ಬೆಂಗಳೂರು: ಜಿಕೆವಿಕೆ ಆವರಣದಲ್ಲಿ ಕೃಷಿ ವಿಜ್ಞಾನ ವಸ್ತು ಸಂಗ್ರಹಾಲಯ ಪ್ರದರ್ಶನ

ಜಿಕೆವಿಕೆ ಆವರಣದಲ್ಲಿ ನಿರ್ಮಿಸಿರುವ ಕೃಷಿ ವಿಜ್ಞಾನಗಳ ವಸ್ತು ಸಂಗ್ರಹಾಲಯಕ್ಕೆ ಈಗಾಗಾಲೇ ಹಲವು ಶಾಲೆಗಳಿಂದ ಕರೆಗಳು ಬರಲು ಆರಂಭವಾಗಿದ್ದು, ಬುಕ್ಕಿಂಗ್ ಸ್ಲಾಟ್ ಗಳಿಗಾಗಿ ವಿಚಾರಣೆ ನಡೆಯುತ್ತಿದೆ.
ಜಿಕೆವಿಕೆ ಕ್ಯಾಂಪಸ್ ನಲ್ಲಿ ಮ್ಯೂಸಿಯಂ ವೀಕ್ಷಿಸುತ್ತಿರುವ ಚಲುವರಾಯಸ್ವಾಮಿ
ಜಿಕೆವಿಕೆ ಕ್ಯಾಂಪಸ್ ನಲ್ಲಿ ಮ್ಯೂಸಿಯಂ ವೀಕ್ಷಿಸುತ್ತಿರುವ ಚಲುವರಾಯಸ್ವಾಮಿ
Updated on

ಬೆಂಗಳೂರು: ಜಿಕೆವಿಕೆ ಆವರಣದಲ್ಲಿ ನಿರ್ಮಿಸಿರುವ ಕೃಷಿ ವಿಜ್ಞಾನಗಳ ವಸ್ತು ಸಂಗ್ರಹಾಲಯಕ್ಕೆ ಈಗಾಗಾಲೇ ಹಲವು ಶಾಲೆಗಳಿಂದ ಕರೆಗಳು ಬರಲು ಆರಂಭವಾಗಿದ್ದು, ಬುಕ್ಕಿಂಗ್ ಸ್ಲಾಟ್ ಗಳಿಗಾಗಿ ವಿಚಾರಣೆ ನಡೆಯುತ್ತಿದೆ.

ವಸ್ತುಸಂಗ್ರಹಾಲಯವು ಕರ್ನಾಟಕದಲ್ಲಿ ಒಂದು ವಿಶೇಷ ರೀತಿಯದ್ದಾಗಿದ್ದು, ಕೃಷಿಗೆ ಮೀಸಲಾಗಿದೆ. ಇಲ್ಲಿಯವರೆಗೆ, ಅಧಿಕಾರಿಗಳು ಹತ್ತಕ್ಕೂ  ಹೆಚ್ಚು ಕರೆಗಳನ್ನು ಸ್ವೀಕರಿಸಿದ್ದಾರೆ. 923 ಎಕರೆ ಜಾಗದಲ್ಲಿಕಳೆದ 10 ವರ್ಷಗಳಿಂದ ನಿರ್ಮಾಣವಾಗುತ್ತಿರುವ ವಸ್ತು ಸಂಗ್ರಹಾಲಯವನ್ನು ಗುರುವಾರ ಕೃಷಿ ಸಚಿವ ಎನ್ ಚೆಲುವರಾಯಸ್ವಾಮಿ ಉದ್ಘಾಟಿಸಿದರು.

ವಸ್ತುಸಂಗ್ರಹಾಲಯವು ರೈತರಿಗೆ, ವಿದ್ಯಾರ್ಥಿಗಳು ಮತ್ತು ಪ್ರವಾಸಿಗರಿಗೆ ದೃಶ್ಯ ಮತ್ತು ಶ್ರವ್ಯ ಮಾದರಿಯಲ್ಲಿ ಪ್ರದರ್ಶನಗಳ ಮೂಲಕ ಶಿಕ್ಷಣವನ್ನು ನೀಡುತ್ತದೆ. ಆರು ದೊಡ್ಡ ಪ್ರದರ್ಶನ ಸಭಾಂಗಣಗಳು ದೇಶದ ಕೃಷಿಯ ವಿಕಾಸವನ್ನು ವಿವರಿಸುವ ಲೈವ್ ಮಾದರಿಗಳು ಮತ್ತು ಡೈನಾಮಿಕ್ ತಂತ್ರಜ್ಞಾನವನ್ನು ಪ್ರದರ್ಶಿಸುತ್ತವೆ.

