ಇಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳಿ: ಸಿಐಐಗೆ ಡಿಸಿಎಂ ಡಿ ಕೆ ಶಿವಕುಮಾರ್ ಸೂಚನೆ

ಐಟಿ ರಾಜಧಾನಿಯಾದ ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಕಾರ್ಯಕ್ರಮಗಳನ್ನು ಆಯೋಜಿಸಲು ಭಾರತೀಯ ಕೈಗಾರಿಕೆಗಳ ಒಕ್ಕೂಟಕ್ಕೆ (ಸಿಐಐ) ಸರ್ಕಾರ ಬೆಂಬಲ ನೀಡಲಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭರವಸೆ ನೀಡಿದ್ದಾರೆ.
ಬೆಂಗಳೂರು ಅಂತರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ 'ಎಕ್ಸ್‌ಕಾನ್ 2023' ಕಾರ್ಯಕ್ರಮದ ಮುಕ್ತಾಯ ಸಮಾರಂಭದಲ್ಲಿ ಎಕ್ಸ್‌ಕಾನ್ ವಸ್ತು ಪ್ರದರ್ಶನದಲ್ಲಿದ್ದ ಉಪಕರಣ ವೀಕ್ಷಿಸಿದ ಡಿ ಕೆ ಶಿವಕುಮಾರ್(ಡಿ ಕೆ ಶಿವಕುಮಾರ್ ಟ್ವಿಟ್ಟರ್ ಪೇಜ್-ಫೋಟೋ ಕೃಪೆ)
ಬೆಂಗಳೂರು ಅಂತರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ 'ಎಕ್ಸ್‌ಕಾನ್ 2023' ಕಾರ್ಯಕ್ರಮದ ಮುಕ್ತಾಯ ಸಮಾರಂಭದಲ್ಲಿ ಎಕ್ಸ್‌ಕಾನ್ ವಸ್ತು ಪ್ರದರ್ಶನದಲ್ಲಿದ್ದ ಉಪಕರಣ ವೀಕ್ಷಿಸಿದ ಡಿ ಕೆ ಶಿವಕುಮಾರ್(ಡಿ ಕೆ ಶಿವಕುಮಾರ್ ಟ್ವಿಟ್ಟರ್ ಪೇಜ್-ಫೋಟೋ ಕೃಪೆ)

ಬೆಂಗಳೂರು: ಐಟಿ ರಾಜಧಾನಿಯಾದ ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಕಾರ್ಯಕ್ರಮಗಳನ್ನು ಆಯೋಜಿಸಲು ಭಾರತೀಯ ಕೈಗಾರಿಕೆಗಳ ಒಕ್ಕೂಟಕ್ಕೆ (ಸಿಐಐ) ಸರ್ಕಾರ ಬೆಂಬಲ ನೀಡಲಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭರವಸೆ ನೀಡಿದ್ದಾರೆ.

ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರ(BIEC)ದಲ್ಲಿ ನಡೆದ 12 ನೇ ಅಂತಾರಾಷ್ಟ್ರೀಯ ನಿರ್ಮಾಣ ಸಲಕರಣೆ ಮತ್ತು ನಿರ್ಮಾಣ ತಂತ್ರಜ್ಞಾನ ವ್ಯಾಪಾರ ಮೇಳ-'ಎಕ್ಸ್‌ಕಾನ್ 2023'ರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು,ಇಂಜಿನಿಯರಿಂಗ್ ವಿದ್ಯಾರ್ಥಿಗಳು ಅತ್ಯಾಧುನಿಕ ತಂತ್ರಜ್ಞಾನಕ್ಕೆ ಒಡ್ಡಿಕೊಳ್ಳುವುದನ್ನು ಪ್ರಧಾನ ಕೈಗಾರಿಕಾ ಸಂಸ್ಥೆಗಳು ಬಳಸಿಕೊಳ್ಳಬೇಕು. ಯುವಜನತೆಯನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಸಿಐಐಗೆ ಸಲಹೆ ನೀಡಿದರು. 

ಸಿಐಐ ದಕ್ಷಿಣ ವಲಯದ ಅಧ್ಯಕ್ಷ ಕಮಲ್ ಬಾಲಿ, ದೇಶದ ಆರ್ಥಿಕ ಮತ್ತು ಸಾಮಾಜಿಕ ಬೆಳವಣಿಗೆಯ ಹಿತಾಸಕ್ತಿಯಲ್ಲಿ ಒಟ್ಟಾಗಿ ಕೆಲಸ ಮಾಡಲು ಸಿಐಐ ಸರ್ಕಾರ, ಉದ್ಯಮ ಮತ್ತು ಶೈಕ್ಷಣಿಕ ಬೆಂಬಲವನ್ನು ಎದುರು ನೋಡುತ್ತಿದೆ. "ಎಕ್ಸ್‌ಕಾನ್-2023 ರ ಪ್ರಮುಖ ಬದಲಾವಣೆಯ ವೇಗ ಮತ್ತು ಡಿಕಾರ್ಬೊನೈಸೇಶನ್, ಭಾರತೀಯ ಉದ್ಯಮದ ಪರಿಪಕ್ವತೆ ಮತ್ತು ತಂತ್ರಜ್ಞಾನದಲ್ಲಿನ ರೂಪಾಂತರದ ಕಡೆಗಿನ ಪ್ರಯತ್ನಗಳಾಗಿವೆ ಎಂದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com