ಸೌಜನ್ಯ ಕೊಲೆ ಪ್ರಕರಣ: 'ನಾವು ತಪ್ಪು ಮಾಡಿಲ್ಲ.. ತಪ್ಪಿತಸ್ಥರನ್ನು ಶಿಕ್ಷಿಸು': ಅಣ್ಣಪ್ಪ ಸ್ವಾಮಿ ಮುಂದೆ ಆಣೆ

ಸೌಜನ್ಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾವು ತಪ್ಪು ಮಾಡಿಲ್ಲ.. ತಪ್ಪಿತಸ್ಥರನ್ನು ಶಿಕ್ಷಿಸು ಎಂದು ಧರ್ಮಸ್ಥಳದ ಅಣ್ಣಪ್ಪ ಸ್ವಾಮಿ ದೇಗುಲದ ಮುಂದೆ ನಿಂತು ಧೀರಜ್ ಕೆಲ್ಲಾ, ಮಲ್ಲಿಕ್ ಮತ್ತು ಉದಯ್ ಜೈನ್ ಪ್ರಮಾಣ ಮಾಡಿದ್ದಾರೆ.
ಅಣ್ಣಪ್ಪ ಸ್ವಾಮಿ ಮುಂದೆ ಪ್ರಾರ್ಥನೆ
ಅಣ್ಣಪ್ಪ ಸ್ವಾಮಿ ಮುಂದೆ ಪ್ರಾರ್ಥನೆ

ಉತ್ತರ ಕನ್ನಡ: ಸೌಜನ್ಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾವು ತಪ್ಪು ಮಾಡಿಲ್ಲ.. ತಪ್ಪಿತಸ್ಥರನ್ನು ಶಿಕ್ಷಿಸು ಎಂದು ಧರ್ಮಸ್ಥಳದ ಅಣ್ಣಪ್ಪ ಸ್ವಾಮಿ ದೇಗುಲದ ಮುಂದೆ ನಿಂತು ಧೀರಜ್ ಕೆಲ್ಲಾ, ಮಲ್ಲಿಕ್ ಮತ್ತು ಉದಯ್ ಜೈನ್ ಪ್ರಮಾಣ ಮಾಡಿದ್ದಾರೆ.

11 ವರ್ಷಗಳ ಬಳಿಕ ಮತ್ತೆ ಮುನ್ನೆಲೆಗೆ ಬಂದ ಧರ್ಮಸ್ಥಳದ ಸೌಜನ್ಯಾ (Soujanya Murder Case) ಅತ್ಯಾಚಾರ, ಕೊಲೆ ಪ್ರಕರಣ ಇದೀಗ ಮುಂಜುನಾಥನ ಸನ್ನಿಧಿ ಬಳಿಯಲ್ಲಿರುವ ಅಣ್ಣಪ್ಪನ ಬೆಟ್ಟದವರೆಗೂ ಹೋಗಿದ್ದು, ಪ್ರಕರಣದಲ್ಲಿ ಆರೋಪಿಗಳು ಎಂದು ಆರೋಪಿಸಲಾಗುತ್ತಿರುವ ಧೀರಜ್ ಕೆಲ್ಲಾ, ಮಲ್ಲಿಕ್ ಜೈನ್ ಮತ್ತು ಉದಯ್ ಜೈನ್ ಪ್ರಮಾಣ ಮಾಡಿ ತಾವು ಏನೂ ತಪ್ಪು ಮಾಡಿಲ್ಲ. ತಪ್ಪಿತಸ್ಥರನ್ನು ಶಿಕ್ಷಿಸುವಂತೆ ದೇವರ ಮುಂದೆ ಪ್ರಾರ್ಥನೆ ಮಾಡಿದ್ದಾರೆ.

ಇಂದು ಸೌಜನ್ಯ ತಾಯಿ ಕುಸುಮಾವತಿ ಹಾಗೂ ಆರೋಪ ಹೊತ್ತವರು ಕೂಡ ಅಣ್ಣಪ್ಪನ ಬೆಟ್ಟಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಮೊದಲು ನೇತ್ರಾವತಿಯಿಂದ ಧರ್ಮಸ್ಥಳದವರೆಗೆ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗಳ ಕಾರ್ಯಕರ್ತರು ಪಾದಯಾತ್ರೆ ನಡೆಸಿದರು. ಈ ಪಾದಯಾತ್ರೆಯಲ್ಲಿ ನೇತ್ರಾವತಿ ಸ್ನಾನಘಟ್ಟದ ಬಳಿಯಿಂದ ಸೌಜನ್ಯ ತಾಯಿ ಕುಸುಮಾವತಿ ಕೂಡ ಸೇರಿಕೊಂಡರು.

ನೇತ್ರಾವತಿಯಿಂದ ಧರ್ಮಸ್ಥಳದವರೆಗೆ ಪಾದಯಾತ್ರೆ ಮಾಡಿ, ನಂತರ ಧರ್ಮಸ್ಥಳದ ಅಣ್ಣಪ್ಪ ಸ್ವಾಮಿ ಬೆಟ್ಟದ ಮುಂಭಾಗಕ್ಕೆ ಬಂದರು. ಅಣ್ಣಪ್ಪ ಸ್ವಾಮಿ ಬೆಟ್ಟದ ಮುಂಭಾಗ ಕಣ್ಣೀರಿಟ್ಟ ಸೌಜನ್ಯ ತಾಯಿ ಕುಸುಮಾವತಿ, ಅಣ್ಣಪ್ಪನಿಗೆ ನಾಣ್ಯ ಕಾಣಿಕೆ ಹಾಕಿ ಪ್ರಾರ್ಥನೆ ಸಲ್ಲಿಸಿದರು. ವಿಹಿಂಪ, ಬಜರಂಗಳ ಮುಖಂಡರ ಜೊತೆಗೂಡಿ ನೈಜ ಆರೋಪಿಗಳ ಪತ್ತೆ ಮಾಡಿಕೊಡುವಂತೆ ಅಣ್ಣಪ್ಪನಲ್ಲಿ ಬೇಡಿಕೊಂಡರು. 

ಕುಸುಮಾವತಿ ಪ್ರಾರ್ಥನೆಯ ಬಳಿಕ ಆರೋಪಿಗಳು ಎಂದು ಹೇಳಲಾಗುತ್ತಿರುವ ಮಲ್ಲಿಕ್ ಜೈನ್, ಉದಯ್ ಜೈನ್ ಹಾಗೂ ಧೀರಜ್ ಜೈನ್ ಕೂಡ ಅಣ್ಣಪ್ಪ ಸ್ವಾಮಿ ಬೆಟ್ಟದ ಮುಂಭಾಗ ಬಂದು, ಈ ಪ್ರಕರಣದಲ್ಲಿ ನಮ್ಮ ಯಾವುದೇ ಪಾತ್ರ ಇಲ್ಲ. ನಮ್ಮ ಹೆಸರನ್ನು ಅನಾವಶ್ಯಕವಾಗಿ ಎಳೆದು ತರಲಾಗಿದೆ. ನಿಜವಾದ ತಪ್ಪಿತಸ್ಥರನ್ನು ಶಿಕ್ಷಿಸು ಎಂದು ಕೈಮುಗಿದು ಬೇಡಿಕೊಂಡರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com