ಶೇ 58ರಷ್ಟು ಬಸ್‌ಗಳಲ್ಲಿ ಆಡಿಯೋ ಘೋಷಣೆ ವ್ಯವಸ್ಥೆ ಇದೆ: ಹೈಕೋರ್ಟ್‌ಗೆ ಬಿಎಂಟಿಸಿ ಮಾಹಿತಿ

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಕರ್ನಾಟಕ ಹೈಕೋರ್ಟ್‌ಗೆ ತನ್ನ ಶೇ 58 ರಷ್ಟು ಬಸ್‌ಗಳು ದೃಷ್ಟಿ ವಿಕಲಚೇತನರ ಅನುಕೂಲಕ್ಕಾಗಿ ಆಡಿಯೋ ಘೋಷಣೆ ವ್ಯವಸ್ಥೆಯನ್ನು ಹೊಂದಿದೆ. ಆದರೆ, 2,562 ಬಸ್‌ಗಳಲ್ಲಿ ಈ ವ್ಯವಸ್ಥೆ ಇಲ್ಲ ಎಂದು ಬುಧವಾರ ತಿಳಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಕರ್ನಾಟಕ ಹೈಕೋರ್ಟ್‌ಗೆ ತನ್ನ ಶೇ 58 ರಷ್ಟು ಬಸ್‌ಗಳು ದೃಷ್ಟಿ ವಿಕಲಚೇತನರ ಅನುಕೂಲಕ್ಕಾಗಿ ಆಡಿಯೋ ಘೋಷಣೆ ವ್ಯವಸ್ಥೆಯನ್ನು ಹೊಂದಿದೆ. ಆದರೆ, 2,562 ಬಸ್‌ಗಳಲ್ಲಿ ಈ ವ್ಯವಸ್ಥೆ ಇಲ್ಲ ಎಂದು ಬುಧವಾರ ತಿಳಿಸಿದೆ.

ಅವರು ಇಳಿಯಬೇಕಿರುವ ಬಸ್ ನಿಲ್ದಾಣಗಳು ಮತ್ತು ಗಮ್ಯಸ್ಥಾನಗಳನ್ನು ಮುಂಚಿತವಾಗಿ ತಿಳಿದುಕೊಳ್ಳಲು ದೃಷ್ಟಿ ದೋಷವುಳ್ಳವರಿಗೆ ಬಸ್‌ಗಳಲ್ಲಿ ಆಡಿಯೋ ಅನೌನ್ಸ್‌ಮೆಂಟ್ ವ್ಯವಸ್ಥೆ ಕಲ್ಪಿಸಲು ನಿರ್ದೇಶನ ನೀಡುವಂತೆ ಕೋರಿ ದೃಷ್ಟಿ ದೋಷವುಳ್ಳ ವಕೀಲ ಎನ್. ಶ್ರೇಯಸ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠಕ್ಕೆ ಈ ಮಾಹಿತಿ ನೀಡಲಾಗಿದೆ. 

2,562 ಬಸ್‌ಗಳಲ್ಲಿ 1,141 ಬಸ್‌ಗಳನ್ನು ಹಂತ-ಹಂತವಾಗಿ ರದ್ದುಗೊಳಿಸಲಾಗುವುದು. ಡಿಸೆಂಬರ್ 24 ರೊಳಗೆ ಸ್ಕ್ರ್ಯಾಪ್ ಮಾಡಿದ ಬಸ್‌ಗಳಿಗೆ ಬದಲಾಗಿ ಹೊಸ 921 ಎಲೆಕ್ಟ್ರಿಕ್ ಬಸ್‌ಗಳನ್ನು ಸೇವೆಗೆ ನಿಯೋಜಿಸಲಾಗುವುದು. 2024 ರಲ್ಲಿ ಟೆಂಡರ್ ಅಧಿಸೂಚನೆಯನ್ನು ಹೊರಡಿಸಲು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ  ಎಂದು ಬಿಎಂಟಿಸಿ ತಿಳಿಸಿದೆ.

2024ರ ಏಪ್ರಿಲ್ 15 ರವರೆಗೆ ಬಸ್‌ಗಳನ್ನು ಖರೀದಿಸಲು ಮತ್ತು ಈ ವ್ಯವಸ್ಥೆಯನ್ನು ಸ್ಥಾಪಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲು ನ್ಯಾಯಾಲಯ ಬಿಎಂಟಿಸಿಗೆ ಅನುಮತಿ ನೀಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com