ಮಾನವಸಹಿತ ಗಗನಯಾನ: ಇಸ್ರೋದ ಮತ್ತೊಂದು ಮಹತ್ವದ ಪರೀಕ್ಷೆ ಯಶಸ್ವಿ!

ಮಾನವಸಹಿತ ಗಗನಯಾನಕ್ಕೆ ಸಿದ್ಧವಾಗುತ್ತಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮತ್ತೊಂದು ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ.
ಡ್ರೋಗ್ ಪ್ಯಾರಾಚೂಟ್‌
ಡ್ರೋಗ್ ಪ್ಯಾರಾಚೂಟ್‌

ಬೆಂಗಳೂರು: ಮಾನವಸಹಿತ ಗಗನಯಾನಕ್ಕೆ ಸಿದ್ಧವಾಗುತ್ತಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮತ್ತೊಂದು ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ.

ಚಂಡೀಗಢದಲ್ಲಿರುವ ವಿಕ್ರಮ್‌ ಸಾರಾಭಾಯಿ ಬಾಹ್ಯಾಕಾಶ ಕೇಂದ್ರದಲ್ಲಿ (ವಿಎಸ್‌ಎಸ್‌ಸಿ) ಆ.8ರಿಂದ 10ರವರೆಗೆ ಡ್ರೋಗ್‌ ಪ್ಯಾರಾಚೂಟ್‌ ಪರೀಕ್ಷೆಯನ್ನು ಇಸ್ರೋ ಯಶಸ್ವಿಯಾಗಿ ನಡೆಸಿದೆ.

ಡ್ರೋಗ್ ಪ್ಯಾರಾಚೂಟ್‌ಗಳ ಮೇಲೆ ಇಸ್ರೋ ನಡೆಸಿದ ಸರಣಿ ಪರೀಕ್ಷೆಗಳ ಯಶಸ್ವಿಯಾಗಿವೆ. ಈ ಪರೀಕ್ಷೆಗಳಿಗೆ ಆಗ್ರಾದಲ್ಲಿರುವ ಏರಿಯಲ್‌ ಡೆಲಿವರಿ ರಿಸರ್ಚ್‌ ಆ್ಯಂಡ್‌ ಡೆವಲಪ್‌ಮೆಂಟ್‌ ಎಸ್ಟಾಬ್ಲಿಶ್‌ಮೆಂಟ್‌ (ಎಡಿಆರ್‌ಡಿಇ) ಮತ್ತು ಡಿಆರ್‌ಡಿಒ ಪೂರ್ಣ ಸಹಕಾರ ನೀಡಿವೆ.

ಈ ಪರೀಕ್ಷೆಯು ಗಗನಯಾನ ನೌಕೆಯನ್ನು ಯಶಸ್ವಿಯಾಗಿ ಅಂತರಿಕ್ಷಕ್ಕೆ ಕಳುಹಿಸಿ ಮರಳಿ ಕರೆಯಿಸಿಕೊಳ್ಳಲು ಪೂರಕವಾಗಿದೆ.

ಗಗನಯಾನ ನೌಕೆ ಮರಳಿ ಭೂಮಿಗೆ ಇಳಿಯುವಾಗ ಅದರ ವೇಗವನ್ನು ನಿಯಂತ್ರಿಸಲು ಡ್ರೋಗ್‌ ಪ್ಯಾರಾಚೂಟ್‌ ಸಹಾಯ ಮಾಡುತ್ತದೆ. ಈ ಪ್ಯಾರಾಚೂಟನ್ನು ಮಾರ್ಟರ್‌ ಎಂಬ ಸಾಧನದಲ್ಲಿ ಇರಿಸಲಾಗಿರುತ್ತದೆ. ಪರಿಸ್ಥಿತಿಗನುಗುಣವಾಗಿ ನೀಡಲ್ಪಟ್ಟ ಆದೇಶಕ್ಕೆ ತಕ್ಕಂತೆ ಇದು ತೆರೆದುಕೊಳ್ಳುತ್ತದೆ. ಗಗನಯಾನ ನೌಕೆಯ ಹಿಂಭಾಗದಲ್ಲಿ ಇದು 5.8 ಮೀಟರ್‌ ಉದ್ದಕ್ಕೆ ಚಾಚಿಕೊಳ್ಳುತ್ತದೆ. ಇದು ಏಕ-ಹಂತದ ರೀಫಿಂಗ್ ಕಾರ್ಯವಿಧಾನವನ್ನು ಬಳಸಿಕೊಳ್ಳುತ್ತವೆ. ಪ್ಯಾರಾಚ್ಯೂಟ್‌ಗಳು ಹರಡಿಕೊಂಡಾಗ ಆರಂಭಿಕ ಆಘಾತವನ್ನು ತಗ್ಗಿಸುತ್ತದೆ. ಮೃದುವಾದ ಮತ್ತು ನಿಯಂತ್ರಿತ ಲ್ಯಾಂಡಿಂಗ್ ಅನ್ನು ಖಾತ್ರಿಗೊಳಿಸುತ್ತದೆ ಎಂದು ಇಸ್ರೋ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com