ವಿದ್ಯುತ್ ಬಳಕೆ- ಪೂರೈಕೆಯಲ್ಲಿ ಸಮತೋಲನ: ರಾಜ್ಯದಲ್ಲಿಲ್ಲ ವಿದ್ಯುಚ್ಛಕ್ತಿ ಕೊರತೆ!

ಇಂಧನ ಇಲಾಖೆಯ ಅಂಕಿಅಂಶಗಳ ಪ್ರಕಾರ, ರಾಜ್ಯವು ಪ್ರತಿ ಯೂನಿಟ್‌ಗೆ 6.66 ರೂ.ಗೆ ವಿದ್ಯುತ್ ಖರೀದಿಸಿದೆ ಮತ್ತು ಪ್ರತಿ ಯೂನಿಟ್‌ಗೆ 4.16 ರೂ.ಗೆ ವಿದ್ಯುತ್ ಮಾರಾಟ ಮಾಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕಳೆದ ಎರಡು ತಿಂಗಳಿನಿಂದ ಕರ್ನಾಟಕದಲ್ಲಿ ವಿದ್ಯುತ್ ಸಮಸ್ಯೆ ಎದುರಿಸುತ್ತಿರುವ ರಾಜ್ಯವು ಈಗ ವಿದ್ಯುತ್ ಬೇಡಿಕೆ ಮತ್ತು ಪೂರೈಕೆಯನ್ನು ಸಮತೋಲನದಲ್ಲಿಟ್ಟುಕೊಂಡಿದೆ. ಆದರೂ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

ವಿದ್ಯುತ್  ಉಳಿಸಲು ಮತ್ತು ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳು ಅಗತ್ಯವಿದ್ದಷ್ಟು ಮಾತ್ರ ಬಳಕೆ ಮಾಡಲು ಜನರಿಗೆ ಮನವಿ ಮಾಡುತ್ತೇವೆ. ಅಂದರೆ ಯೋಜನೆಗೆ ಅರ್ಹರಾಗಲು ಅವರ ವಿದ್ಯುತ್ ಬಳಕೆಯನ್ನು ಸೀಮಿತಗೊಳಿಸುವುದು ಇದರ ಉದ್ದೇಶವಾಗಿದೆ.

ಕರ್ನಾಟಕ ವಿದ್ಯುಚ್ಛಕ್ತಿ ಕಾಯಿದೆಯ ಸೆಕ್ಷನ್ 11 - ನಿರ್ದಿಷ್ಟ ವಲಯಗಳಿಗೆ ವಿದ್ಯುತ್ ಸರಬರಾಜಿಗೆ ಆದ್ಯತೆ ನೀಡಲು ವಿದ್ಯುತ್ ಉತ್ಪಾದಕರ ನೆರವು ಪಡೆಯುವಂತೆ ಸರ್ಕಾರಕ್ಕೆ ಅನುಮತಿ ನೀಡಿದ ನಂತರ, ರಾಜ್ಯ ಸರ್ಕಾರವು ವಿದ್ಯುತ್ ಖರೀದಿಸುತ್ತಿದೆ. ಇಂಧನ ಇಲಾಖೆಯ ಅಂಕಿಅಂಶಗಳ ಪ್ರಕಾರ, ರಾಜ್ಯವು ಪ್ರತಿ ಯೂನಿಟ್‌ಗೆ 6.66 ರೂ.ಗೆ ವಿದ್ಯುತ್ ಖರೀದಿಸಿದೆ ಮತ್ತು ಪ್ರತಿ ಯೂನಿಟ್‌ಗೆ 4.16 ರೂ.ಗೆ ವಿದ್ಯುತ್ ಮಾರಾಟ ಮಾಡಿದೆ.

ಡಿಸೆಂಬರ್ 13, 2023 ರವರೆಗೆ, ರಾಜ್ಯವು 1905.80 ಮಿಲಿಯನ್ ಯುನಿಟ್‌ಗಳನ್ನು (MU) ಖರೀದಿಸಿದೆ, ಇದರ ವೆಚ್ಚ 1268.55 ಕೋಟಿ ರೂ ಆಗಿದೆ, ಹೀಗಾಗಿ ವಿದ್ಯುತ್ ಬಿಕ್ಕಟ್ಟನ್ನು ಎದುರಿಸಲು, ರಾಜ್ಯವು ಪಂಜಾಬ್‌ನಿಂದ 300 ಮೆಗಾವ್ಯಾಟ್ ಮತ್ತು ಉತ್ತರ ಪ್ರದೇಶದಿಂದ 700 ಮೆಗಾವ್ಯಾಟ್ ವಿದ್ಯುತ್ ಅನ್ನು ವಿನಿಮಯ ವ್ಯವಸ್ಥೆಯಡಿ ಖರೀದಿಸಿದೆ, ಮಳೆಗಾಲದ ಅವಧಿಯಲ್ಲಿ (ಜೂನ್-ಸೆಪ್ಟೆಂಬರ್) ಎರಡೂ ರಾಜ್ಯಗಳಿಗೆ 105% ವಿದ್ಯುತ್ ಹಿಂತಿರುಗಿಸುವ ಒಪ್ಪಂದವಾಗಿದೆ )

