ಡಿಸೆಂಬರ್ ನಿಂದ 20-ಲೀಟರ್ ಶುದ್ಧ ನೀರಿನ ಕ್ಯಾನ್ ರೀಫಿಲ್ ಬೆಲೆ ದುಪ್ಪಟ್ಟು; ವಿದ್ಯುತ್ ದರ ಏರಿಕೆ ಕಾರಣ!

ಸರ್ಕಾರವು ವಿದ್ಯುತ್ ದರ ಏರಿಕೆ ಮಾಡಿರುವ ಹಿನ್ನೆಲೆಯಲ್ಲಿ 20 ಲೀಟರ್ ಕ್ಯಾನ್ ನೀರು ತುಂಬಿಸಲು ಡಿಸೆಂಬರ್ 10 ರಿಂದ ದುಪ್ಪಟ್ಟು ಹಣ ನೀಡಬೇಕಾಗಿದೆ, ಇದರಿಂದ ಮಧ್ಯಮವರ್ಗದ ಕುಟುಂಬ ಮತ್ತು  ಕೊಳಗೇರಿ ನಿವಾಸಿಗಳು ಮತ್ತು ಬಡತನ ರೇಖೆಗಿಂತ ಕೆಳಗಿರುವವರ ಮೇಲೆ ಪರಿಣಾಮ ಬೀರಲಿದೆ,
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಸರ್ಕಾರವು ವಿದ್ಯುತ್ ದರ ಏರಿಕೆ ಮಾಡಿರುವ ಹಿನ್ನೆಲೆಯಲ್ಲಿ 20 ಲೀಟರ್ ಕ್ಯಾನ್ ನೀರು ತುಂಬಿಸಲು ಡಿಸೆಂಬರ್ 10 ರಿಂದ ದುಪ್ಪಟ್ಟು ಹಣ ನೀಡಬೇಕಾಗಿದೆ, ಇದರಿಂದ ಮಧ್ಯಮವರ್ಗದ ಕುಟುಂಬ ಮತ್ತು  ಕೊಳಗೇರಿ ನಿವಾಸಿಗಳು ಮತ್ತು ಬಡತನ ರೇಖೆಗಿಂತ ಕೆಳಗಿರುವವರ ಮೇಲೆ ಪರಿಣಾಮ ಬೀರಲಿದೆ,

ಈ ಹಿಂದೆ ರೀಫಿಲ್‌ಗೆ 5 ರೂ.ಇದ್ದ ದರ ಈಗ 10 ರೂ.ಗೆ ಏರಿಕೆಯಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮತ್ತು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ನಾಗರಿಕರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸಲು ನಗರದಾದ್ಯಂತ ನೀರು ವಿತರಣಾ ಘಟಕಗಳನ್ನು ಸ್ಥಾಪಿಸಿದೆ.

ಈ ಘಟಕಗಳು ಬಿಬಿಎಂಪಿಯ 110 ಗ್ರಾಮಗಳು ಮತ್ತು ಕಾವೇರಿ ನೀರಿನ ಸಂಪರ್ಕವಿಲ್ಲದ ನಗರದ ಅಂಚಿನಲ್ಲಿರುವ ಸಿಎಂಸಿ ಮತ್ತು ಟಿಎಂಸಿ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ವಿಶೇಷವಾಗಿ ಪ್ರಯೋಜನಕಾರಿಯಾಗಿದೆ.

ಈ ಘಟಕಗಳ ನಿರ್ವಹಣೆಯ ಜವಾಬ್ದಾರಿಯನ್ನು ಬಿಬಿಎಂಪಿ ವಲಯದ ಎಂಜಿನಿಯರ್‌ಗಳು ಮತ್ತು ಮುಖ್ಯ ಆರೋಗ್ಯಾಧಿಕಾರಿಗಳಿಗೆ ನೀಡಲಾಗಿದೆ. ಆದರೆ ಡಿಸ್ಪೆನ್ಸರ್‌ಗಳನ್ನು ನಿರ್ವಹಿಸುವವರಿಗೆ ಸುಂಕದ ಹೆಚ್ಚಳಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ವಲಯಗಳಲ್ಲಿನ ಅಧಿಕಾರಿಗಳು ಹೇಳಿದ್ದಾರೆ.

