ರೈತರಿಗೆ ಅನುಕೂಲವಾಗಲು ಅರಿಶಿನ ಸಂಶೋಧನಾ ಮಂಡಳಿ ಸ್ಥಾಪನೆ: ಕೇಂದ್ರ ಸಚಿವ ಅಮಿತ್ ಶಾ ಘೋಷಣೆ

ಅರಿಶಿನ ಬೆಳೆಗಾರರಿಗೆ ನ್ಯಾಯಯುತ ಸಂಭಾವನೆ ಪಡೆಯಲು, ಮೌಲ್ಯ ಮತ್ತು ರಫ್ತು ಹೆಚ್ಚಿಸಲು ಮತ್ತು ಅರಿಶಿನದಿಂದ ತಯಾರಿಸಿದ ಔಷಧಿಗಳ ಸಂಶೋಧನೆಗೆ ಉತ್ತೇಜನ ನೀಡುವ ಅರಿಶಿನ ಮಂಡಳಿಯನ್ನು ಪ್ರಾರಂಭಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಅರಿಶಿನ ಬೆಳೆಗಾರರಿಗೆ ನ್ಯಾಯಯುತ ಸಂಭಾವನೆ ಪಡೆಯಲು, ಮೌಲ್ಯ ಮತ್ತು ರಫ್ತು ಹೆಚ್ಚಿಸಲು ಮತ್ತು ಅರಿಶಿನದಿಂದ ತಯಾರಿಸಿದ ಔಷಧಿಗಳ ಸಂಶೋಧನೆಗೆ ಉತ್ತೇಜನ ನೀಡುವ ಅರಿಶಿನ ಮಂಡಳಿಯನ್ನು ಪ್ರಾರಂಭಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಐದು ರಾಜ್ಯಗಳ ವಿಧಾನಸಭೆಗಳಿಗೆ ಚುನಾವಣೆ ನಡೆಯುತ್ತಿರುವಾಗ ಈ ಹೇಳಿಕೆ ನೀಡಿದ್ದರಿಂದ ಹಲವರು ಈ ಹೇಳಿಕೆಗೆ ಎಚ್ಚರಿಕೆಯ ಪ್ರತಿಕ್ರಿಯೆ ನೀಡಿದ್ದಾರೆ. ಚುನಾವಣಾ ಸಮಯದಲ್ಲಿ ಘೋಷಣೆಗಳನ್ನು ಚಿಟಿಕೆ ಉಪ್ಪಿನಂತೆ ತೆಗೆದುಕೊಳ್ಳಬೇಕು. ಕರ್ನಾಟಕದ ಚುನಾವಣೆ ವೇಳೆ ಬೇಳೆಕಾಳು ಮಂಡಳಿಯನ್ನು ಘೋಷಿಸಲಾಗಿತ್ತು. ಆದರೆ ಅದರ ನಂತರ ನಿಜವಾಗಿಯೂ ಏನೂ ಆಗಲಿಲ್ಲ ಕೇವಲ ಕಚೇರಿ ತೆರೆದರು, ಆದರೆ ಅದರಿಂದ ರೈತರಿಗೆ ಸಹಾಯವಾಗಲಿಲ್ಲ ಎಂದು ಎಫ್‌ಕೆಸಿಸಿಐ ಅಧ್ಯಕ್ಷ ರಮೇಶ್ ಚಂದ್ರ ಲಾಹೋಟಿ ಹೇಳಿದ್ದಾರೆ.

ಆದರೆ ಖಚಿತವಾದ ಕನಿಷ್ಠ ಬೆಂಬಲ ಬೆಲೆ (MSP) ಚಾಮರಾಜನಗರ, ಮೈಸೂರು, ಹುಣಸೂರು, ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆಗಳ ಅರಿಶಿನ ಬೆಲೆಗಾರರಿಗೆ ಸಹಾಯ ಮಾಡುತ್ತದೆ ಎಂದಿದ್ದಾರೆ. ಇಂತಹ ಮಂಡಳಿಗಳು ಸರ್ಕಾರದ ಯೋಜನೆಗಳನ್ನು ರೂಟಿಂಗ್ ಮಾಡುವುದನ್ನು ಹೊರತುಪಡಿಸಿ ಹೆಚ್ಚಿನದನ್ನು ಮಾಡುವುದಿಲ್ಲ. ಆದಾಗ್ಯೂ, ರೈತರು ತಮ್ಮ ಕುಂದುಕೊರತೆಗಳನ್ನು ಸಂಪರ್ಕಿಸಲು ಮತ್ತು ಪರಿಹರಿಸಲು ಅಧಿಕಾರವನ್ನು ಹೊಂದಿರುತ್ತಾರೆ.

ಕೇಂದ್ರ ಸರ್ಕಾರವು 2019 ರಲ್ಲಿ ಅಂತಹ ಮಂಡಳಿಯನ್ನು ಪ್ರಾರಂಭಿಸಲು ಬಯಸಿತ್ತು. ಈ ವರ್ಷ ಅಕ್ಟೋಬರ್ 4 ರಂದು ಔಪಚಾರಿಕವಾಗಿ ಪ್ರಾರಂಭಿಸಲಾಯಿತು. ಇತ್ತೀಚಿಗೆ ಕೆಲವು ಚಟುವಟಿಕೆಗಳು ಪ್ರಾರಂಭವಾಗುತ್ತಿದೆ ಎಂದು ಹೇಳಲಾಗುತ್ತಿದೆ, ಆದರೆ ಎಲ್ಲಾ ಇತರ ಮಂಡಳಿಗಳು ಬಹಳ ಕಡಿಮೆ ಕೆಲಸ ಮಾಡುತ್ತಿವೆ ಎಂದಿದ್ದಾರೆ.

