ಖಾತಾ ಬದಲಾವಣೆಗಾಗಿ ಲಂಚ ಸ್ವೀಕಾರ: ಲೋಕಾಯುಕ್ತ ಪೊಲೀಸರಿಂದ ಇಬ್ಬರ ಬಂಧನ; ಓರ್ವ ಪರಾರಿ

ಬನಶಂಕರಿಯ ಕರಿಸಂದ್ರದ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇಬ್ಬರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸಿಬ್ಬಂದಿ ಲಂಚ ಪಡೆಯುತ್ತಿದ್ದಾಗ ಕರ್ನಾಟಕ ಲೋಕಾಯುಕ್ತ ಪೊಲೀಸರಿಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಪ್ರಮುಖ ಆರೋಪಿ ರಾಜಗೋಪಾಲ್ ತಲೆಮರೆಸಿಕೊಂಡಿದ್ದಾನೆ
ಬಂಧಿತ ಆರೋಪಿಗಳು
ಬಂಧಿತ ಆರೋಪಿಗಳು
Updated on

ಬೆಂಗಳೂರು: ಬನಶಂಕರಿಯ ಕರಿಸಂದ್ರದ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇಬ್ಬರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸಿಬ್ಬಂದಿ ಲಂಚ ಪಡೆಯುತ್ತಿದ್ದಾಗ ಕರ್ನಾಟಕ ಲೋಕಾಯುಕ್ತ ಪೊಲೀಸರಿಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಪ್ರಮುಖ ಆರೋಪಿ ರಾಜಗೋಪಾಲ್ ತಲೆಮರೆಸಿಕೊಂಡಿದ್ದಾನೆ.

1 ಲಕ್ಷ ರೂ. ಲಂಚ  ಸ್ವೀಕರಿಸುವಾಗ ಬಿಬಿಎಂಪಿ  ಕಂದಾಯ ಸಿಬ್ಬಂದಿ ಲೋಕಾ ಬಲೆಗೆ ಬಿದಿದ್ದು, ಇಬ್ಬರನ್ನು ಬಂಧಿಸಲಾಗಿದ್ದು, ಒಬ್ಬ ಪರಾರಿಯಾಗಿದ್ದಾರೆ. ಬಿಬಿಎಂಪಿ ವಾರ್ಡ್ ನಂ.166 ರ ರೆವೆನ್ಯೂ ಇನ್ಸ್ ಪೆಕ್ಟರ್ ರಾಜಗೋಪಾಲ್ ಪರಾರಿಯಾಗಿದ್ದು, ಎಫ್​ಡಿಎ ರಾಘವೇಂದ್ರ, ಡಾಟಾ ಎಂಟ್ರಿ ಆಪರೇಟರ್​ ಸುರೇಶ್ ದತ್ತಾರನ್ನು ಅಧಿಕಾರಿಗಳು ಬಂಧಿಸಿದ್ದಾರೆ.

ಖಾತಾ ಬದಲಾವಣೆ ಮಾಡಿಕೊಡಲು ಮಾಚೋಹಳ್ಳಿಯ ಅರುಣ್ ಎಂಬಾತನಿಂದ 1 ಲಕ್ಷದ 25 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಮುಂಗಡವಾಗಿ 1 ಲಕ್ಷ ಹಣ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ. ಭ್ರಷ್ಟಾಚಾರ ತಡೆ ಕಾಯ್ದೆಯಡಿ ಕೇಸ್ ದಾಖಲಿಸಿ ಆರೋಪಿಗಳಿಬ್ಬರ ಬಂಧನ ಮಾಡಲಾಗಿದೆ.

ಪೊಲೀಸರ ಪ್ರಕಾರ, ಮಾಚೋಹಳ್ಳಿಯ ಅರುಣ್ ಕುಮಾರ್ ಕರಿಸಂದ್ರದಲ್ಲಿರುವ ಬಿಬಿಎಂಪಿ ವಾರ್ಡ್ ಕಚೇರಿಯಲ್ಲಿ ಖಾತಾ ವರ್ಗಾವಣೆಗೆ ಅರ್ಜಿ ಸಲ್ಲಿಸಿದರು. ಕಂದಾಯ ನಿರೀಕ್ಷಕ ರಾಜಗೋಪಾಲ್ ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಅರುಣ್ ಕುಮಾರ್ ಅವರಿಂದ ಹಣ ವಸೂಲಿ ಮಾಡಲು ತನ್ನ ಇಬ್ಬರು ಸಹೋದ್ಯೋಗಿಗಳನ್ನು ಕಳುಹಿಸಿದ್ದಾರೆ.

ರಾಜಗೋಪಾಲ್ ಪರವಾಗಿ ಲಂಚ ವಸೂಲಿ ಮಾಡುತ್ತಿದ್ದ ರಾಘವೇಂದ್ರ ಅವರನ್ನು ಲೋಕಾಯುಕ್ತರು ಅರುಣ್ ಕುಮಾರ್ ಸಂಪರ್ಕಿಸಿದಾಗ ಬಂಧಿಸಿದ್ದರು. ಅವರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ 1988 ರ ಅಡಿಯಲ್ಲಿ ಸೆಕ್ಷನ್ 7 (ಎ) ಮತ್ತು 7 (ಬಿ) ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com