ವೀರಪ್ಪನ್ ಹತ್ಯೆಯಾಗಿ 2 ದಶಕ ಕಳೆದರೂ ಬಗೆಹರಿದಿಲ್ಲ ನರಹಂತಕನ ಸಾವಿನ ರಹಸ್ಯ: ಪೊಲೀಸರು- ಲೇಖಕರ ಭಿನ್ನ ವರಸೆ!

ದಂತ ಚೋರ, ವೀರಪ್ಪನ್  ಸತ್ತು ಸುಮಾರು ಎರಡು ದಶಕಗಳು ಕಳೆದಿವೆ. 2004 ರಲ್ಲಿ  ವೀರಪ್ಪನ್ ಹತ್ಯೆ ಮಾಡಲಾಯಿತು, ಆದರೆ ಅವನ ಸಾವಿನ ಸುತ್ತ ನಿಗೂಢ ಮುಂದುವರಿದಿವೆ.
ವೀರಪ್ಪನ್
ವೀರಪ್ಪನ್

ಬೆಂಗಳೂರು: ದಂತ ಚೋರ, ವೀರಪ್ಪನ್  ಸತ್ತು ಸುಮಾರು ಎರಡು ದಶಕಗಳು ಕಳೆದಿವೆ. 2004 ರಲ್ಲಿ  ವೀರಪ್ಪನ್ ಹತ್ಯೆ ಮಾಡಲಾಯಿತು, ಆದರೆ ಅವನ ಸಾವಿನ ಸುತ್ತ ನಿಗೂಢ ಮುಂದುವರಿದಿವೆ.

ವೀರಪ್ಪನ್ ಸಾಗಾ: ರೈಸ್ ಅಂಡ್ ಫಾಲ್, ಭಾಗ ಎರಡು ಬಿಡುಗಡೆ ಮಾಡಿದ ಪತ್ರಕರ್ತ ಮತ್ತು ಲೇಖಕ ಪಿ ಶಿವಸುಬ್ರಮಣ್ಯಂ ಮಾತನಾಡಿದ್ದಾರೆ. ಎನ್ ಕೌಂಟರ್ ಗೆ ಸ್ಟೇಜ್ ಮ್ಯಾನೇಜ್ ಮಾಡಿದ  40 ನಿಮಿಷಗಳ ಮೊದಲೇ ವೀರಪ್ಪನ್ ಸತ್ತಿದ್ದ ಎಂದು ಹೇಳಿದ್ದಾರೆ.

ಆದರೆ ನಿವೃತ್ತ ಡಿಜಿಪಿ ವಿಜಯಕುಮಾರ್ ಹೇಳುವುದು ಬೇರೆ. ತಮ್ಮ ಕಾರ್ಯಾಚರಣೆಯ ಅಡಿಯಲ್ಲಿ ವೀರಪ್ಪನ್ ಕೊಲ್ಲಲ್ಪಟ್ಟ ಎಂದಿದ್ದಾರೆ.  ಡಿಜಿಪಿ ವಿಜಯ್ ಕುಮಾರ್ ತಾವು ಬರೆದಿರುವ ವೀರಪ್ಪನ್ ಚೇಸಿಂಗ್ ದಿ ಬ್ರಿಗಾಂಡ್ ಪುಸ್ತಕದಲ್ಲಿ ಈ ಅಂಶ ಉಲ್ಲೇಖಿಸಿದ್ದಾರೆ.

ಪತ್ರಕರ್ತ ಶಿವಸುಬ್ರಮಣ್ಯಂ ತಮ್ಮದೇ ಆದ ಸಿದ್ಧಾಂತ ಹೊಂದಿರುವುದು ಸ್ವಾಗತಾರ್ಹ. ನಾನು  ಅದನ್ನು ನಿರಾಕರಿಸಲು ಹೋಗುವುದಿಲ್ಲ. ವೀರಪ್ಪನ್ ಮತ್ತು ಅವನ ಜನರು ವ್ಯಾನ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಶರಣಾಗುವಂತೆ ಕೇಳಿಕೊಂಡರು, ಆದರೆ ಆತ ಅದಕ್ಕೆ ಬಗ್ಗಲಿಲ್ಲ ಜೊತೆಗೆ ಹೋರಾಟ ನಡೆಸಿದ, 20 ನಿಮಿಷಗಳ ಕಾಲ ನಡೆದ ಫೈಟ್ ನಲ್ಲಿ ವೀರಪ್ಪನ್ ನನ್ನು ಎನ್ ಕೌಂಟರ್ ಮಾಡಲಾಯಿತು ಎಂದು ವಿಜಯ್ ಕುಮಾರ್ ತಮ್ಮ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.

ವಿಶೇಷ ಕಾರ್ಯಪಡೆ ಮುಖ್ಯಸ್ಥರಾಗಿದ್ದ  ಮಾಜಿ ಡಿಜಿಪಿ ಶಂಕರ್ ಬಿದರಿ ವೀರಪ್ಪನ್ ಬಲವನ್ನು ನೂರರಿಂದ ಎಂಟಕ್ಕೆ ಇಳಿಸಿದರು. ಯಾರು ಏನೇ ಹೇಳಿದರೂ ಸಾಕ್ಷ್ಯಾಧಾರಗಳೊಂದಿಗೆ ರುಜುವಾತುಪಡಿಸಬೇಕು. ವಿಜಯ್ ಕುಮಾರ್ ಹೇಳುವುದನ್ನು ನಾನು ನಂಬುತ್ತೇನೆ ಎಂದಿದ್ದಾರೆ.

