BDA: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಸಿಬ್ಬಂದಿ ಕೊರತೆ!

ಬಿಡಿಎ ಸಿಬ್ಬಂದಿಯ ಸಂಖ್ಯೆ 333 ಇದ್ದು, ಈ ಪೈಕಿ 129 ಮಂದಿ ಬಿಡಿಎ ಉದ್ಯೋಗಿಗಳಾಗಿದ್ದಾರೆ, ಉಳಿದ ಸಿಬ್ಬಂದಿಗಳು ಸರ್ಕಾರದ ವಿವಿಧ ಇಲಾಖೆಗಳಿಂದ ನಿಯೋಜನೆಗೊಂಡಿದ್ದಾರೆ.
ಬಿಡಿಎ ಸಾಂದರ್ಭಿಕ ಚಿತ್ರ
ಬಿಡಿಎ ಸಾಂದರ್ಭಿಕ ಚಿತ್ರ

ಬೆಂಗಳೂರು: ಬಿಡಿಎಗೆ ಕಳೆದ ಬಾರಿ ಸಿಬ್ಬಂದಿಗಳ ನೇರ ನೇಮಕಾತಿ ನಡೆದಿದ್ದು 1996 ರಲ್ಲಿ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕೆಲಸಗಳು ಹಲವು ಪಟ್ಟು ಹೆಚ್ಚಿವೆ, ಆದರೆ ಕಳೆದ 27 ವರ್ಷಗಳಲ್ಲಿ ಯಾವುದೇ ಹೆಚ್ಚುವರಿ ಸಿಬ್ಬಂದಿಯನ್ನು ನೇಮಕ ಮಾಡಲಾಗಿಲ್ಲ ಎಂದು ಅನೇಕ ಅಧಿಕಾರಿಗಳು ಹೇಳಿದ್ದಾರೆ. ಯೋಜನೆಗಳು ಮತ್ತು ಕಡತಗಳು ಆಮೆಗತಿಯಲ್ಲಿ ಸಾಗುತ್ತಿದ್ದು ಸಾರ್ವಜನಿಕರ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ.

ಬಿಡಿಎ ಸಿಬ್ಬಂದಿಯ ಸಂಖ್ಯೆ 333 ಇದ್ದು, ಈ ಪೈಕಿ 129 ಮಂದಿ ಬಿಡಿಎ ಉದ್ಯೋಗಿಗಳಾಗಿದ್ದಾರೆ, ಉಳಿದ ಸಿಬ್ಬಂದಿಗಳು ಸರ್ಕಾರದ ವಿವಿಧ ಇಲಾಖೆಗಳಿಂದ ನಿಯೋಜನೆಗೊಂಡಿದ್ದಾರೆ.

ಬಿಡಿಎ ಸಿಬ್ಬಂದಿಗಳ ಪೈಕಿ ಕೇಸ್ ವರ್ಕರ್ ಗಳು, ಎಫ್ ಡಿಎ, ಎಸ್ ಡಿಎ, ಕ್ಲಾಸ್ ಡಿ ಉದ್ಯೋಗಿಗಳು ಹಾಗೂ ಮೇಲ್ವಿಚಾರಕರು ಇದ್ದಾರೆ. ನಿಯೋಜಿತ ಸಿಬ್ಬಂದಿಯಲ್ಲಿ ಎಂಜಿನಿಯರ್‌ಗಳು ಮತ್ತು ಉಪ ಕಾರ್ಯದರ್ಶಿಗಳು ಇರುತ್ತಾರೆ ಮತ್ತು ಆ ಮಟ್ಟದಲ್ಲಿ ಯಾವುದೇ ಕೊರತೆಯಿಲ್ಲ.

ಹಿರಿಯ ಅಧಿಕಾರಿಯೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿದ್ದು, “ನಾವು ಅಗತ್ಯವಿರುವ ಸಿಬ್ಬಂದಿಗಳಿಗಿಂತ 40% ರಷ್ಟು ಸಿಬ್ಬಂದಿ ಬಲದೊಂದಿಗೆ ಕಾರ್ಯನಿರ್ವಹಿಸುತ್ತಿದ್ದೇವೆ. ಇದು ಪ್ರತಿಯೊಂದು ಚಟುವಟಿಕೆಯ ಮೇಲೆ ಪರಿಣಾಮ ಬೀರುತ್ತದೆ. ಬಿಡಿಎ ಪ್ರಸ್ತುತ 64 ಲೇಔಟ್‌ಗಳನ್ನು ಹೊಂದಿದ್ದು, ಬನಶಂಕರಿ VI ನೇ ಹಂತದ ಲೇಔಟ್ ಮತ್ತು ನಾಡಪ್ರಭು ಕೆಂಪೇಗೌಡ ಲೇಔಟ್ 20,000 ಕ್ಕೂ ಹೆಚ್ಚು ಸೈಟ್‌ಗಳನ್ನು ಹೊಂದಿದೆ. ಇವುಗಳಿಗೆ ಸಂಬಂಧಿಸಿದ ಕೆಲಸಗಳನ್ನು ನಿಭಾಯಿಸಲು ನಾವು ಕೇವಲ 22 ಸೂಪರಿಂಟೆಂಡೆಂಟ್‌ಗಳು, 28 ಎಫ್‌ಡಿಎಗಳು ಮತ್ತು 30 ಎಸ್‌ಡಿಎಗಳನ್ನು ಹೊಂದಿದ್ದೇವೆ.

ನಾಲ್ಕೈದು ಬಡಾವಣೆಗಳ ನಿವಾಸಿಗಳ ಸಮಸ್ಯೆಗಳನ್ನು ಒಬ್ಬರೇ ಕೇಸ್ ವರ್ಕರ್ ನಿಭಾಯಿಸುವ ದುರದೃಷ್ಟಕರ ಸನ್ನಿವೇಶವಿದೆ’ ಎಂದು ಅಧಿಕಾರಿಯೊಬ್ಬರು ವಿವರಿಸಿದ್ದಾರೆ. "129 ಸಿಬ್ಬಂದಿ ಸಂಖ್ಯೆ ಅಸಮರ್ಪಕವಾಗಿದೆ. ಕೆಲಸವನ್ನು ಸರಿಯಾಗಿ ಮಾಡಲು ಕನಿಷ್ಠ 300 ಸಿಬ್ಬಂದಿಗಳ ಸಾಮರ್ಥ್ಯದ ಅಗತ್ಯವಿದೆ” ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com