ಕುಂದಾಪುರದ ರೈತನಿಗೆ ಕೇಂದ್ರ ಸರ್ಕಾರದ 'ಕೋಟ್ಯಾಧಿಪತಿ ರೈತ ಪ್ರಶಸ್ತಿ'

ವರ್ಷದಲ್ಲಿ ಒಂದು ಕೋಟಿಗೂ ಅಧಿಕ ವಹಿವಾಟು ನಡೆಸಿದ ಉಡುಪಿ ಜಿಲ್ಲೆಯ ಅಕ್ಕಿ ಗಿರಣಿ ಮಾಲೀಕ ಹಾಗೂ ಪ್ರಗತಿಪರ ರೈತ ರಮೇಶ್ ನಾಯಕ್ ಅವರು ಕೇಂದ್ರ ಸರ್ಕಾರದ ಬಿಲಿಯನೇರ್ ರೈತ ಪ್ರಶಸ್ತಿ'ಗೆ ಆಯ್ಕೆಯಾಗಿದ್ದಾರೆ.
ರಮೇಶ್ ನಾಯಕ್ (ಚಿತ್ರ ಕೃಪೆ - Mangaloretoday)
ರಮೇಶ್ ನಾಯಕ್ (ಚಿತ್ರ ಕೃಪೆ - Mangaloretoday)

ಮಂಗಳೂರು: ವರ್ಷದಲ್ಲಿ ಒಂದು ಕೋಟಿಗೂ ಅಧಿಕ ವಹಿವಾಟು ನಡೆಸಿದ ಉಡುಪಿ ಜಿಲ್ಲೆಯ ಅಕ್ಕಿ ಗಿರಣಿ ಮಾಲೀಕ ಹಾಗೂ ಪ್ರಗತಿಪರ ರೈತ ರಮೇಶ್ ನಾಯಕ್ ಅವರು ಕೇಂದ್ರ ಸರ್ಕಾರದ ಬಿಲಿಯನೇರ್ ರೈತ ಪ್ರಶಸ್ತಿ'ಗೆ ಆಯ್ಕೆಯಾಗಿದ್ದಾರೆ.

ಡಿಸೆಂಬರ್ 7 ರಂದು ನವದೆಹಲಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಕುಂದಾಪುರ ತಾಲೂಕಿನ ತೆಕ್ಕಟ್ಟೆಯ ನಾಯಕ್ ಅವರು ಕೆದೂರು ಗ್ರಾಮದ ತಮ್ಮ 13 ಎಕರೆ ಜಮೀನಿನಲ್ಲಿ 1,634 ವಿವಿಧ ಬಗೆಯ ಹಣ್ಣಿನ ಮರಗಳನ್ನು ಬೆಳೆದು ಸಮೃದ್ಧ ಇಳುವರಿ ಹಾಗೂ ವಾರ್ಷಿಕ ಒಂದು ಕೋಟಿ ರೂಪಾಯಿಗೂ ಅಧಿಕ ವಹಿವಾಟು ನಡೆಸಿದ್ದಾರೆ.

ನಾಯಕ್ ಅವರು ತಮ್ಮ ಜಮೀನಿನಲ್ಲಿ 500 ಡ್ರ್ಯಾಗನ್ ಫ್ರೂಟ್ ಮರಗಳಲ್ಲದೆ 285 ಬಗೆಯ ಹಲಸಿನ ಮರಗಳನ್ನು ಬೆಳೆಸಿದ್ದಾರೆ. ಅಲ್ಲದೆ  30,000 ಅನಾನಸ್ ಗಿಡಗಳನ್ನು ಬೆಳೆಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com