ಎಸ್‌ಟಿಎಫ್‌ನ ಭಾಗವಾಗಿದ್ದ ಸ್ಕ್ವಾಡ್‌ನ ಮುಖ್ಯಸ್ಥರಾಗಿ ಎಂಎಂ ಹಿಲ್ಸ್‌ನಲ್ಲಿ ಕೆಲಸ ಮಾಡಿದ ನಿವೃತ್ತ ಡಿಸಿಪಿ ಜಿಎ ಬಾವಾ, "ನಾವು ಎಲ್ಲರು ಹೇಳುವುದನ್ನು ಹೇಗೆ ನಂಬುವುದು?" ಎಂದು ಪ್ರಶ್ನಿಸಿದ್ದಾರೆ.

ವೀರಪ್ಪನ್ ಕಟ್ಟಾ ಅಭಿಮಾನಿ, ಬಿಆರ್ ಹಿಲ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ವಿವೇಕ್ ಜೋಯಪ್ಪ, “ರಾಷ್ಟ್ರದ ಇತಿಹಾಸದಲ್ಲಿ ಇದುವರೆಗಿನ ಅತ್ಯಂತ ದುಬಾರಿ ಮಾನವ ಬೇಟೆ ಇದಾಗಿದೆ. ಹೀಗಾಗಿ ಪ್ರತಿಯೊಬ್ಬರೂ ಸತ್ಯವನ್ನು ತಿಳಿದುಕೊಳ್ಳಲು ಬಯಸುತ್ತಾರೆ. ಅವನು ಹೇಗೆ ಸತ್ತನು ಎಂಬುದರ ಕುರಿತು ಎರಡೂ ಸಿದ್ಧಾಂತಗಳು ಎರಡು ಕಾರಣಗಳಿಗಾಗಿ ಪ್ರಾಮುಖ್ಯತೆಯನ್ನು ಪಡೆಯುತ್ತವೆ. ಒಂದು, ದುಷ್ಕರ್ಮಿಗಳು ಆಂಬ್ಯುಲೆನ್ಸ್ ಹತ್ತಲು ಯಾರನ್ನೂ ನಂಬುವುದಿಲ್ಲ ಮತ್ತು ಎರಡು, ಹ್ಯಾಂಡ್ ಗ್ರೆನೇಡ್ ಸ್ಫೋಟಕ್ಕೆ ಪುರಾವೆಗಳಿಲ್ಲ ಎಂದಿದ್ದಾರೆ.

ಸಿಸಿಟಿವಿ ದೃಶ್ಯಾವಳಿ ಮತ್ತು ಎನ್‌ಕೌಂಟರ್ ಎಫ್‌ಐಆರ್ ಅನ್ನು ಪೊಲೀಸರು ಎಂದಿಗೂ ಬಹಿರಂಗಗೊಳಿಸಲಿಲ್ಲ. ಅಲ್ಲದೆ, ವೀರಪನ್ ತನ್ನ ಮೂವರು ಸಹಚರರಾದ ಸೇತುಕುಳಿ, ಚಂದ್ರೇಗೌಡ ಮತ್ತು ಸೇತುಮಣಿಯನ್ನು ಎಂದಿಗೂ ಒಂದೇ ಕೋಣೆಯಲ್ಲಿ ಗ್ರೆನೇಡ್ ಜೋಡಿಸಲು ಬಿಟ್ಟಿರಲಿಲ್ಲ ಎಂದಿದ್ದಾರೆ.

ವೀರಪ್ಪನ್‌ನನ್ನು ಸೆರೆಹಿಡಿಯುವ ಮತ್ತು  ಎನ್ ಕೌಂಟರ್ ಮಾಡುವ ಮೊದಲು  ಆತನನ್ನು ಪ್ರಜ್ಞಾಹೀನನನ್ನಾಗಿ ಮಾಡಿಲಾಗಿತ್ತು. ಗ್ರೆನೇಡ್ ಸ್ಫೋಟದಲ್ಲಿ ಬದುಕುಳಿದ ಒಬ್ಬ ವ್ಯಕ್ತಿ ಈಗಲೂ ಇದ್ದಾರೆ. ಅವನಿಗೆ ಸತ್ಯ ತಿಳಿದಿದೆ, ಆದರೆ ಅವನ ಬಾಯಿ ಮುಚ್ಚಿಸಲಾಗಿದೆ. ಸತ್ಯ ಗೊತ್ತಿರುವ ಇವರೇ ಮಾತನಾಡಬೇಕಾಗಿದೆ ಎಂದು ಶಿವಸುಬ್ರಮಣ್ಯಂ ಹೇಳಿದ್ದಾರೆ. ಇದೇ ಸಂಬಂಧ ನಕೀರನ್ ನಿಯತಕಾಲಿಕದ ಸಂಪಾದಕ ಆರ್ ಗೋಪಾಲ್ ಅವರು ತಮ್ಮ ಘಟನೆಗಳ ಆವೃತ್ತಿಯ ಬಗ್ಗೆ ಒಂದು ವಾರದಲ್ಲಿ ಪುಸ್ತಕವನ್ನು ಹೊರತರಲು ಯೋಜಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com