357 ಕೋಟಿ ರು. ವೆಚ್ಚದಲ್ಲಿ ಬೆಳಗಾವಿಯಲ್ಲಿ ಹೊಸ ಟರ್ಮಿನಲ್ ನಿರ್ಮಾಣ: ಈರಣ್ಣ ಕಡಾಡಿ

ತಾಲ್ಲೂಕಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ  357 ಕೋಟಿ ರು. ವೆಚ್ಚದಲ್ಲಿ 16,400 ಚದರ ಮೀಟರ್ ವಿಸ್ತೀರ್ಣದಲ್ಲಿ ಹೊಸ ಟರ್ಮಿನಲ್ 2026ರೊಳಗೆ ನಿರ್ಮಾಣವಾಗಲಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.
ಈರಣ್ಣ ಕಡಾಡಿ
ಈರಣ್ಣ ಕಡಾಡಿ
Updated on

ಬೆಳಗಾವಿ: ತಾಲ್ಲೂಕಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ  357 ಕೋಟಿ ರು. ವೆಚ್ಚದಲ್ಲಿ 16,400 ಚದರ ಮೀಟರ್ ವಿಸ್ತೀರ್ಣದಲ್ಲಿ ಹೊಸ ಟರ್ಮಿನಲ್ 2026ರೊಳಗೆ ನಿರ್ಮಾಣವಾಗಲಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.

ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ನಡೆದ ಶನಿವಾರ ಸಲಹಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ನಾಲ್ಕು ಏರೋಬ್ರಿಡ್ಜ್‌, ತಲಾ ಎಂಟು ಎಕ್ಸ್‌ಲೇಟರ್‌, ಲಿಫ್ಟ್‌, ಏಕಕಾಲಕ್ಕೆ ಹೊರಹೋಗುವ ಮತ್ತು ಒಳಗೆ ಬರುವ 2,400 ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಸ ಟರ್ಮಿನಲ್‍ ಹೊಂದಿದೆ. ಏಕಕಾಲಕ್ಕೆ 9 ವಿಮಾನಗಳ ನಿಲುಗಡೆಗೆ ವ್ಯವಸ್ಥೆ ಹೊಂದಿರಲಿದೆ. ಟರ್ಮಿನಲ್ ಎದುರಿಗೆ 500 ಕಾರು, 200 ಬೈಕ್, 10 ಬಸ್ ಹಾಗೂ ಇತರೆ ವಾಹನಗಳ ಪಾರ್ಕಿಂಗ್‌ಗೆ ಅವಕಾಶವಿರಲಿದೆ’ ಎಂದರು.

ಈ ವಿಮಾನ ನಿಲ್ದಾಣ ಅಂತರರಾಷ್ಟ್ರೀಯ ಮಟ್ಟಕ್ಕೆ ಮೇಲ್ದರ್ಜೆಗೇರಿಸಲು ಪ್ರಯತ್ನಿಸಲಾಗುತ್ತಿದೆ. ದೆಹಲಿ, ಮುಂಬೈ ಸೇರಿದಂತೆ ದೇಶದ ಅನೇಕ ಮಹಾನಗರಗಳಿಗೆ ಬೆಳಗಾವಿಯಿಂದ ನೇರವಾಗಿ ವಿಮಾನಯಾನ ಸಂಪರ್ಕವಿದೆ. ಮುಂದಿನ ದಿನಗಳಲ್ಲಿ ದೇಶದ ಇತರ ನಗರಗಳಿಗೆ ಹೆಚ್ಚಿನ ವಿಮಾನ ಸೇವೆಗಳು ಇರುತ್ತವೆ. ಇದರಿಂದ ಉತ್ತರ ಕರ್ನಾಟಕದ ಜನರಿಗೆ ಹೆಚ್ಚು ಅನುಕೂಲವಾಗಲಿದೆ. ಉತ್ತಮ ಗುಣಮಟ್ಟದ ವಿಮಾನ ಸೇವೆಯನ್ನು ಒದಗಿಸಲು ಇದು ಸಹಕಾರಿಯಾಗಲಿದೆ ಎಂದರು.

ಸಂಸದೆ ಮಂಗಲಾ ಅಂಗಡಿ, ವಿಮಾನ ನಿಲ್ದಾಣ ನಿರ್ದೇಶಕ ಎಸ್.ತ್ಯಾಗರಾಜನ್, ಸಲಹಾ ಸಮಿತಿ ಸದಸ್ಯರಾದ ಭರತ ದೇಶಪಾಂಡೆ, ಸಂಜಯ ಭಂಡಾರಿ, ಐ.ಜಿ ದೇಯಣ್ಣವರ, ಗುರುದೇವ ಪಾಟೀಲ, ಪ್ರಿಯಾಂಕಾ ಅಜ್ರೇಕರ, ಅನೂಪ್ ಕಾಟೆ ಉಪಸ್ಥಿತರಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com