ಡಾ.ಶಿವರಾಮ ಕಾರಂತ್ ಲೇಔಟ್‌ನಲ್ಲಿ ದೊಡ್ಡ ಸೈಟ್‌ಗಳಿಗೆ ಪ್ರತಿ ಚದರ ಅಡಿಗೆ 4,900 ರೂ. ನಿಗದಿ: ಬಿಡಿಎ

ಚಾಲ್ತಿಯಲ್ಲಿರುವ ಮಾರುಕಟ್ಟೆ ದರವನ್ನು ಮುಂದುವರಿಸಲು, ಡಾ.ಶಿವರಾಮ ಕಾರಂತ್ ಲೇಔಟ್‌ನಲ್ಲಿ ದೊಡ್ಡ ಆಯಾಮದ ನಿವೇಶನಗಳಿಗೆ ಪ್ರತಿ ಚದರ ಅಡಿಗೆ 4,900 ರೂ.ಗಳನ್ನು ನಿಗದಿಪಡಿಸಲು ಬಿಡಿಎ ಮಂಡಳಿ ನಿರ್ಧರಿಸಿದೆ ಎಂದು ಬಿಡಿಎ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. 
ಬಿಡಿಎ
ಬಿಡಿಎ
Updated on

ಬೆಂಗಳೂರು: ಚಾಲ್ತಿಯಲ್ಲಿರುವ ಮಾರುಕಟ್ಟೆ ದರವನ್ನು ಮುಂದುವರಿಸಲು, ಡಾ.ಶಿವರಾಮ ಕಾರಂತ್ ಲೇಔಟ್‌ನಲ್ಲಿ ದೊಡ್ಡ ಆಯಾಮದ ನಿವೇಶನಗಳಿಗೆ ಪ್ರತಿ ಚದರ ಅಡಿಗೆ 4,900 ರೂ.ಗಳನ್ನು ನಿಗದಿಪಡಿಸಲು ಬಿಡಿಎ ಮಂಡಳಿ ನಿರ್ಧರಿಸಿದೆ ಎಂದು ಬಿಡಿಎ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. 

ಇದು 34,000 ನಿವೇಶನಗಳನ್ನು ಹೊಂದಲಿರುವ ಹೊಸ ಬಡಾವಣೆಗೆ ಬಿಡಿಎ ಪ್ರಸ್ತಾಪಿಸಿದ 3,650 ಚದರ ಅಡಿಗಿಂತ ಹೆಚ್ಚು ಎನ್ನಲಾಗಿದೆ. ಈ ಬಗ್ಗೆ ಮಾತನಾಡಿರುವ ಹಿರಿಯ ಅಧಿಕಾರಿಯೊಬ್ಬರು, "ನಾವು ಲೇಔಟ್‌ನಾದ್ಯಂತ ಎಲ್ಲಾ ಸೈಟ್‌ಗಳಿಗೆ ಅಂದರೆ 20x30 sqft ಅಳತೆಯ ಸೈಟಿಗೆ ಪ್ರತಿ ಚದರ ಅಡಿಗೆ 3,650 ರೂ. ಮತ್ತು 30x40 sqft ಆಯಾಮಗಳಿಗೆ ಚಾಲನೆಯಲ್ಲಿರುವ ಸೈಟ್‌ಗಳಿಗೆ ಈ ಬೆಲೆಯನ್ನು ನಿಗದಿಪಡಿಸಲು ಮಂಡಳಿಯು ಒಪ್ಪಿಕೊಂಡಿದೆ. ಆದಾಗ್ಯೂ, ಚಾಲ್ತಿಯಲ್ಲಿರುವ ಮಾರುಕಟ್ಟೆ ದರವು ಪ್ರತಿ ಚದರ ಅಡಿಗೆ 6,000 ರೂ ಇದೆ. ಹೀಗಾಗಿ, ದೊಡ್ಡ ನಿವೇಶನಗಳನ್ನು ಖರೀದಿಸುವವರು ಹೆಚ್ಚಿನ ದರ ಪಾವತಿಸಬೇಕು ಎಂದು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.

