ಬಿಬಿಎಂಪಿ ಅಗ್ನಿ ಅವಘಡ: ಘಟನೆ ನಡೆದ ವೇಳೆ ಸ್ಥಳದಿಂದ ಓಡಿಹೋಗಿದ್ದ ಇಬ್ಬರು ನೌಕರರು ವಶಕ್ಕೆ; ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದೇನು?

ಅಗ್ನಿ ಆಕಸ್ಮಿಕದ ಘಟನೆಯನ್ನು ಮೂರು ಆಯಾಮಗಳಲ್ಲಿ ತನಿಖೆ ನಡೆಸಲಾಗುವುದು, ಒಂದ ಇಲಾಖಾ ತನಿಖೆ, ಎರಡನೇಯದ್ದು ಪೊಲೀಸ್ ತನಿಖೆ ಮತ್ತು ಎಲೆಕ್ಟ್ರಿಕಲ್ ಇನ್ ಸ್ಪೆಕ್ಟೋರೇಟ್ ಎಂಬ ಒಂದು ವಿಭಾಗವಿದ್ದು, ಅದರ ಅಧಿಕಾರಿಗಳು ಸಹ ತನಿಖೆ ನಡೆಸಲಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು.
ಡಿ.ಕೆ ಶಿವಕುಮಾರ್
ಡಿ.ಕೆ ಶಿವಕುಮಾರ್

ಬೆಂಗಳೂರು: ಕಳೆದ ರಾತ್ರಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೇಂದ್ರ ಕಚೇರಿಯಲ್ಲಿ ನಡೆದ ಅಗ್ನಿ ಅವಗಢದ ಬಗ್ಗೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿವರಣೆ ನೀಡಿದ್ದಾರೆ.

ಬಿಬಿಎಂಪಿ ಆವರಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು ಘಟನೆ ಸಂಬಂಧ ಇಬ್ಬರನ್ನು ವಶಕ್ಕೆ ಪಡೆದಿರುವುದಾಗಿ ಹೇಳಿದ್ದಾರೆ, ಬೆಂಕಿ ಹೊತ್ತಿಕೊಂಡಾಗ ಅಲ್ಲಿ ಸಿಬ್ಬಂದಿ ವರ್ಗದ ಇಬ್ಬರು ಸ್ಥಳದಲ್ಲಿದ್ದರೂ, ಲಭ್ಯವಿದ್ದ ಫೈರ್ ಎಕ್ಸ್ ಟಿಂಗ್ವಿಷರ್ (Fire Extinguisher) ನೆರವಿನಿಂದ ನಂದಿಸುವ ಪ್ರಯತ್ನ ಮಾಡದೆ ಅಲ್ಲಿಂದ ಪರಾರಿಯಾಗಿದ್ದಾರೆ, ಪೊಲೀಸರು ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ಎಂದು ಹೇಳಿದರು.

ಅಗ್ನಿ ಆಕಸ್ಮಿಕದ ಘಟನೆಯನ್ನು ಮೂರು ಆಯಾಮಗಳಲ್ಲಿ ತನಿಖೆ ನಡೆಸಲಾಗುವುದು, ಒಂದ ಇಲಾಖಾ ತನಿಖೆ, ಎರಡನೇಯದ್ದು ಪೊಲೀಸ್ ತನಿಖೆ ಮತ್ತು ಎಲೆಕ್ಟ್ರಿಕಲ್ ಇನ್ ಸ್ಪೆಕ್ಟೋರೇಟ್ (electrical inspectorate) ಎಂಬ ಒಂದು ವಿಭಾಗವಿದ್ದು, ಅದರ ಅಧಿಕಾರಿಗಳು ಸಹ ತನಿಖೆ ನಡೆಸಲಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು.

ಕ್ವಾಲಿಟಿ ಕಂಟ್ರೋಲ್ ಲ್ಯಾಬ್ ದಾಖಲೆಗಳನ್ನು ಸಂಗ್ರಹಿಸುವ ಸ್ಥಳವಲ್ಲ ಆದರೆ ಅಲ್ಲಿ ದಾಖಲೆಗಳನ್ನು ಸಂಗ್ರಹಿಸಲಾಗಿತ್ತು.  ಅದಕ್ಕೆ ಯಾರನ್ನು ದೂರುವುದು?, ಅಪಘಾತ ಈಗಾಗಲೇ ಸಂಭವಿಸಿದೆ. ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ನೀಡಬೇಕು. ಈ ಪ್ರಯೋಗಾಲಯವನ್ನು ಬೇರೆಡೆಗೆ ಸ್ಥಳಾಂತರಿಸುತ್ತೇವೆ ಎಂದು ಹೇಳಿದ್ದಾರೆ.

