ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಗಾಗಿ ಹೊಸ ಎಲಿವೇಟೆಡ್ ವಾಕ್‌ವೇ ಉದ್ಘಾಟನೆ!

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಮತ್ತು ಸಂದರ್ಶಕರ ಅನುಕೂಲಕ್ಕಾಗಿ ಹೊಸ ಎಲಿವೇಟೆಡ್ ವಾಕ್‌ವೇಯನ್ನು ಉದ್ಘಾಟಿಸಲಾಗಿದೆ.
ಎಲಿವೇಟೆಡ್ ವಾಕ್‌ವೇ
ಎಲಿವೇಟೆಡ್ ವಾಕ್‌ವೇ

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಮತ್ತು ಸಂದರ್ಶಕರ ಅನುಕೂಲಕ್ಕಾಗಿ ಹೊಸ ಎಲಿವೇಟೆಡ್ ವಾಕ್‌ವೇಯನ್ನು ಉದ್ಘಾಟಿಸಲಾಗಿದೆ.

420 ಮೀಟರ್ ಉದ್ದದ ಎಲಿವೇಟೆಡ್ ವಾಕ್‌ವೇ ಟರ್ಮಿನಲ್ 1ರಿಂದ P4 ಪಾರ್ಕಿಂಗ್ ಅನ್ನು ಸಂಪರ್ಕಿಸುತ್ತದೆ.

ವಾಕ್ ವೇ ಸರಳವಾಗಿದ್ದು ಆಧುನಿಕ ವಿನ್ಯಾಸ ಹೊಂದಿದೆ. ಎಲಿವೇಟರ್‌ಗಳು ಮತ್ತು ಎಸ್ಕಲೇಟರ್‌ಗಳು ಪ್ರಯಾಣಿಕರ ಸ್ನೇಹಿ ಸೌಕರ್ಯ ಹೊಂದಿದ್ದು ಪ್ರಯಾಣಿಕರು ಸುಲಭ ಮತ್ತು ಆರಾಮದಾಯಕವಾದ ನಡಿಗೆಯನ್ನು ಅನುಭವಿಸುವುದನ್ನು ಖಚಿತಪಡಿಸುತ್ತದೆ ಎಂದು BLR ವಿಮಾನ ನಿಲ್ದಾಣವು ಹೇಳಿಕೆಯಲ್ಲಿ ತಿಳಿಸಿದೆ.

ವಿನ್ಯಾಸವು ಒಳಗೆ ಬರುವವರಿಗೆ ಆದ್ಯತೆ ನೀಡುತ್ತದೆ. ಇದು ಹಿರಿಯ ನಾಗರಿಕ ಮತ್ತು ನಿಧನವಾಗಿ ಚಲಿಸುವಂತ ವ್ಯಕ್ತಿಗಳಿಗೆ ಪ್ರಯೋಜನವಾಗಿರಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com