ನಾಡಪ್ರಭು ಕೆಂಪೇಗೌಡ ಲೇಔಟ್‌ನಲ್ಲೂ ಒಂದೇ ಬಡಾವಣೆಯಲ್ಲಿ ಇದೇ ರೀತಿಯ ವಿಭಿನ್ನ ಬೆಲೆ ವ್ಯವಸ್ಥೆ ಮಾಡಲಾಗಿದೆ. "40x60 ಚದರ ಅಡಿ ಅಥವಾ 50x60 ಚದರ ಅಡಿ ಅಥವಾ 30x40 ಚದರ ಅಡಿಗಿಂತ ಹೆಚ್ಚಿನ ಆಯಾಮಗಳ ಸೈಟ್‌ಗಳ ಸಂದರ್ಭದಲ್ಲಿ, ರಸ್ತೆಗಳು ಗಣನೀಯವಾಗಿ ಅಗಲವಾಗಿರುತ್ತದೆ. ಇದು ಸೈಟ್‌ನ ಮೌಲ್ಯವನ್ನು ಹೆಚ್ಚಿಸುತ್ತದೆ. ಆದ್ದರಿಂದ, ಹೆಚ್ಚಿನ ಬೆಲೆ ಈ ಅಂಶವನ್ನು ಗಣನೆಗೆ ತೆಗೆದುಕೊಳ್ಳುತ್ತದೆ. 

ಇನ್ನು ಅರ್ಕಾವತಿ ಬಡಾವಣೆಯಲ್ಲಿ ನಿವೇಶನಗಳನ್ನು ಚದರ ಅಡಿಗೆ 250 ರೂ.ಗೆ ಏಕರೂಪವಾಗಿ ಮಾರಾಟ ಮಾಡಿರುವ ಪ್ರಕರಣವನ್ನೂ ಅವರು ಉಲ್ಲೇಖಿಸಿದ್ದಾರೆ. "ಹಂಚಿಕೆದಾರರು ನಂತರ ಅವುಗಳನ್ನು ಇತರ ಆಸಕ್ತ ಖರೀದಿದಾರರಿಗೆ 10 ಪಟ್ಟು ಬೆಲೆಗೆ ಮಾರಾಟ ಮಾಡಿದ್ದಾರೆ ಎಂದು ಅವರು ಗಮನಸೆಳೆದರು.

ಗಡುವು ವಿಸ್ತರಣೆಗೆ ನಿರಾಕರಣೆ
ಡಾ.ಕಾರಂತ ಬಡಾವಣೆಯಲ್ಲಿ ಡಿಸೆಂಬರ್ ಮೊದಲ ವಾರದಲ್ಲಿ ನಿವೇಶನ ಹಂಚಿಕೆಯಾಗಬೇಕಿದ್ದ ನಿವೇಶನ ಹಂಚಿಕೆಗೆ ಗಡುವು ನೀಡಲು ಮತ್ತೊಬ್ಬ ಅಧಿಕಾರಿ ನಿರಾಕರಿಸಿದರು. ''ಭೂಮಿ ಕಳೆದುಕೊಳ್ಳುವ ರೈತರಿಗೆ ಮೊದಲು ನಿವೇಶನ ಹಂಚಿಕೆ ಮಾಡಬೇಕೆಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಹೀಗಾಗಿ ಇಲ್ಲಿನ 15 ಸಾವಿರ ನಿವೇಶನಗಳಿಗೆ ಪರಿಹಾರ ನೀಡದಿದ್ದಲ್ಲಿ ಸಾರ್ವಜನಿಕರು ಕಾಯಬೇಕಾಗುತ್ತದೆ ಎಂದರು. ಪರಿಹಾರದ ಸ್ಥಿತಿಗತಿ ಕುರಿತು ಭೂಸ್ವಾಧೀನ ಇಲಾಖೆಯ ಉಪ ಆಯುಕ್ತೆ ಎ ಸೌಜನ್ಯ ಅವರನ್ನು ಪ್ರಶ್ನಿಸಿದಾಗ, ಪರಿಹಾರಕ್ಕಾಗಿ ಮೀಸಲಿಟ್ಟ 2,900 ಎಕರೆ ಪೈಕಿ ಈಗಾಗಲೇ 500 ಎಕರೆ ಭೂಮಿಯನ್ನು ರೈತರಿಗೆ ಹಕ್ಕುಪತ್ರ ರೂಪದಲ್ಲಿ ಹಸ್ತಾಂತರಿಸಿದ್ದೇವೆ. ಉಳಿದ ಜಮೀನು ಕಳೆದುಕೊಳ್ಳುವ ರೈತರ ಪ್ರಕರಣದಲ್ಲಿ, ದಾಖಲೆಗಳಲ್ಲಿ ಅನೇಕ ವ್ಯತ್ಯಾಸಗಳಿವೆ ಮತ್ತು ಆಸ್ತಿಗಳಿಗೆ ಬಹು ಹಕ್ಕುದಾರರಿದ್ದಾರೆ. ನಾವು ಅವುಗಳನ್ನು ಪ್ರತಿದಿನ ವಿಂಗಡಿಸುತ್ತಿದ್ದೇವೆ. ಅಲ್ಲದೆ, 476 ಎಕರೆ ಕಂದಾಯ ನಿವೇಶನದಾರರಿಗೆ ಸೇರಲಿದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com