ಕರ್ನಾಟಕದಲ್ಲಿ ಅರಿಶಿನವನ್ನು ವಿಶಾಲವಾದ ಭೂಮಿಯಲ್ಲಿ ಬೆಳೆಯಲಾಗುತ್ತಿತ್ತು. ಆದರೆ ಬೆಲೆ ಕುಸಿತದಿಂದ ರೈತರು ಈ ಬೆಳೆ ಬೆಳೆಯುವುದನ್ನು ನಿಲ್ಲಿಸಿದ್ದಾರೆ. ನಾನು ಮತ್ತು ನನ್ನ ಕುಟುಂಬ ಮೂರ್ನಾಲ್ಕು ದಶಕಗಳಿಂದ ಅರಿಶಿನ ಬೆಳೆದಿದ್ದೇವೆ. 2010ರಲ್ಲಿ ಕ್ವಿಂಟಾಲ್‌ಗೆ 18 ಸಾವಿರ ರೂ.ಇದ್ದ ಬೆಲೆ ಎರಡು ವರ್ಷಗಳ ನಂತರ 2500 ರೂ.ಗೆ ಕುಸಿದಿದೆ. ಒಂದು ಚೀಲ ಅರಿಶಿಣ ಬೆಳೆಯಲು 8 ಸಾವಿರ ರೂಪಾಯಿ ಖರ್ಚು ಮಾಡಬೇಕಾಗಿ ಬಂದಿದ್ದರಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದೇವೆ. ದೆಹಲಿಯ ಜಂತರ್ ಮಂತರ್ ಗೆ ಹೋಗಿ ಪ್ರತಿಭಟನೆ ನಡೆಸಿದೆವು ಎಂದು ಹುಣಸೂರಿನ ರೈತ ಮಾಣಿಕ್ಯ ನಂಜುಂಡೇಗೌಡ ಹೇಳಿದ್ದಾರೆ.

ಕೇಂದ್ರ ಸರಕಾರ ಕ್ವಿಂಟಾಲ್‌ಗೆ 4 ಸಾವಿರ ರೂ.ಗೆ ಬೆಂಬಲ ನೀಡಲು ಒಪ್ಪಿಗೆ ನೀಡಿದ್ದು, ರಾಜ್ಯ ಸರಕಾರ ಹೆಚ್ಚುವರಿಯಾಗಿ 1000 ರೂ. ನೀಡಲು ನಿರ್ಧರಿಸಿತ್ತು,  ಆದರೆ ಶೀಘ್ರದಲ್ಲೇ, ಬೆಲೆಗಳು ಮತ್ತೆ ಕುಸಿದವು. ಹೀಗಾಗಿ ನಾನು ಅರಿಶಿನ ಬೆಳೆಯುವುದನ್ನು ನಿಲ್ಲಿಸಿದೆ. ಅನೇಕರು ಅರಿಶಿನದಿಂದ ಶುಂಠಿಗೆ ಬದಲಾಯಿಸಿದರು, ಇದು ನಮಗೆ ಉತ್ತಮ ಗಳಿಕೆಯನ್ನು ನೀಡುತ್ತಿದೆ. ಕೆಲವರು ತಂಬಾಕು ಬೆಳೆಯಲು ಆರಂಭಿಸಿದರು. ಇಲ್ಲಿರುವ ನನ್ನ ಸಂಬಂಧಿಕರು, ಇನ್ನೂ ಅರಿಶಿನ ಬೆಳೆಯುತ್ತಾರೆ. ಪರಿಸ್ಥಿತಿ ಸುಧಾರಿಸಿದರೆ, ನಾನು ಮತ್ತೆ ಅರಿಶಿನವನ್ನು ಬೆಳೆಯಲು ಪ್ರಾರಂಭಿಸುತ್ತೇನೆ ಎಂದು ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.

ಅರಿಶಿನ ರೈತರಿಗೆ ಖಚಿತವಾದ ಎಂಎಸ್‌ಪಿ ಅಗತ್ಯವಿದೆ ಮತ್ತು ಇದು ಚುನಾವಣೆಯ ಸಮಯದ ಘೋಷಣೆಯಾಗಬಾರದು, ನಿಜವಾಗಿಯೂ ಕನಿಷ್ಠ ಬೆಂಬಲ ಬೆಲೆ ನೀಡಿದರೇ ಹೆಚ್ಚಿನ ಸಹಾಯ ಮಾಡುತ್ತದೆ. ಬೇರೆ ಯಾವ ವೃತ್ತಿಯಲ್ಲಿ ನೀವು ಇಷ್ಟು ಹತಾಶೆ ಮತ್ತು ಆತ್ಮಹತ್ಯೆಗಳನ್ನು ನೋಡುತ್ತೀರಿ? ವೃತ್ತಿಯಾಗಿ ಕೃಷಿಗೆ ಸಹಾಯ ಮತ್ತು ಅರಿಶಿನ ಬೋರ್ಡ್ ಸ್ವಾಗತಾರ್ಹ. ಆದರೆ ಯಾರಾದರೂ ಸ್ಪಷ್ಟವಾದ ಅಂಶಗಳನ್ನು ತಿಳಿಸಬೇಕು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com