ರಾಜೀನಾಮೆ ನೀಡಿದ ಗ್ರಾ.ಪಂ. ಸದಸ್ಯರು
ರಾಜೀನಾಮೆ ನೀಡಿದ ಗ್ರಾ.ಪಂ. ಸದಸ್ಯರು

ಸಿಂಧನೂರು ಗ್ರಾಮ ಪಂಚಾಯತಿಗೂ ಕಾಲಿಟ್ಟ ಧರ್ಮ ದಂಗಲ್: ಮುಸ್ಲಿಂ ವ್ಯಕ್ತಿಗೆ ಅಧ್ಯಕ್ಷ ಸ್ಥಾನ ನೀಡಿದ್ದಕ್ಕೆ 13 ಸದಸ್ಯರ ರಾಜೀನಾಮೆ!

ಮುಸ್ಲಿಂ ಸಮುದಾಯದ ವ್ಯಕ್ತಿಗೆ  ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನ ನೀಡಿದ್ದಕ್ಕೆ 13  ಗ್ರಾ.ಪಂ. ಸದಸ್ಯರು ಏಕಕಾಲಕ್ಕೆ ರಾಜೀನಾಮೆ ನೀಡಿದ್ದಾರೆ.

ರಾಯಚೂರು: ಮುಸ್ಲಿಂ ಸಮುದಾಯದ ವ್ಯಕ್ತಿಗೆ  ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನ ನೀಡಿದ್ದಕ್ಕೆ 13  ಗ್ರಾ.ಪಂ. ಸದಸ್ಯರು ಏಕಕಾಲಕ್ಕೆ ರಾಜೀನಾಮೆ ನೀಡಿದ್ದಾರೆ.

ಸಿಂಧನೂರು ತಾಲೂಕಿನ ಪುನರ್ವಸತಿ ಶಿಬಿರ ಗ್ರಾ.ಪಂ.ನ 13 ಗ್ರಾ.ಪಂ.ಸದಸ್ಯರು ತಮ್ಮ ಆಯ್ಕೆಯ ವ್ಯಕ್ತಿ ಗ್ರಾ.ಪಂ.ಗೆ ಅಧ್ಯಕ್ಷರಾಗಲು ಸಾಧ್ಯವಾಗದ ಕಾರಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.  ಗ್ರಾ.ಪಂ 2ನೇ ಅವಧಿಗೆ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿ‌ದ್ದು, ಕಾಂಗ್ರೆಸ್‌ ಬೆಂಬಲಿತ, ಮುಸ್ಲಿಂ ಸಮುದಾಯದವರಾದ ಎ. ರಹೆಮದ್ ಪಾಷಾ ಅಧ್ಯಕ್ಷರಾಗಿರುವುದನ್ನು ವಿರೋಧಿಸಿ 13 ಸದಸ್ಯರು ರಾಜೀನಾಮೆ ನೀಡಿದ್ದಾರೆ.

ಗ್ರಾ.ಪಂನಲ್ಲಿ ಒಟ್ಟು 38 ಸದಸ್ಯರಿದ್ದಾರೆ. ಆ ಪೈಕಿ 13 ಸದಸ್ಯರು ಅಧ್ಯಕ್ಷರ ಆಯ್ಕೆ ವಿರೋಧಿಸಿ ರಾಜೀನಾಮೆ ನೀಡಲು ಗ್ರಾ.ಪಂ ಕಚೇರಿಗೆ ಶುಕ್ರವಾರ ಬಂದಿದ್ದರು. ಅಧ್ಯಕ್ಷರು ಇಲ್ಲದಿರುವುದರಿಂದ ಪಂಚಾಯಿತಿಯ ಕಚೇರಿಯಲ್ಲಿ ರಾಜೀನಾಮೆ ಪತ್ರಗಳನ್ನು ಸಲ್ಲಿಸಿದರು. ಎಂದು ಸಿಂಧನೂರು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್‌ ತಿಳಿಸಿದ್ದಾರೆ.

ಗ್ರಾ.ಪಂ.ಅಧ್ಯಕ್ಷ ಸ್ಥಾನಕ್ಕೆ ಇತ್ತೀಚೆಗೆ ಚುನಾವಣೆ ನಡೆದಿತ್ತು. ಹುದ್ದೆ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ 3 ಮಂದಿ ಸ್ಪರ್ಧಿಸಿದ್ದು, ಕಾಂಗ್ರೆಸ್ ಪಕ್ಷದ ಅನುಯಾಯಿ ರಹೇಮತ್ ಪಾಷಾ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಇದನ್ನು ವಿರೋಧಿಸಿ 13 ಸದಸ್ಯರು ರಾಜೀನಾಮೆ ಸಲ್ಲಿಸಿದ್ದಾರೆ. ವಿಧಾನದ ಪ್ರಕಾರ ಯಾವುದೇ ಸದಸ್ಯರು ರಾಜೀನಾಮೆ ನೀಡಲು ಬಯಸಿದರೆ ಅದನ್ನು ಅಧ್ಯಕ್ಷರಿಗೆ ಹಸ್ತಾಂತರಿಸಬೇಕು ಎಂದು ಚಂದ್ರಶೇಖರ್ ಹೇಳಿದರು. ಅಧ್ಯಕ್ಷರು ಬಾರದ ಕಾರಣ 13 ಸದಸ್ಯರು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ರಾಜೀನಾಮೆ ಪತ್ರ ನೀಡಿದ್ದಾರೆ.

ಮೂಲಗಳ ಪ್ರಕಾರ, ಕೆಲವು ದಿನಗಳ ಹಿಂದೆ ಗ್ರಾಮದ ಬಹುಸಂಖ್ಯಾತ ಸಮುದಾಯದ ಜನರೊಂದಿಗೆ ನಿರ್ದಿಷ್ಟ ಸಮುದಾಯದ ಕೆಲವು ಕಿಡಿಗೇಡಿಗಳು ಜಗಳವಾಡಿದ್ದರು. ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅನುಯಾಯಿಯಾಗಿದ್ದ ರಹೇಮತ್ ಪಾಷಾ ಅಧ್ಯಕ್ಷರಾಗಿ ಆಯ್ಕೆಯಾದರು.

ಗ್ರಾ.ಪಂ.ನಲ್ಲಿ ಇತರೆ ಸಮುದಾಯದವರಿದ್ದರೂ ಕಾಂಗ್ರೆಸ್ ಪಕ್ಷವು ರಹೇಮತ್ ಪಾಷಾ ಅವರನ್ನು ಬೆಂಬಲಿಸಿದ್ದರಿಂದ ಬಿಜೆಪಿ ಮತ್ತು ಜನತಾದಳ (ಎಸ್)ನ ಬೆಂಬಲಿಗರೆಂದು ಹೇಳಲಾದ 13 ಸದಸ್ಯರು ರಾಜೀನಾಮೆ ಸಲ್ಲಿಸಿದ್ದಾರೆ ಎನ್ನಲಾಗಿದೆ.

Related Stories

No stories found.

Advertisement

X
Kannada Prabha
www.kannadaprabha.com