ನಾನು ವಾರಕ್ಕೆ ಮೂರು ಬಾರಿ ವಿತರಕದಿಂದ ನೀರನ್ನು ತುಂಬಿಸುತ್ತೇನೆ. ನಾವು ಐದು ಜನರ ಕುಟುಂಬ ಮತ್ತು ನಾನು ಪ್ರತಿ ಬಾರಿ ಮೂರು ಕ್ಯಾನ್‌ಗಳನ್ನು ತುಂಬಿಸುತ್ತೇನೆ. ಅಡುಗೆ ಮಾಡಲು, ಕುಡಿಯಲು ನೀರು ಬೇಕು. ಹಿಂದಿನ ತಿಂಗಳು ಪ್ರತಿ ಕ್ಯಾನ್‌ಗೆ 5 ರೂ. ನೀಡುವುದೇ ಕಷ್ಟವಾಗಿತ್ತು, ಆದರೆ ಈಗ ಬೆಲೆ ಏರಿಕೆಯಿಂದ ಇನ್ನೂ ದುಸ್ತರವಾಗಿದೆ. ನೀರಿನ ಬಳಕೆ ಕಡಿಮೆ ಮಾಡಲು ನಿರ್ಧರಿಸಿದ್ದೇವೆ’  ಎಂದು ಆರ್.ಆರ್.ನಗರದ ಗೃಹಿಣಿ ಶಾಂತಮ್ಮ ಹೇಳುತ್ತಾರೆ, ಶಾಂತಮ್ಮ ಪತಿ ಕೂಲಿ ಕೆಲಸ ಮಾಡುತ್ತಿದ್ದಾರೆ.

ಹೆಮ್ಮಿಗೆಪುರದಲ್ಲಿ ನೆಲೆಸಿರುವ ಮತ್ತೊಬ್ಬ ಗೃಹಿಣಿ ಲಕ್ಷ್ಮಿ ಅವರ ಸಮಸ್ಯೆ ಕೂಡ ಇದೇ ಆಗಿದೆ. "ನಾನು ಮನೆಯ ಸಹಾಯಕಿನಾಗಿ ಕೆಲಸ ಮಾಡುತ್ತೇನೆ ಮತ್ತು ನನಗೆ ದಿನಕ್ಕೆ ಕನಿಷ್ಠ ಒಂದು ಕ್ಯಾನ್ ಅಗತ್ಯವಿದೆ. ನೀರಿಗಾಗಿ ತಿಂಗಳಿಗೆ 300 ರೂಪಾಯಿ ಖರ್ಚು ಮಾಡಲು ಸಾಧ್ಯವಿಲ್ಲ. ಸರ್ಕಾರ ಇದನ್ನು ಪರಿಶೀಲಿಸಬೇಕು ಮತ್ತು ಗ್ಯಾರಂಟಿಗಳಲ್ಲಿ  ಸೇರಿಸಬೇಕು ಎಂದು ಅವರು ಹೇಳಿದರು.

ಇವು ವಾಣಿಜ್ಯ ಘಟಕಗಳಾಗಿದ್ದು, ವಿದ್ಯುತ್ ದರ ಹೆಚ್ಚಳವು ಅವುಗಳಿಗೆ ಅನ್ವಯಿಸುತ್ತದೆ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ. ಆರ್‌ಆರ್‌ನಗರದ ನೀರು ಸರಬರಾಜು ಘಟಕದ ನಿರ್ವಾಹಕ ಸಂತೋಷ್‌ ಕೆ ಮಾತನಾಡಿ, ವಿದ್ಯುತ್‌ ಶುಲ್ಕ ಹೆಚ್ಚಾದ ಕಾರಣ ದರ ಹೆಚ್ಚಳ ಮಾಡುವಂತೆ ಒತ್ತಾಯಿಸಲಾಯಿತು. ನೀರು ಪಂಪ್ ಮಾಡಲು ಮತ್ತು ಸರಬರಾಜು ಮಾಡಲು ಸಾಕಷ್ಟು ವೆಚ್ಚವಾಗುತ್ತದೆ. ವೆಚ್ಚವನ್ನು ಗ್ರಾಹಕರಿಗೆ ವರ್ಗಾಯಿಸಬೇಕು ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com