾರು ತಲೆಮಾರುಗಳಿಂದ ವಿಶೇಷ ಗುಣಮಟ್ಟದ ಮಣ್ಣಿನ ಮಡಕೆಗಳನ್ನು ತಯಾರಿಸುತ್ತಿರುವ ಹಲವಾರು ಕುಂಬಾರ ಕುಟುಂಬಗಳು ಇಲ್ಲಿವೆ. 12ನೇ ವಯಸ್ಸಿನಿಂದ ಮೊಸರಿಗಾಗಿ ಈ ಮಡಕೆಗಳನ್ನು ತಯಾರಿಸುತ್ತಿದ್ದೇನೆ, ಈಗ ಮೊಮ್ಮಕ್ಕಳು ಈ ಸಂಪ್ರದಾಯವನ್ನು ಮುಂದುವರಿಸುತ್ತಿದ್ದಾರೆ ಎಂದು 100 ವರ್ಷದ ಬಸವ್ವ ಕುಮ್ಹಾರ್ ಹೇಳಿದರು.

ಮಣ್ಣಿನ ಮಡಕೆಗಳ ಗುಣಮಟ್ಟದಲ್ಲಿ ಇನ್ನೂ ರಾಜಿಯಾಗದಿದ್ದರೂ ಹೆಚ್ಚಾಗುತ್ತಿರುವ ಮೇವಿನ ಕೊರತೆ ನೀಗಿಸಲು ಸ್ಥಳೀಯ ನಾಯಕರು ಹಾಗೂ ಆಡಳಿತ ಮುಂದಾಗದಿದ್ದರೆ ಈ ಪುಟ್ಟ ಊರಿನಲ್ಲಿ 'ಮನೆಯಲ್ಲಿಯೇ  ತಯಾರಿಸಿದ ಕೊರಟಿ-ಕೊಲ್ಹಾರ ಮೊಸರು' ವ್ಯಾಪಾರವನ್ನು ನಾಶಪಡಿಸುವ ಅಪಾಯವಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com