ಉತ್ತಮ ಸಂಬಂಧದ ಹೊರತಾಗಿಯೂ ಜಪಾನ್‌ನಲ್ಲಿ ಕೇವಲ 1,302 ಭಾರತೀಯ ವಿದ್ಯಾರ್ಥಿಗಳು ವ್ಯಾಸಂಗ

“ಭಾರತ ಮತ್ತು ಜಪಾನ್ ಉತ್ತಮ ದ್ವಿಪಕ್ಷೀಯ ಸಂಬಂಧವನ್ನು ಹೊಂದಿದ್ದರೂ, ಥಾಯ್ಲೆಂಡ್, ಮಲೇಷ್ಯಾ, ಫಿಲಿಪೈನ್ಸ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಚೀನಾ ಅಥವಾ ಅಮೆರಿಕದಂತಹ ಇತರ ದೇಶಗಳಿಗೆ ಹೋಲಿಸಿದರೆ ಜಪಾನ್‌ನಲ್ಲಿ ಭಾರತೀಯ...
ಬೆಂಗಳೂರಿನ ಐಐಎಸ್ಸಿ
ಬೆಂಗಳೂರಿನ ಐಐಎಸ್ಸಿ

ಬೆಂಗಳೂರು: “ಭಾರತ ಮತ್ತು ಜಪಾನ್ ಉತ್ತಮ ದ್ವಿಪಕ್ಷೀಯ ಸಂಬಂಧವನ್ನು ಹೊಂದಿದ್ದರೂ, ಥಾಯ್ಲೆಂಡ್, ಮಲೇಷ್ಯಾ, ಫಿಲಿಪೈನ್ಸ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಚೀನಾ ಅಥವಾ ಅಮೆರಿಕದಂತಹ ಇತರ ದೇಶಗಳಿಗೆ ಹೋಲಿಸಿದರೆ ಜಪಾನ್‌ನಲ್ಲಿ ಭಾರತೀಯ ವಿದ್ಯಾರ್ಥಿಗಳು ಮತ್ತು ಭಾರತದಲ್ಲಿ ಜಪಾನ್ ವಿದ್ಯಾರ್ಥಿಗಳು ಓದುವುದು ತುಂಬಾ ಕಡಿಮೆ” ಎಂದು ಭಾರತದಲ್ಲಿರುವ ಜಪಾನ್ ರಾಯಭಾರ ಕಚೇರಿಯ ಕಾರ್ಯದರ್ಶಿ ನಿಶಿ ರ್ಯುಹೇಯ್ ಅವರು ಹೇಳಿದ್ದಾರೆ.

ಶುಕ್ರವಾರ ಬೆಂಗಳೂರಿನಲ್ಲಿ ಸೆಂಟರ್ ಫಾರ್ ಸೊಸೈಟಿ ಅಂಡ್ ಪಾಲಿಸಿ(ಸಿಎಸ್‌ಪಿ) ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್(ಐಐಎಸ್‌ಸಿ) ಸಹಯೋಗದಲ್ಲಿ ಆಯೋಜಿಸಿದ್ದ ಇಂಡಿಯಾ, ಜಪಾನ್ ಸೈನ್ಸ್ ಟೆಕ್ನಾಲಜಿ ಇನ್ನೋವೇಶನ್ ಫೋರಂನಲ್ಲಿ ಮಾತನಾಡಿದ ನಿಶಿ ಅವರು, ಜಪಾನ್ 1958 ರಿಂದ ಭಾರತಕ್ಕೆ ಅಧಿಕೃತವಾಗಿ ಅಭಿವೃದ್ಧಿ ಸಹಾಯವನ್ನು(ODA) ವಿಸ್ತರಿಸುತ್ತಿದೆ ಎಂದರು.

ಎರಡೂ ದೇಶಗಳು ಪೀಪಲ್ ಟು ಪೀಪಲ್ ವಿನಿಮಯದಲ್ಲಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನದಲ್ಲಿ ಹೆಚ್ಚು ಹೂಡಿಕೆ ಮಾಡಿದರೆ ಉಭಯ ದೇಶಗಳು ತಮ್ಮ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಬಹುದು ಮತ್ತು ಪಾಲುದಾರಿಕೆಯನ್ನು ಇನ್ನಷ್ಟು ವೇಗಗೊಳಿಸಬಹುದು ಎಂದು ಅವರು ಹೇಳಿದ್ದಾರೆ.

ಜಪಾನೀಸ್ ಕಲಿಯಬೇಕು ಎಂಬ ಕಡ್ಡಾಯ ನಿಯಮ ಇಲ್ಲ. ನೀವು ಜಪಾನೀಸ್ ಭಾಷೆಯನ್ನು ತಿಳಿದುಕೊಳ್ಳಬೇಕಾಗಿಲ್ಲ. ಇಂಗ್ಲಿಷ್‌ನಲ್ಲಿ ಪದವಿಗಳನ್ನು ನೀಡುವ ಹಲವು ಕಾರ್ಯಕ್ರಮಗಳಿವೆ. ಜಪಾನ್‌ನಲ್ಲಿ 114 ಪದವಿಪೂರ್ವ ಕೋರ್ಸ್‌ಗಳು ಮತ್ತು 1,119 ಪದವಿ ಕೋರ್ಸ್‌ಗಳನ್ನು ನೀಡಲಾಗುತ್ತಿದೆ. ವರ್ಷಕ್ಕೆ ಬೋಧನಾ ಶುಲ್ಕವು 3 ಲಕ್ಷದಿಂದ 6.3 ಲಕ್ಷದವರೆಗೆ ಇರುತ್ತದೆ” ಎಂದು ನಿಶಿ ವಿವರಿಸಿದರು.

'ಜಪಾನ್‌ನಲ್ಲಿ ಇಂಟರ್ನೆಟ್‌ ಪಿತಾಮಹ' ಎಂದೇ ಕರೆಯಲ್ಪಡುವ ಕೀಯೊ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಜುನ್ ಮರೈ ಅವರು ಧ್ವನಿಮುದ್ರಿತ ಸಂದೇಶದ ಮೂಲಕ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಭಾರತ ಮತ್ತು ಜಪಾನ್ ಎರಡೂ ದೇಶಗಳು ಡಿಜಿಟಲೀಕರಣಗೊಳಿಸಲು ಒಂದೇ ರೀತಿಯ ಪ್ರಯತ್ನಗಳನ್ನು ಮಾಡುತ್ತಿವೆ. ಕೋವಿಡ್ ಸಾಂಕ್ರಾಮಿಕವು ತಾಂತ್ರಿಕ ಪ್ರಗತಿಗೆ ಕಾರಣವಾಯಿತು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com