ಘಟನೆ ನಡೆದ ವೇಳೆ ಹಾಜರಿದ್ದ ಗ್ರೂಪ್-ಡಿ ನೌಕರನನ್ನು ಸಹ ವಿಚಾರಣೆ ನಡೆಸಲಾಗುತ್ತಿದೆ ಎಂದು ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ಸುದ್ದಿಗಾರರಿಗೆ ತಿಳಿಸಿದರು. ಘಟನೆ ನಡೆದ ಸಮಯದಲ್ಲಿ ನೆಲ ಮಹಡಿಯಲ್ಲಿದ್ದ ಒಬ್ಬ ವ್ಯಕ್ತಿಯನ್ನು ನಾವು ವಿಚಾರಣೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಆಸ್ಫಾಲ್ಟ್‌ನ ಶಕ್ತಿ ಪರೀಕ್ಷಿಸಲು ಬಳಸಲಾಗುವ ಹೆಚ್ಚು ಬೆಂಜೀನ್‌ನಿಂದ ಅಗ್ನಿ ಅವಘಡ ಸಂಭವಿಸಿದೆ ಎಂದು ಪ್ರಾಥಮಿಕವಾಗಿ ತೋರುತ್ತದೆ ಎಂದು ಶ್ರೀನಿವಾಸ ಗೌಡ ಹೇಳಿದರು. ಎಫ್‌ಎಸ್‌ಎಲ್ ತಂಡಗಳು ಮತ್ತು ವೈಜ್ಞಾನಿಕ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪುರಾವೆ ಸಂಗ್ರಹಿಸಿದ್ದಾರೆ.

2019 ರಿಂದ 2023 ರವರೆಗೆ ಬಿಜೆಪಿ ಆಡಳಿತದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಲ್ಲಿ ನಡೆದ ಎಲ್ಲಾ ಕಾಮಗಾರಿಗಳ ಬಗ್ಗೆ ನ್ಯಾಯಾಂಗ ತನಿಖೆಗೆ ಕಾಂಗ್ರೆಸ್ ಸರ್ಕಾರ ಆದೇಶಿಸಿದ ಕೆಲವೇ ದಿನಗಳಲ್ಲಿ ಈ ಘಟನೆ ನಡೆದಿದೆ. ಇದಲ್ಲದೆ, ಸರ್ಕಾರವು ಐಎಎಸ್ ಅಧಿಕಾರಿಗಳ ನೇತೃತ್ವದಲ್ಲಿ ನಾಲ್ಕು ಸಮಿತಿಗಳನ್ನು ರಚಿಸಿತು.

ಬೆಂಕಿ ಅವಘಡದ ಕುರಿತು ಮಾಡಿದ ಟ್ವೀಟ್‌ಗೆ ಕರ್ನಾಟಕದ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ನಂತರ ಅದನ್ನು ಡಿಲೀಟ್ ಮಾಡಲಾಗಿದೆ. ಘಟನೆ ನಡೆದ ಕೆಲವೇ ನಿಮಿಷಗಳಲ್ಲಿ, ಕರ್ನಾಟಕದ ಕಾಂಗ್ರೆಸ್ ತನ್ನ ಅಧಿಕೃತ ಹ್ಯಾಂಡಲ್‌ನಿಂದ ಬೆಂಕಿಯ ಘಟನೆ ಆಕಸ್ಮಿಕವಲ್ಲ ಆದರೆ ಪಿತೂರಿ ಎಂದು ಟ್ವೀಟ್ ಮಾಡಿತ್ತು.

ಇದೇ ವೇಳೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಕಾಂಗ್ರೆಸ್ ಟ್ವಿಟರ್ ಹ್ಯಾಂಡಲ್ ಕೂಡ ಆರೋಪ ಮಾಡಿ ಓಡಿ ಹೋಗುವ ಕಾಂಗ್ರೆಸ್ ಪಕ್ಷದಂತೆ ಎಂದು ಟ್ವೀಟ್ ಮಾಡಿದ್ದರು. ಅಸಮರ್ಥರು ತಮ್ಮ ಮನಸ್ಸಿಗೆ ಬಂದದ್ದನ್ನು ಬರೆಯುತ್ತಾರೆ ಮತ್ತು ನಾವು ಅವರ ಸತ್ಯಾಸತ್ಯತೆಯನ್ನು ಪ್ರಶ್ನಿಸಿದಾಗ ಅವರು ಟ್ವೀಟ್ ಅನ್ನು ಡಿಲೀಟ್ ಮಾಡಿ ಓಡಿಹೋಗುತ್ತಾರೆ" ಎಂದು ಯತ್ನಾಳ್ ಟ್ವೀಟ್ ಮಾಡಿದ್ದಾರೆ.ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದ ಮಹಾನುಭಾವರು ಇಲ್ಲವೇ?, ಎಲ್ಲಿ ನಾಪತ್ತೆಯಾಗಿದ್ದಾರೆ? ಎಂದು ಪ್ರಶ್ನಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com