ಮಡಿಕೇರಿ: ಶಿಥಿಲಗೊಂಡ ಮೂಲಸೌಕರ್ಯ, ದಯನೀಯ ಸ್ಥಿತಿಯಲ್ಲಿ ಪಿ&ಟಿ ಕ್ವಾರ್ಟರ್ಸ್!

ಕೊಡಗಿನಾದ್ಯಂತ ನಿರಾಶ್ರಿತ ಬುಡಕಟ್ಟು ಜನಾಂಗದವರ ಪುನರ್ವಸತಿಗೆ ಸೂಕ್ತ ಸರಕಾರಿ ಭೂಮಿ ಸಿಗದಿರುವುದು ತೊಡಕಾಗಿದೆ. ಆದರೆ, ಜಿಲ್ಲೆಯ ಹಲವಾರು ಸರ್ಕಾರಿ ವಸತಿ ಗೃಹಗಳು ಹಾಗೂ ಕಟ್ಟಡಗಳು ಹೆಚ್ಚಿನ ಪ್ರಮಾಣದಲ್ಲಿ ಭೂಮಿ ಒತ್ತುವರಿ ಮಾಡಿಕೊಂಡಿದ್ದರೂ ಸೂಕ್ತ ನಿರ್ವಹಣೆ  ಮಾಡದ ಕಾರಣ ನಿರುಪಯುಕ್ತವಾಗಿವೆ.
ಪಿ&ಟಿ ಕ್ವಾರ್ಟರ್ಸ್
ಪಿ&ಟಿ ಕ್ವಾರ್ಟರ್ಸ್

ಮಡಿಕೇರಿ: ಕೊಡಗಿನಾದ್ಯಂತ ನಿರಾಶ್ರಿತ ಬುಡಕಟ್ಟು ಜನಾಂಗದವರ ಪುನರ್ವಸತಿಗೆ ಸೂಕ್ತ ಸರಕಾರಿ ಭೂಮಿ ಸಿಗದಿರುವುದು ತೊಡಕಾಗಿದೆ. ಆದರೆ, ಜಿಲ್ಲೆಯ ಹಲವಾರು ಸರ್ಕಾರಿ ವಸತಿ ಗೃಹಗಳು ಹಾಗೂ ಕಟ್ಟಡಗಳು ಹೆಚ್ಚಿನ ಪ್ರಮಾಣದಲ್ಲಿ ಭೂಮಿ ಒತ್ತುವರಿ ಮಾಡಿಕೊಂಡಿದ್ದರೂ ಸೂಕ್ತ ನಿರ್ವಹಣೆ  ಮಾಡದ ಕಾರಣ ನಿರುಪಯುಕ್ತವಾಗಿವೆ. ಮಡಿಕೇರಿಯಲ್ಲಿ ಐದು ದಶಕಗಳ ಹಿಂದೆ ನಿರ್ಮಿಸಲಾದ ಪಿ & ಟಿ ಕ್ವಾರ್ಟರ್ಸ್‌ ಇದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ.

ಶಿಥಿಲಗೊಂಡ ಮೂಲಸೌಕರ್ಯ, ಬೀಳುವ ಸ್ಥಿತಿಯಲ್ಲಿರುವ ಛಾವಣಿಗಳು, ಸುತ್ತಮುತ್ತಲು ಕಾಡು ಪ್ರದೇಶ,  ಬಣ್ಣವಿಲ್ಲದ ಗೋಡೆಗಳು! ಇದು ಅಂಚೆ ಮತ್ತು ಟೆಲಿಗ್ರಾಫ್ ಇಲಾಖೆಯ ಭವ್ಯ ಕ್ವಾರ್ಟರ್ಸ್ ಕಟ್ಟಡದ ಪ್ರಸ್ತುತ ಸ್ಥಿತಿ. ಮೈಸೂರು ಅಂಚೆ ವಿಭಾಗದ ಅಡಿಯಲ್ಲಿ ಕೊಡಗು ಅಂಚೆ ಸೌಲಭ್ಯ ಕಾರ್ಯನಿರ್ವಹಿಸುತ್ತಿದ್ದಾಗ 1970 ರಲ್ಲಿ ಮೂರು ಅಂತಸ್ತಿನ ಕಟ್ಟಡವನ್ನು ನಿರ್ಮಿಸಲಾಗಿತ್ತು.ಆದರೆ, ಸದ್ಯ ಈ ಸೌಲಭ್ಯ ಪಡೆಯುವವರು ಬೆರಳೆಣಿಕೆಯಷ್ಟು ಕಡಿಮೆ ಇದ್ದರೂ ಕಟ್ಟಡ ದಯನೀಯ ಸ್ಥಿತಿಯಲ್ಲಿದೆ.

