ಕೆಂಪೇಗೌಡ ವಿಮಾನ ನಿಲ್ದಾಣ: 12 ನಿಮಿಷ ಮೊದಲೇ, 6 ಪ್ರಯಾಣಿಕರ ಬಿಟ್ಟು ಹೋದ ಇಂಡಿಗೋ ವಿಮಾನ

ಬೆಂಗಳೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಇಂಡಿಗೋ ವಿಮಾನವೊಂದು 12 ನಿಮಿಷ ಮೊದಲೇ, 6 ಪ್ರಯಾಣಿಕರ ಬಿಟ್ಟು ಹೋದ ಘಟನೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದ್ದು, ತಡವಾಗಿ ಈ ಘಟನೆ ಬೆಳಕಿಗೆ ಬಂದಿದೆ.
ಇಂಡಿಗೋ ವಿಮಾನ
ಇಂಡಿಗೋ ವಿಮಾನ

ಬೆಂಗಳೂರು: ಬೆಂಗಳೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಇಂಡಿಗೋ ವಿಮಾನವೊಂದು 12 ನಿಮಿಷ ಮೊದಲೇ, 6 ಪ್ರಯಾಣಿಕರ ಬಿಟ್ಟು ಹೋದ ಘಟನೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದ್ದು, ತಡವಾಗಿ ಈ ಘಟನೆ ಬೆಳಕಿಗೆ ಬಂದಿದೆ.

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕಳೆದ ಶುಕ್ರವಾರ (ಆಗಸ್ಟ್ 4) ದಂದು ಮಂಗಳೂರಿಗೆ ತೆರಳ ಬೇಕಿದ್ದ ಇಂಡಿಗೋ ವಿಮಾನವೂ ನಿಗದಿತ ಸಮಯಕ್ಕಿಂತ 12 ನಿಮಿಷ ಮೊದಲೇ ಹಾರಾಟ ಮಾಡಿದ್ದರ ಪರಿಣಾಮವಾಗಿ 6 ಜನ ಪ್ರಯಾಣಿಕರಿಗೆ ವಿಮಾನ ತಪ್ಪಿದ್ದು, ಮಾಡದ ತಪ್ಪಿಗೆ ಸತತ 6 ಗಂಟೆಗಳ ಕಾಲ ವಿಮಾನ ನಿಲ್ದಾಣದಲ್ಲಿಯೇ ಕಾದು ಕುಳಿತಿದ್ದಾರೆ.

ಬೆಂಗಳೂರಿನಿಂದ ಮಂಗಳೂರಿಗೆ ಹೋಗುತ್ತಿದ್ದ ಇಂಡಿಗೋ 6E 6162 ವಿಮಾನವೂ ಶುಕ್ರವಾರ ಮಧ್ಯಾಹ್ನ 2.55ಕ್ಕೆ ಹಾರಾಟ ಆರಂಭಿಸಬೇಕಿದ್ದು, ನಿಗದಿತ ಅವಧಿಗೂ ಮುನ್ನ, ಅಂದರೆ ಮಧ್ಯಾಹ್ನ 2.43ಕ್ಕೆ ಹೊರಟ ಪರಿಣಾಮದಿಂದಾಗಿ 6 ಜನ ಪ್ರಯಾಣಿಕರಿಗೆ ವಿಮಾನ ಮಿಸ್ ಆಗಿದ್ದು, ವಿಮಾನ  ಹತ್ತಲು ತೆರಳುವ ವೇಳೆಯಲ್ಲಿ ಎಲ್ಲ ಬಾಗಿಲುಗಳು ಮುಚ್ಚಿವೆ ಎಂದು ತಿಳಿದು ಬಂದಿದೆ.

ಇನ್ನು ಪ್ರಯಾಣಿಕರ ಆರೋಪವನ್ನು ಅಲೆಗೇಳೆದಿರುವ ಇಂಡಿಗೋ ವಿಮಾನಯಾನ ಸಂಸ್ಥೆಯೂ 'ವಿಮಾನಕ್ಕೆ ಹತ್ತುವ ಬಾಗಿಲುಗಳು ಮಧ್ಯಾಹ್ನ 2.43ಕ್ಕೆ ಮುಚ್ಚಿದ್ದು, ನಿಲ್ದಾಣದಿಂದ 2.57ಕ್ಕೆ ವಿಮಾನ ಹಾರಾಟ ಆರಂಭಿಸಿದೆ. ತೊಂದರೆಗೊಳ್ಳಪಟ್ಟ ಪ್ರಯಾಣಿಕರಿಗೆ ಮತ್ತೊಂದು ವಿಮಾನದ ಮೂಲಕ ಮಂಗಳೂರು ತಲುಪಿಸುವ ವ್ಯವಸ್ಥೆ ಮಾಡಲಾಗಿತ್ತು' ಎಂದು ಆರೋಪದ ವಿರುದ್ಧ ಪ್ರತಿಕ್ರಿಯೆ ನೀಡಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com