ಕಾಂಗ್ರೆಸ್​ ಕಾರ್ಯಕರ್ತೆ ವಿರುದ್ಧ ಅವಹೇಳನಕಾರಿ ಪೋಸ್ಟ್: ಚಕ್ರವರ್ತಿ ಸೂಲಿಬೆಲೆ ವಿರುದ್ಧ ಎಫ್ ಐ ಆರ್

ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್‌ ಹಾಕಿದ ಆರೋಪದಡಿ ಯುವ ಬ್ರಿಗೇಡ್ ನ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಶಿವಮೊಗ್ಗದ ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಕ್ರವರ್ತಿ ಸೂಲಿಬೆಲೆ
ಚಕ್ರವರ್ತಿ ಸೂಲಿಬೆಲೆ

ಶಿವಮೊಗ್ಗ: ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್‌ ಹಾಕಿದ ಆರೋಪದಡಿ ಯುವ ಬ್ರಿಗೇಡ್ ನ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಶಿವಮೊಗ್ಗದ ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೆಪಿಸಿಸಿ ಸೋಶಿಯಲ್ ಮೀಡಿಯಾ ಉಪಾಧ್ಯಕ್ಷೆ ಸೌಗಂಧಿಕ ರಘುನಾಥ್ ಎಂಬವರು ನೀಡಿದ್ದ ದೂರಿನ ಅನ್ವಯ ಪೊಲೀಸರು ಐಪಿಸಿ ಸೆಕ್ಷನ್ 504, 509ರ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇಸ್ರೋದ ಚಂದ್ರಯಾನ 3 ಯಶಸ್ಸಿಗೆ ಪ್ರಾರ್ಥಿಸಿ ಪೂಜೆ ಮಾಡಿಸಿ ಫೊಟೋ ಹಾಕಿ ಎಂದು ಪೋಸ್ಟ್ ಹಾಕಿದ್ದ ಸೂಲಿಬೆಲೆಗೆ, ಶಿವಮೊಗ್ಗ ನಿವಾಸಿ ಸೌಗಂಧಿರಾ ರಘುನಾಥ್ ಕಾಮೆಂಟ್ ಮಾಡಿದ್ದರು. ಸೂಲಿಬೆಲೆ ಪ್ರತಿಕ್ರಿಯೆ ನೀಡಿ "ನಿನಗೇನು ಉರಿ?'' ಎಂದು ಪೋಸ್ಟ್ ಮಾಡಿದ್ದು ಇದು ಸ್ತ್ರೀ ನಿಂದನೆ ಎಂದು ಸೌಗಂಧಿಕ ದೂರು ನೀಡಿದ್ದರು. ದೂರಿನಲ್ಲಿ ಸೌಗಂಧಿಕ ಇದು ಸ್ತ್ರೀ ನಿಂದನೆ ಎಂದು ದೂರಿದ್ದರು.

ಚಂದ್ರಯಾನ ಯಶಸ್ಸಿಗೆ ದೇವರಿಗೆ ಕೈ ಮುಗಿದು ಫೊಟೋ ಹಾಕಿ ಎಂದು ಸೂಲಿಬೆಲೆ ಫೇಸ್‌ಬುಕ್‌ ನಲ್ಲಿ ಪೋಸ್ಟ್ ಹಾಕಿದ್ದರು. ಆಗಸ್ಟ್ 23ರಂದು ನನ್ನ ಅಧಿಕೃತ ಖಾತೆಯಿಂದ ನಾನು ಕಾಮೆಂಟ್ ಮಾಡಿ, ದೇವಸ್ಥಾನಕ್ಕೆ ಪೂಜೆ ಮಾಡೋದು ತಪ್ಪಲ್ಲ.ಆದರೆ ಫೊಟೋ ಹಾಕಿ ಅಂತ ಹೇಳಿರೋದು ತಪ್ಪು. ವಿಜ್ಞಾನಿಗಳ ಪರಿಶ್ರಮ ಫಲಿಸಲಿ ಎಂದು ಬೇಡಿಕೊಂಡರೆ ಸಾಕು ಎಂದು ಹಾಕಿದ್ದೆ.

ಹೆಣ್ಣು ನಿಂದನೆ ಅಸಭ್ಯ ಕಾಮೆಂಟ್ ಗೆ ನಾನೂ ಪ್ರತಿಕ್ರಿಯಿಸಿ, ಸೂಲಿಬೆಲೆ ದೊಡ್ಡ ಭಾಷಣಕಾರನಾಗಿ, ಮಾತೃ ಪ್ರೀತಿಯಿಂದಲೂ ಬೆಳೆದು ಉರಿಯುತ್ತಾ ಎಂದು ಕಾಮೆಂಟ್ ಹಾಕಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದೆ. ಸುಳ್ಳು ಭಾಷಣ ಮಾಡಿ, ಜನರನ್ನ ಧರ್ಮದ ಹೆಸರಲ್ಲಿ ದಿಕ್ಕು ತಪ್ಪಿಸುವುದನ್ನು ಬಿಡಬೇಕು.

ಹೆಣ್ಣುಮಕ್ಕಳಿಗೆ ಮರ್ಯಾದೆ ಕೊಡಬೇಕು. ಅವರು ಆ ಕಾಮೆಂಟ್ ಡಿಲೀಟ್ ಮಾಡಿದ ಮೇಲೆ ಫೇಕ್ ಅಕೌಂಟ್ ಮೂಲಕ ಸ್ಕ್ರೀನ್ ಶಾಟ್ ಬಳಸಿ ತೇಜೋವಧೆ ಮಾಡಿಸಿದ್ದಾರೆ. ಮಾಡಿದ್ದನ್ನು ಒಪ್ಪಿಕೊಳ್ಳುವ ದೊಡ್ಡಗುಣ ಸೂಲಿಬೆಲೆಗೆ ಇಲ್ಲ. ಇಂತಹ ಸ್ತ್ರೀ ನಿಂದಕ ಸೂಲಿಬೆಲೆ ಮಾತುಗಳನ್ನ ಜನ ನಂಬುವುದು ನಾಚಿಗೆಗೇಡಿನ ವಿಷಯ. ಹಾಗಾಗಿ ಪೊಲೀಸರು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ದೂರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com