"ಇಲಾಖೆಯಲ್ಲಿ ಅಧಿಕ ಮಂದಿ ಸ್ಥಳೀಯ ಉದ್ಯೋಗಿಗಳಿದ್ದಾರೆ.  ಆದರೆ, ಕ್ವಾರ್ಟರ್ಸ್‌ನಲ್ಲಿ ಉಳಿಯಲು ಹೆಚ್ಚಾಗಿ ಮನಸ್ಸು ಮಾಡುತ್ತಿಲ್ಲ. ಬಹುತೇಕರು ಸ್ವಂತ ಮನೆಗಳನ್ನು ಹೊಂದಿದ್ದು, ಇತರರು ಬಾಡಿಗೆ ಮನೆಗಳಲ್ಲಿ ಇರಲು ಬಯಸುತ್ತಾರೆ’ ಎಂದು ಅಂಚೆ ಇಲಾಖೆಯ ಕೊಡಗು ಅಧೀಕ್ಷಕ ರವಿ ಹೇಳುತ್ತಾರೆ.

ಕ್ವಾರ್ಟರ್ಸ್‌ನ ವಾರ್ಷಿಕ ನಿರ್ವಹಣೆ ಕೈಗೊಳ್ಳಲು ಇಲಾಖೆಯು ನಾಗರಿಕ ವಿಭಾಗವನ್ನು ಹೊಂದಿದ್ದರೂ, ಕಾಣದ ಸಮಸ್ಯೆಗಳಿಂದ ಆ ಕಾರ್ಯವನ್ನು ಕೈಗೊಳ್ಳಲಾಗುತ್ತಿಲ್ಲ. ನಿರ್ವಹಣೆ ಕೊರತೆಗೆ ಕ್ವಾರ್ಟರ್ಸ್ ತೆಗೆದುಕೊಳ್ಳುವವರು ಇಲ್ಲದಿರುವುದಕ್ಕೆ ನಿರ್ವಹಣೆ ಕೊರತೆಗೆ ಪ್ರಮುಖ ಕಾರಣವಾಗಿದೆ.  ಅಲ್ಲದೆ, ಇಲಾಖೆಯು ಸಾಕಷ್ಟು ಹಣವನ್ನು ಹೊಂದಿಲ್ಲ ಎಂದು ಅವರು ಹೇಳಿದರು.

ಇದಲ್ಲದೆ, ಗೋಡೆಗಳಿಗೆ ಬಣ್ಣ ಬಳಿಯುವುದು ಸೇರಿದಂತೆ ಹಲವಾರು ಕಾಮಗಾರಿಗಳು ಬಾಕಿಯಿದ್ದರೂ ಸಹ ಕ್ವಾರ್ಟಸ್ ನವೀಕರಣಕ್ಕೆ ಇಲಾಖೆ ಯಾವುದೇ ಮನವಿಗಳನ್ನು ಕಳುಹಿಸಿಲ್ಲ. ನಿರ್ವಹಣೆಯ ಕೊರತೆ ಮತ್ತು ಸಂಬಂಧಪಟ್ಟವರ ಆಸಕ್ತಿಯ ಕೊರತೆಯಿಂದ ನಗರದಲ್ಲಿ ಹಲವಾರು ಅಂಚೆ ನೌಕರರು ಬಾಡಿಗೆ ಮನೆಗಳಲ್ಲಿ ಉಳಿಯಲು ಹೆಚ್ಚುವರಿ ಹಣವನ್ನು ಸುರಿಯುತ್ತಿದ್ದರೂ ಸಹ ಒಂದು ಕೋಟಿಗೂ ಹೆಚ್ಚು ಯೋಜನೆಯು ಇದೀಗ ಪಾಳುಬಿದ್ದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com