ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ನಮಗೆ ಪರಿಣಿತಿಯಿಲ್ಲ ಎಂದ 'ಸುಪ್ರೀಂ', ವರದಿ ಸಲ್ಲಿಸಲು ಪ್ರಾಧಿಕಾರಕ್ಕೆ ಸೂಚನೆ

ಕಾವೇರಿ ನದಿ ನೀರಿಗಾಗಿ ತಮಿಳುನಾಡು ಸಲ್ಲಿಸಿದ್ದ ಅರ್ಜಿಯನ್ನು ಇಂದು ವಿಚಾರಣೆಯನ್ನು ನಡೆಸಿದ ಸುಪ್ರೀಂ ಕೋರ್ಟ್, ಸದ್ಯ ಯಾವುದೇ ಆದೇಶ ನೀಡದೆ, ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 1ಕ್ಕೆ ಮುಂದೂಡಿದೆ.
ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್
Updated on

ನವದೆಹಲಿ: ತಮಿಳುನಾಡು ಮತ್ತು ಕರ್ನಾಟಕ ಸರ್ಕಾರಗಳ ನಡುವೆ ಕಾವೇರಿ ನೀರು ಹಂಚಿಕೆ ವಿವಾದದ ನಡುವೆ, ಸುಪ್ರೀಂ ಕೋರ್ಟ್ ತಮಿಳುನಾಡಿಗೆ 177.25 ಟಿಎಂಸಿ ನೀರು ಬಿಡುಗಡೆ ಮಾಡುವಂತೆ 2018ರಲ್ಲಿ ನೀಡಿದ್ದ ಆದೇಶ ಅನುಸರಣೆಗೆ ಸಂಬಂಧಿಸಿದಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದಿಂದ ವರದಿ ಕೇಳಿದೆ. 

ಪ್ರಾಧಿಕಾರದಲ್ಲಿ ತಜ್ಞರಿದ್ದು,  ನಮಗೆ ಆ ಪರಿಣಿತಿ ಇರಲ್ಲ. ಹೇಗೆ ಆದೇಶ ಹೊರಡಿಸಲು ಸಾಧ್ಯ ಎಂದು ಪ್ರಶ್ನಿಸಿದ ನ್ಯಾಯಮೂರ್ತಿ ಬಿಆರ್ ಗವಾಯಿ ಅವರನ್ನೊಳಗೊಂಡ ನ್ಯಾಯಪೀಠ, ಆದೇಶ ಪಾಲಿಸಲಾಗುತ್ತಿದೆಯೇ ಅಥವಾ ಇಲ್ಲವೇ ಎಂಬುದರ ಕುರಿತು ಪ್ರಾಧಿಕಾರ ವರದಿ ನೀಡುವಂತೆ ಸೂಚಿಸಿದೆ. 

ಮುಂದಿನ ಹದಿನೈದು ದಿನಗಳ ಕಾಲ ಕರ್ನಾಟಕದಿಂದ ನೀರು ಬಿಡುವ ಕುರಿತು ನಿರ್ಧರಿಸಲು ಆಗಸ್ಟ್ 28 ರಂದು  ನಡೆಯಲಿರುವ ಮುಂದಿನ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯನ್ನು ಪರಿಗಣಿಸಿದ ನ್ಯಾಯಮೂರ್ತಿಗಳಾದ ಪಿ.ಎಸ್.ನರಸಿಂಹ ಮತ್ತು ಪಿ.ಕೆ.ಮಿಶ್ರಾ ಅವರನ್ನೊಳಗೊಂಡ ಪೀಠ, ಸೆಪ್ಟೆಂಬರ್ 1 ರೊಳಗೆ ವರದಿಯನ್ನು ಸಲ್ಲಿಸುವಂತೆ  ಪ್ರಾಧಿಕಾರಕ್ಕೆ ಸೂಚಿಸಿತು. 

ಬೆಳೆದು ನಿಂತಿರುವ ಭತ್ತದ ಬೆಳೆಗಳನ್ನು ಉಳಿಸಲು ತನ್ನ ಜಲಾಶಯಗಳಿಂದ ತಕ್ಷಣವೇ 24,000 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡುವಂತೆ ಕರ್ನಾಟಕಕ್ಕೆ ನಿರ್ದೇಶಿಸಲು ತಮಿಳುನಾಡು ಸರ್ಕಾರದ ಮನವಿಯನ್ನು ನ್ಯಾಯಾಲಯವು ಪರಿಗಣಿಸಿದೆ. ಕೆಆರ್‌ಎಸ್ ಮತ್ತು ಕಬಿನಿ ಜಲಾಶಯಗಳಿಂದ ಆಗಸ್ಟ್ 11 ರಿಂದ ಮುಂದಿನ 15 ದಿನಗಳವರೆಗೆ 10,000 ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಆಗಸ್ಟ್ 11 ರಂದು ಕರ್ನಾಟಕಕ್ಕೆ ನಿರ್ದೇಶಿಸಿತ್ತು. ಆದರೆ, ಇದನ್ನು ಕರ್ನಾಟಕ ಸರ್ಕಾರ ಪಾಲಿಸಿಲ್ಲ ಎಂದು ತಮಿಳುನಾಡು ಅರ್ಜಿಯಲ್ಲಿ ಹೇಳಿದೆ. 

ತಮಿಳುನಾಡು ಸರ್ಕಾರ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹಟಗಿ,  ದೊಡ್ಡ ನೀರಿನ ಕೊರತೆಯಿದ್ದು, ಮಧ್ಯಂತರ ಆದೇಶ ಹೊರಡಿಸಬೇಕೆಂದು ಪ್ರಯತ್ನಿಸಿದರು. ನೈಋತ್ಯ ಮಾನ್ಸೂನ್ ವೈಫಲ್ಯದಿಂದ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದು, ತನ್ನ ಜಲಾಶಯಗಳಿಂದ ಕಾವೇರಿ ನದಿ ನೀರನ್ನು ದಿನಕ್ಕೆ 24,000 ಕ್ಯೂಸೆಕ್ ಬಿಡುಗಡೆ ಮಾಡುವಂತೆ ತಮಿಳುನಾಡು ಮಾಡಿದ ಮನವಿಯನ್ನು ಕರ್ನಾಟಕ ನ್ಯಾಯಾಲಯದ ಮುಂದೆ ವಿರೋಧಿಸಿದೆ.

ಆಗಸ್ಟ್ 12 ರಿಂದ ಮುಂದಿನ 15 ದಿನಗಳವರೆಗೆ ಅಂತರರಾಜ್ಯ ಗಡಿಯಾದ ಬಿಳಿಗುಂಡ್ಲುವಿಗೆ ದಿನಕ್ಕೆ 10,000 ಕ್ಯೂಸೆಕ್ ನ್ನು ಖಚಿತಪಡಿಸಿಕೊಳ್ಳಲು ಆಗಸ್ಟ್ 11 ರಂದು ತೆಗೆದುಕೊಂಡ ನಿರ್ಧಾರವನ್ನು ಮರು ಪರಿಶೀಲಿಸಲು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಕೇಳಲಾಗಿದೆ ಎಂದು ಕರ್ನಾಟಕ ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com