ಲಿಫ್ಟ್ ನಲ್ಲಿ ಸಿಲುಕಿಕೊಂಡ ಸತೀಶ್ ಜಾರಕಿಹೊಳಿ ಪುತ್ರ: ಕೆಲಕಾಲ ಆತಂಕ ಸೃಷ್ಟಿ

ಸಚಿವ ಸತೀಶ್ ಜಾರಕಿಹೊಳಿಯವರ ಪುತ್ರ ರಾಹುಲ್ ಜಾರಕಿಹೊಳಿ ಅವರು ಜಿಲ್ಲಾಸ್ಪತ್ರೆಯ ಲಿಫ್ಟ್ ನಲ್ಲಿ ಅರ್ಧಗಂಟೆಗೂ ಹೆಚ್ಚು ಕಾಲ ಸಿಲುಕಿಕೊಂಡು, ಕೆಲಕಾಲ ಆತಂಕ ಸೃಷ್ಟಿಯಾದ ಘಟನೆ ಸೋಮವಾರ ನಡೆಯಿತು.
ರಾಹುಲ್ ಜಾರಕಿಹೊಳಿ.
ರಾಹುಲ್ ಜಾರಕಿಹೊಳಿ.

ಬೆಳಗಾವಿ: ಸಚಿವ ಸತೀಶ್ ಜಾರಕಿಹೊಳಿಯವರ ಪುತ್ರ ರಾಹುಲ್ ಜಾರಕಿಹೊಳಿ ಅವರು ಜಿಲ್ಲಾಸ್ಪತ್ರೆಯ ಲಿಫ್ಟ್ ನಲ್ಲಿ ಅರ್ಧಗಂಟೆಗೂ ಹೆಚ್ಚು ಕಾಲ ಸಿಲುಕಿಕೊಂಡು, ಕೆಲಕಾಲ ಆತಂಕ ಸೃಷ್ಟಿಯಾದ ಘಟನೆ ಸೋಮವಾರ ನಡೆಯಿತು.

‘ನಾಗ ಪಂಚಮಿ’ಯನ್ನು ಅರ್ಥಪೂರ್ಣವಾಗಿ ಆಚರಿಸುವ ಸಲುವಾಗಿ ಬಾಣಂತಿಯರಿಗೆ ಹಾಲು, ಹಣ್ಣು ವಿತರಿಸುವ ರಾಹುಲ್ ಜಾರಕಿಹೊಳಿಯವರು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ್ದರು.

ಮಾನವ ಬಂಧುತ್ವ ವೇದಿಕೆ ಹಾಗೂ ಜಾರಕಿಹೊಳಿ ಪ್ರತಿಷ್ಠಾನ ಈ ಕಾರ್ಯಕ್ರಮ ಆಯೋಜಿಸಿತ್ತು. ಹಾವು ಹಾಲನ್ನು ಕುಡಿಯುತ್ತದೆ ಎಂಬ ಕುರುಡು ನಂಬಿಕೆಯನ್ನು ಹೋಗಲಾಡಿಸಲು ವೇದಿಕೆಯು ಪ್ರತಿವರ್ಷ ಈ ಕಾರ್ಯಕ್ರಮವನ್ನು ಆಯೋಜಿಸುತ್ತದೆ. ಹಾಲು, ಹಣ್ಣುಗಳನ್ನು ಹಾವುಗಳಿಗೆ ಅರ್ಪಿಸುವ ಬದಲು, ಬಡವರಿಗೆ ವಿತರಿಸುವ ಮೂಲಕ ಅರ್ಥಪೂರ್ಣವಾಗಿ 'ನಾಗ ಪಂಚಮಿ' ಆಚರಿಸುತ್ತದೆ.

ಇದರಂತೆ ರಾಹುಲ್ ಜಾರಕಿಹೊಳಿಯವರು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಲಿಫ್ಟ್ ನಲ್ಲಿ ಸಿಲುಕಿಕೊಂಡಿದ್ದರು. ರಾಹುಲ್ ಅವರ ಜೊತೆಗೆ ಸುಮಾರು 17 ಮಂದಿ ಲಿಫ್ಟ್ ನಲ್ಲಿದ್ದರು. ಈ ವೇಳೆ ಲಿಫ್ಟ್ ಸ್ಥಗಿತಗೊಂಡ ಪರಿಣಾಮ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಕೂಡಲೇ ಭದ್ರತಾ ಸಿಬ್ಬಂದಿಗಳು ಸ್ಥಳಕ್ಕೆ ಬಂದು ಸಮಸ್ಯೆಯನ್ನು ಸರಿಪಡಿಸಿದರು. ಬಳಿಕ 17 ಮಂದಿ ಸುರಕ್ಷಿತವಾಗಿ ಹೊರಬಂದರು.

ಓವರ್‌ಲೋಡ್‌ ಅಥವಾ ತಾಂತ್ರಿಕ ದೋಷದ ಸಮಸ್ಯೆ ಲಿಫ್ಟ್ ನಲ್ಲಿ ಇದ್ದಕ್ಕಿದ್ದಂತೆ ಸ್ಥಗಿತಗೊಂಡಿತ್ತು ಎಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com