
ಮೈಸೂರು: ಜಿಲ್ಲೆಯ ಹುಣಸೂರು ಪಟ್ಟಣದಲ್ಲಿ ತಮ್ಮ ಫೋಟೊ ವೈರಲ್ ಆಗಿದ್ದರಿಂದ ಮನನೊಂದು ಯುವಕ ಮತ್ತು ಗೃಹಿಣಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಮೃತರನ್ನು ಪಟ್ಟಣದ ಕಲ್ಗುಣಿಗೆ ನಿವಾಸಿಗಳಾದ 28 ವರ್ಷದ ವಿವಾಹಿತೆ ಶೃತಿ ಮತ್ತು 20 ವರ್ಷದ ಮುರಳಿ ಎಂದು ಗುರುತಿಸಲಾಗಿದೆ.
ಪೊಲೀಸರ ಪ್ರಕಾರ, ಮುರಳಿ ಮತ್ತು ಶೃತಿ ಸ್ನೇಹಿತರಾಗಿದ್ದು, ಮುರಳಿ ಶೃತಿಯೊಂದಿಗೆ ಫೋಟೊ ತೆಗೆದುಕೊಂಡಿದ್ದನು. ನಂತರ ಈ ಚಿತ್ರವನ್ನು ಆತನ ಸ್ಟೇಟಸ್‌ಗೆ ಅಪ್‌ಲೋಡ್ ಮಾಡಲಾಗಿತ್ತು. ನಂತರ ಈ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ವಿಷಯ ತಿಳಿದ ಶೃತಿ ಮತ್ತು ಮುರಳಿ ಕುಟುಂಬಸ್ಥರು ಜಗಳವಾಡಿದ್ದಾರೆ. ಇದರಿಂದ ಹೆದರಿದ ಶೃತಿ ತನ್ನ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಮತ್ತು ಮುರಳಿ ಕೂಡ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಇವರಿಬ್ಬರ ನಡುವೆ ಅನೈತಿಕ ಸಂಬಂಧವಿದೆಯೇ ಎಂಬುದು ತಿಳಿದಿಲ್ಲ. ಎರಡೂ ಕುಟುಂಬಗಳು ಹುಣಸೂರು ಪೊಲೀಸ್ ಠಾಣೆಯಲ್ಲಿ ದೂರು ಮತ್ತು ಪ್ರತಿದೂರು ದಾಖಲಿಸಿದ್ದು, ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದಾರೆ.
Advertisement