ಉಡುಪಿ: ಲಂಚ ಪಡೆದ ಆರೋಪದ ಮೇಲೆ ಸಬ್‌ಇನ್ಸ್‌ಪೆಕ್ಟರ್ ಅಮಾನತು

ಲಂಚ ಪಡೆದ ಆರೋಪದ ಮೇಲೆ ಉಡುಪಿ ಜಿಲ್ಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಅವರನ್ನು ಅಮಾನತುಗೊಳಿಸಲಾಗಿದೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ
Updated on

ಮಂಗಳೂರು: ಲಂಚ ಪಡೆದ ಆರೋಪದ ಮೇಲೆ ಉಡುಪಿ ಜಿಲ್ಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಅವರನ್ನು ಅಮಾನತುಗೊಳಿಸಲಾಗಿದೆ.

ಕೋಟ ಪೊಲೀಸ್ ಠಾಣೆಯ ಮಾಜಿ ಎಸ್‌ಐ ಮತ್ತು ಸದ್ಯ ಕಾರ್ಕಳದಲ್ಲಿ ಅಧಿಕೃತ ಕರ್ತವ್ಯದಲ್ಲಿ (ಒಒಡಿ) ಕಾರ್ಯನಿರ್ವಹಿಸುತ್ತಿರುವ ಶಂಬುಲಿಂಗಯ್ಯ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಮಿತಿಯೊಳಗಿನ ಕೆಲ ವೈಷಮ್ಯಕ್ಕೆ ಸಂಬಂಧಿಸಿದಂತೆ ಕಾಲೇಜು ಆಡಳಿತ ಮಂಡಳಿ ಸಮಿತಿಯಿಂದ ಶಂಬುಲಿಂಗಯ್ಯ ಲಂಚ ಪಡೆದಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣದಲ್ಲಿ ಸಾಮಾಜಿಕ ಕಾರ್ಯಕರ್ತರೊಬ್ಬರು ವಿಡಿಯೋ ಮೂಲಕ ದೂರು ನೀಡಿದ್ದರು.

ಮಧು ಭಾಸ್ಕರ್ ಮತ್ತು ಮಹಿಮಾ ಮಧು ಭಾಸ್ಕರ್ ಅವರು ಅಚ್ಲಾಡಿಯಲ್ಲಿ ನಡೆಸುತ್ತಿರುವ ಖಾಸಗಿ ಕಾಲೇಜಿನ ಆಡಳಿತ ಮಂಡಳಿ ಸಮಿತಿ ಸದಸ್ಯರ ನಡುವಿನ ಸಮಸ್ಯೆಯ ಕುರಿತು ದೂರು ಮತ್ತು ಪ್ರತಿದೂರು ದಾಖಲಿಸಿದ್ದರು.

ಕಾಲೇಜು ಸಮಿತಿಯೊಳಗಿನ ವೈಷಮ್ಯದಲ್ಲಿ ಮಹಿಮಾ ಮಧು ಭಾಸ್ಕರ್‌ಗೆ ಸಹಾಯ ಮಾಡಲು ಕೋಟ ಪೊಲೀಸ್ ಠಾಣೆಯ ಅಂದಿನ ಠಾಣಾಧಿಕಾರಿ ಶಂಬುಲಿಂಗಯ್ಯ ಲಂಚ ಪಡೆದಿದ್ದರು. ಪೊಲೀಸ್ ಅಧಿಕಾರಿ ಲಂಚದ ಮೊತ್ತವನ್ನು ತಮ್ಮ ಸಂಬಂಧಿಕರೊಬ್ಬರ ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಪ್ರಾಥಮಿಕ ತನಿಖೆಯ ನಂತರ ಅಮಾನತು ಆದೇಶ ಹೊರಬಿದ್ದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com