ಖರೀದಿ ಸಾಮರ್ಥ್ಯ ಮತ್ತು ವಿನಿಮಯ ವ್ಯಾಪಾರದೊಂದಿಗೆ ನಾವು ಈ ಸಮಯದಲ್ಲಿ ಸ್ಥಿರ ಪರಿಸ್ಥಿತಿಯಲ್ಲಿದ್ದೇವೆ. ಆದರೆ ಮುಂದಿನ ದಿನಗಳಲ್ಲಿ ಬೇಡಿಕೆ ಹೆಚ್ಚಲಿದೆ. ಈ ಹಂತ ತಲುಪಲು, ಹಲವಾರು ತಂತ್ರಗಳನ್ನು ಅಳವಡಿಸಿಕೊಳ್ಳಲಾಗಿದೆ.  ಬೇಡಿಕೆ ಮತ್ತು ದರವು ಕಡಿಮೆ ಇದ್ದಾಗ ವಿದ್ಯುತ್ ಖರೀದಿಸಲಾಗಿದೆ, ಆದ್ದರಿಂದ ರಾಜ್ಯ ಸರ್ಕಾರಕ್ಕೆ ಹೆಚ್ಚಿನ ಆರ್ಥಿಕ ಹೊರೆ ಇರುವುದಿಲ್ಲ ಎಂದು ಅಧಿಕಾರಿಯೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಮಳೆ ಕೊರತೆಯನ್ನು ಗಮನದಲ್ಲಿಟ್ಟುಕೊಂಡು, ಹೈಡಲ್ ಸಂಪನ್ಮೂಲಗಳನ್ನು ಸಂರಕ್ಷಿಸಲಾಗುತ್ತಿದೆ, ಉಷ್ಣ ವಿದ್ಯುತ್ ಉತ್ಪಾದನೆ ಮೇಲೆ ಸ್ವಲ್ಪ ಒತ್ತಡ ಹಾಕಲಾಗುತ್ತದೆ. ಇದು ಬರಗಾಲದ ಅವಧಿಯಾಗಿರುವಪದರಿಂದ ಸೌರಶಕ್ತಿಯ ಮೇಲೆ ಗರಿಷ್ಠ ಒತ್ತಡವನ್ನು ಹಾಕಲಾಗುತ್ತದೆ.

ನಾವು ಹೈಡಲ್ ಉತ್ಪಾದನೆಯನ್ನು ಕನಿಷ್ಠ 10-12 ಮಿಲಿಯನ್ ಯುನಿಟ್ ಗೆ ಇಳಿಸಿದ್ದೇವೆ ಮತ್ತು ಹಿಂದಿನ 20-25 ಮಿಲಿಯನ್ ಯುನಿಟ್ ನಿಂದ ರಾತ್ರಿ ಸಮಯದಲ್ಲಿ ಮಾತ್ರ ಬಳಸುತ್ತೇವೆ. ಪೀಕ್ ಅವರ್‌ಗಳಲ್ಲಿ ಸೌರ ಉತ್ಪಾದನೆಯನ್ನು 2,000MW ವರೆಗೆ ಹೆಚ್ಚಿಸಲಾಗಿದೆ. ಮೋಡದ ವಾತಾವರಣ ಇದ್ದಾಗ ಅದು 600-700ಮೆಗಾ ವ್ಯಾಟ್ ಗೆ ಇಳಿಯುತ್ತದೆ.

ಹೀಗಾಗಿ ಈ ಸಮಯದಲ್ಲಿ ಹೈಡಲ್, ಪವನ, ಥರ್ಮಲ್ ಮತ್ತು ಖರೀದಿಸಿದ ವಿದ್ಯುತ್ ಬಳಸಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದರು. ಇಂಧನ ಇಲಾಖೆ ಪ್ರಕಾರ, ಡಿ.15ಕ್ಕೆ ಉಷ್ಣ ಉತ್ಪಾದನೆ 47.16 ಎಂಯು, ಜಲವಿದ್ಯುತ್ ಉತ್ಪಾದನೆ 12.87 ಎಂಯು, ಸೌರ ಉತ್ಪಾದನೆ 37.86 ಎಂಯು ಮತ್ತು ಪವನ ವಿದ್ಯುತ್ ಉತ್ಪಾದನೆ 23.13 ಮಿಲಿಯನ್ ಯೂನಿಟ್ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com