ವಸ್ತು ಸಂಗ್ರಹಾಲಯವು ವಿಭಿನ್ನ ತಂತ್ರಜ್ಞಾನದಿಂದ ನಿರ್ಮಾಣಮಾಡಲಾಗಿದೆ . ಕಳೆದ ಕೆಲವು  ವರ್ಷಗಳಲ್ಲಿ ನಡೆದ ಕೃಷಿಯ ವಿಕಾಸವನ್ನು ತೋರಿಸುತ್ತದೆ. ಸಂದರ್ಶಕರಿಗೆ ಕೃಷಿ ಪರಿಕಲ್ಪನೆಗಳನ್ನು ವಿವರವಾಗಿ ವಿವರಿಸುವ ಹಲವಾರು ವಿಜ್ಞಾನಿಗಳು ಇದ್ದಾರೆ. ವಿವಿಧ ಸ್ಟಾಲ್‌ಗಳಲ್ಲಿ ಅಳವಡಿಸಲಾಗಿರುವ ‘ಟಚ್‌ಸ್ಕ್ರೀನ್ ಟೆಕ್’ ಮೂಲಕ ಮಾಹಿತಿ ಪಡೆಯಬಹುದು ಎಂದು ಕೃಷಿ ವಿಜ್ಞಾನ ವಸ್ತುಸಂಗ್ರಹಾಲಯದ ಮುಖ್ಯಸ್ಥ ಕೆ.ಪಿ.ರಘು ತಿಳಿಸಿದರು.

‘ಅಂತಾರಾಷ್ಟ್ರೀಯ ಧಾನ್ಯ ವರ್ಷವನ್ನು ಉತ್ತೇಜಿಸಲು, ಸಿರಿಧಾನ್ಯ  ವಿಧಗಳು, ಅವುಗಳ ವಿಕಸನ ಮತ್ತು ಪ್ರಯೋಜನಗಳನ್ನು ಅರ್ಥಮಾಡಿಕೊಳ್ಳಲು ಸಂಪೂರ್ಣ ಪ್ರದರ್ಶನವನ್ನು ಮತ್ತು ಕೃಷಿ ಮಾರುಕಟ್ಟೆಯನ್ನು ಉತ್ತೇಜಿಸಲು ಫೋಟೋ ಗ್ಯಾಲರಿಯನ್ನು ಸ್ಥಾಪಿಸಲಾಗಿದೆ.

ಶಾಲಾ ಆಡಳಿತಗಳು ತಮ್ಮ ವಿದ್ಯಾರ್ಥಿಗಳು ಕೃಷಿಯ ಬಗ್ಗೆ ಕಲಿಯಬೇಕೆಂದು ಬಯಸುತ್ತಿರುವುದನ್ನು ನೋಡಿ ನಮಗೆ ತುಂಬಾ ಸಂತೋಷವಾಗಿದೆ. ಇಂದು, 300 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕ್ಯಾಂಪಸ್‌ಗೆ ಭೇಟಿ ನೀಡಿದ್ದರು , ಅವರು ನಿರಂತರವಾಗಿ ನಮಗೆ ಪ್ರಶ್ನೆ ಕೇಳುತ್ತಿದ್ದಾರೆ  ಎಂದು ಪ್ರಸಾದ್ ಹೇಳಿದರು.

ಪ್ರದರ್ಶನ ಕೊಠಡಿಗಳಲ್ಲಿ ಎಪಿಎಂಸಿ ಮಾರುಕಟ್ಟೆಗಳ ಕಾರ್ಯನಿರ್ವಹಣೆ ಮತ್ತು ಪಶುಸಂಗೋಪನೆ, ಕೋಳಿ ಮತ್ತು ರೇಷ್ಮೆ ಮುಂತಾದ ಕಿರು ಉದ್ಯೋಗಗಳಂತಹ ವಿವಿಧ ವಿಷಯಗಳನ್ನು ಹೈಲೈಟ್ ಮಾಡಲಾಗುತ್ತದೆ. ಅರಣ್ಯಗಳು, ನವೀಕರಣ ಶಕ್ತಿ ಮತ್ತು ಹವಾಮಾನ ಬದಲಾವಣೆಯ ಸಂಬಂಧ ಪ್ರದರ್ಶನಗಳು ಸಹ ಇರುತ್ತವೆ. ವಸ್ತುಸಂಗ್ರಹಾಲಯಕ್ಕೆ ಪ್ರವೇಶ ಉಚಿತವಾಗಿದೆ.  ಇದು ವಾರದ ದಿನಗಳಲ್ಲಿ 9 ರಿಂದ 4 ರವರೆಗೆ ತೆರೆದಿರುತ್ತದೆ ಮತ್ತು ಶನಿವಾರದಂದು 9 ಮತ್ತು 12.30 ರವರೆಗೆ ತೆರೆದಿರುತ್ತದೆ ಎಂದು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com