ಣಿಪುರ ಮೈತೇಯಿ ಸಮುದಾಯ ಬೆಂಗಳೂರು
ಣಿಪುರ ಮೈತೇಯಿ ಸಮುದಾಯ ಬೆಂಗಳೂರು

ಹಿಂಸಾಚಾರ ಪೀಡಿತ ಮಣಿಪುರಕ್ಕೆ ಬೆಂಗಳೂರಿನಿಂದ ಪರಿಹಾರ ಸಾಮಾಗ್ರಿಗಳ ರವಾನೆ!

ಜನಾಂಗೀಯ ಘರ್ಷಣೆಯ ಕೇಂದ್ರ ಬಿಂದುವಾಗಿರುವ ಮಣಿಪುರದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ವಿದ್ಯಾರ್ಥಿಗಳು ಹಾಗೂ ಸಂಬಂಧಿಕರಿಗೆ ಮಣಿಪುರ ಮೈತೇಯಿ ಅಸೋಸಿಯೇಷನ್ ಬೆಂಗಳೂರು ಪರಿಹಾರ ಸಾಮಾಗ್ರಿಗಳನ್ನು ಸಂಗ್ರಹಿಸಿ, ರವಾನಿಸುವ ಕೆಲಸ ಮಾಡುತ್ತಿದೆ.
Published on

ಬೆಂಗಳೂರು: ಜನಾಂಗೀಯ ಘರ್ಷಣೆಯ ಕೇಂದ್ರ ಬಿಂದುವಾಗಿರುವ ಮಣಿಪುರದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ವಿದ್ಯಾರ್ಥಿಗಳು ಹಾಗೂ ಸಂಬಂಧಿಕರಿಗೆ ಮಣಿಪುರ ಮೈತೇಯಿ ಅಸೋಸಿಯೇಷನ್ ಬೆಂಗಳೂರು ಪರಿಹಾರ ಸಾಮಾಗ್ರಿಗಳನ್ನು ಸಂಗ್ರಹಿಸಿ, ರವಾನಿಸುವ ಕೆಲಸ ಮಾಡುತ್ತಿದೆ.

ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಜನರು ಮೂಲಭೂತ ಅವಶ್ಯಕತೆಗಳಿಗಾಗಿ ಹೆಣಗಾಡುತ್ತಿದೆ. ಈ ಹಿನ್ನೆಲೆಯಲ್ಲಿ ಮಣಿಪುರ ಮೈತೇಯಿ ಸಮುದಾಯ ಬೆಂಗಳೂರು (ಎಂಎಂಎಬಿ) ಮಣಿಪುರಕ್ಕೆ ಪರಿಹಾರ ಸಾಮಗ್ರಿಗಳನ್ನು ರವಾನಿಸುತ್ತಿದ್ದು, ಪರಿಹಾರ ಸಾಮಾಗ್ರಿ ವಿತರಣೆ ಜೊತೆಗೆ ಭಾವನಾತ್ಮಕವಾಗಿ ಜೊತೆ ನಿಲ್ಲುವ ಧೈರ್ಯವನ್ನು ನೀಡುತ್ತಿದೆ.

ಸಂಘಟನೆಯು ಇದೂವರೆಗೆ ಎಣ್ಣೆ ಪ್ಯಾಕೆಟ್, ತರಕಾರಿ, ಅಕ್ಕಿ, ಬೇಳೆ, ಹಾಲು, ಬಿಸ್ಕತ್ ಸೇರಿದಂತೆ 1,400 ಕೆಜಿ ವಸ್ತುಗಳನ್ನು ರವಾನಿಸಿದೆ. ಇದರ ಜೊತೆಗೆ ಇತರ ಅಗತ್ಯ ವಸ್ತುಗಳಾದ ಒಆರ್‌ಎಸ್, ಸ್ಯಾನಿಟರಿ ಪ್ಯಾಡ್‌ಗಳು ಮತ್ತು ಪ್ರಥಮ ಚಿಕಿತ್ಸಾ ಕಿಟ್‌ಗಳನ್ನು ಕೂಡ ರವಾನಿಸಿದೆ.

