ಚಾಮರಾಜನಗರ: ವ್ಯಕ್ತಿ ಮೇಲೆ ದಾಳಿ ಮಾಡಿ ಅರ್ಧಂಬರ್ಧ ತಿಂದು ಹಾಕಿದ ಹುಲಿ!

ಬಂಡೀಪುರ ವ್ಯಾಪ್ತಿಯ ಹಾಡಿನಕಣಿವೆ ಬಳಿ ವ್ಯಕ್ತಿಯೊಬ್ಬರ ಮೇಲೆ ಹುಲಿ ದಾಳಿ ಮಾಡಿ ದೇಹವನ್ನು ಅರ್ಧಂಬರ್ಧ ತಿಂದು ಹಾಕಿದೆ.
ಮೈಸೂರಿನಲ್ಲಿ ಹುಲಿ ದಾಳಿ (ಸಂಗ್ರಹ ಚಿತ್ರ)
ಮೈಸೂರಿನಲ್ಲಿ ಹುಲಿ ದಾಳಿ (ಸಂಗ್ರಹ ಚಿತ್ರ)

ಚಾಮರಾಜನಗರ: ಬಂಡೀಪುರ ವ್ಯಾಪ್ತಿಯ ಹಾಡಿನಕಣಿವೆ ಬಳಿ ವ್ಯಕ್ತಿಯೊಬ್ಬರ ಮೇಲೆ ಹುಲಿ ದಾಳಿ ಮಾಡಿ ದೇಹವನ್ನು ಅರ್ಧಂಬರ್ಧ ತಿಂದು ಹಾಕಿದೆ.

ಹುಲಿ ದಾಳಿಗೆ ಬಲಿಯಾದ ವ್ಯಕ್ತಿಯನ್ನು 50 ವರ್ಷದ ಬಸವ ಎಂದು ಗುರುತಿಸಲಾಗಿದೆ. ಜೇನುಕುರುಬ ಸಮುದಾಯಕ್ಕೆ ಸೇರಿದ ಬಸಪ್ಪನ ಮೇಲೆ ಹುಲಿ ದಾಳಿ ನಡೆಸಿ ದೇಹವನ್ನು ಕಾಡಿನಂಚಿನ ಎಳೆದೊಯ್ದು ತಿಂದು ಹಾಕಿದೆ. 

ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ನಂತರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಿದ್ದಾರೆ. 

ಬಂಡೀಪುರ ಮಂಗಲ ಮಧ್ಯೆ ಈ ಹಾಡಿನಕಣಿವೆ ಗ್ರಾಮವಿದ್ದು, ಹುಲಿ ದಾಳಿಯಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com