ಮಣಿಪುರದಲ್ಲಿ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಬಂಧಿಸಲಾಗಿದೆ. ಹೀಗಾಗಿ ಸ್ಥಳೀಯ ನಿವಾಸಿಗಳು ಅಗತ್ಯ ವಸ್ತುಗಳ ಖರೀದಿಗೆ ಸಮಸ್ಯೆಗಳ ಎದುರಿಸುತ್ತಿದ್ದಾರೆ, ಅಗತ್ಯ ವಸ್ತುಗಳ ಬೆಲೆ ಕೂಡ ಗಗನಕ್ಕೇರಿದೆ. 50,000ಕ್ಕೂ ಹೆಚ್ಚು ಸ್ಥಳಾಂತರಗೊಂಡ ಜನರು 40-45 ಪರಿಹಾರ ಶಿಬಿರಗಳಲ್ಲಿ ತಂಗಿದ್ದಾರೆಂದು ಅಸೋಸಿಯೇಷನ್ ಸದಸ್ಯರಾಗಿರುವ ರಂಜನಾ ಥಿಯಂ ಅವರು ಹೇಳಿದ್ದಾರೆ.

ಮಣಿಪುರ ಮೈತೇಯಿ ಅಸೋಸಿಯೇಷನ್ ಬೆಂಗಳೂರು ವಕ್ತಾರ ಧನೇಶ್ವರ್ ಯುಮ್ನಮ್ ಅವರು ಮಾತನಾಡಿ, ಪರಿಹಾರ ಶಿಬಿರಗಳಲ್ಲಿ ಕಳಪೆ ನೈರ್ಮಲ್ಯ ಪರಿಸ್ಥಿತಿಗಳಿಂದ ಕೂಡಿದೆ, ಅಲ್ಲಿ ಆರೋಗ್ಯ ಆರೈಕೆ ಸೌಲಭ್ಯಗಳಿಲ್ಲ. ಕುಟುಂಬ ಸದಸ್ಯರ ಕಳೆದುಕೊಂಡವರಿಗೆ ಮಾನಸಿಕ ಸ್ಥೈರ್ಯ ಹೆಚ್ಚಿಸಲು ಮನೋವೈದ್ಯಕೀಯ ಸೌಲಭ್ಯವೂ ಇಲ್ಲ. ಶಿಕ್ಷಣಗಳು ಸ್ಥಗಿತಗೊಂಡಿದೆ ಎಂದು ತಿಳಿಸಿದ್ದಾರೆ.

ಎರಡೂ ಜನಾಂಗದ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜವನ್ಯವನ್ನು ನಮ್ಮ ಸಂಘವು ಖಂಡಿಸುತ್ತದೆ. ರಾಜ್ಯದಲ್ಲಿ ಶಾಂತಿ ಪುನರ್ ಸ್ಥಾಪಿಸುವಂತೆ ಆಗ್ರಹಿಸುತ್ತಿದ್ದೇವೆ. ಕಳೆದ ಹಲವು ವರ್ಷಗಳಿಂದ ರಾಜ್ಯ ಸಾಧಿಸಿರುವ ಪ್ರಗತಿ ಕಣ್ಮರೆಯಾಗಿದೆ. ಮಣಿಪುರವನ್ನು ಮರುನಿರ್ಮಾಣ ಮಾಡಲು ಇತರೆ ಸರ್ಕಾರಗಳ ಅಗತ್ಯವಿದೆ. ರಾಜ್ಯಕ್ಕೆ ಭಾರಿ ಹಿನ್ನಡೆಯಾಗಿದೆ. ಎಲ್ಲಾ ನಾಗರಿಕರ ಹಕ್ಕುಗಳನ್ನು ಮರುಸ್ಥಾಪಿಸಬೇಕು ಎಂದು ಆಗ್ರಹಿಸಿದ್ದಾರೆ.

ನಗರದ ಮಣಿಪುರದ ವಿದ್ಯಾರ್ಥಿಗಳು ಹಾಸ್ಟೆಲ್‌ಗಳಲ್ಲಿ ಮತ್ತು ಪೇಯಿಂಗ್ ಗೆಸ್ಟ್ ವಸತಿಗಳಲ್ಲಿ ವಾಸಿಸುತ್ತಿದ್ದಾರೆ ಮತ್ತು ಬ್ಯಾಂಕ್ ವಹಿವಾಟುಗಳನ್ನು ಮಾಡಲು ಅವರಿಗೆ ಸಾಧ್ಯವಾಗುತ್ತಿಲ್ಲ. ತಮ್ಮ ಕುಟುಂಬಸ್ಥರ ಕುರಿತು ಚಿಂತಿತರಾಗಿದ್ದಾರೆ. ಹೊಸ ಶೈಕ್ಷಣಿಕ ವರ್ಷ ಪ್ರಾರಂಭವಾಗಿದ್ದರೂ ಹಲವರು ಶಾಲೆ-ಕಾಲೇಜುಗಳಿಗೆ ಮರಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com