ಐದು ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಕೆ, ಗಗನಕ್ಕೇರುತ್ತಿರುವ ಚಿನ್ನದ ದರ: ಹಳ್ಳ ಹಿಡಿಯಿತಾ ಸರ್ಕಾರದ 'ಸಪ್ತಪದಿ'!

ಬಡ ಕುಟುಂಬಗಳ ವಧು ಮತ್ತು ವರರಿಗೆ ನೆರವು ನೀಡಲು  ರಾಜ್ಯ ಸರ್ಕಾರವು ತನ್ನ ಮಾಂಗಲ್ಯ ಭಾಗ್ಯ ಯೋಜನೆಯನ್ನು (ಸಾಮೂಹಿಕ ವಿವಾಹ) ಜಾರಿಗೊಳಿಸಿದೆ. ಆದರೆ ಸರ್ಕಾರದ ಐದು ಖಾತರಿ ಯೋಜನೆಗಳಿಗೆ ಹಣವನ್ನು ಹೊಂದಿಸುವುದು ಹಾಗೂ ಏರುತ್ತಿರುವ ಚಿನ್ನದ ಬೆಲೆಯ ಕಾರಣ ರಾಜ್ಯ ಸರ್ಕಾರದ ಸಪ್ತಪದಿ ಕಾರ್ಯ ಹಳ್ಳ ಹಿಡಿಯತ್ತಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಬಡ ಕುಟುಂಬಗಳ ವಧು ಮತ್ತು ವರರಿಗೆ ನೆರವು ನೀಡಲು  ರಾಜ್ಯ ಸರ್ಕಾರವು ತನ್ನ ಮಾಂಗಲ್ಯ ಭಾಗ್ಯ ಯೋಜನೆಯನ್ನು (ಸಾಮೂಹಿಕ ವಿವಾಹ) ಜಾರಿಗೊಳಿಸಿದೆ. ಆದರೆ ಸರ್ಕಾರದ ಐದು ಖಾತರಿ ಯೋಜನೆಗಳಿಗೆ ಹಣವನ್ನು ಹೊಂದಿಸುವುದು ಹಾಗೂ ಏರುತ್ತಿರುವ ಚಿನ್ನದ ಬೆಲೆಯ ಕಾರಣ ರಾಜ್ಯ ಸರ್ಕಾರದ ಸಪ್ತಪದಿ ಕಾರ್ಯ ಹಳ್ಳ ಹಿಡಿಯತ್ತಿದೆ.

2020 ರಲ್ಲಿ ಬಿಎಸ್ ಯಡಿಯೂರಪ್ಪ ಸಿಎಂ ಆಗಿದ್ದಾಗ ಈ ಯೋಜನೆಯನ್ನು  ಜಾರಿಗೆ ತರಲಾಯಿತು. ನಂತರ ಇದನ್ನು "ಸಪ್ತಪದಿ" ಎಂದು ಕರೆಯಲಾಯಿತು. ಆದರೆ ಸಾಂಕ್ರಾಮಿಕ ರೋಗದಿಂದಾಗಿ ಅವರ ಸರ್ಕಾರವು ಆ ವರ್ಷ ಅದನ್ನು ಜಾರಿಗೆ ತರಲು ಸಾಧ್ಯವಾಗಲಿಲ್ಲ.

ದತ್ತಿ ಸಚಿವಾಲಯದ ಅಡಿಯಲ್ಲಿ ಈ ಯೋಜನೆಯನ್ನು 2021 ರಲ್ಲಿ ಪ್ರಾರಂಭಿಸಲಾಯಿತು. ಈ ಯೋಜನೆಯಡಿಯಲ್ಲಿ ಮದುಮಗನಿಗೆ ಶರ್ಟ್ ಮತ್ತು ಧೋತಿ ಮತ್ತು ರೂ 5,000 ನೀಡಲಾಗುವುದು ಮತ್ತು ವಧುವಿಗೆ ರೇಷ್ಮೆ ಸೀರೆ, ರೂ 1,000 ಮತ್ತು 8-ಗ್ರಾಂ ಚಿನ್ನದ ಮಂಗಳಸೂತ್ರವನ್ನು ನೀಡಲಾಗುತ್ತದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಈ ಯೋಜನೆಯನ್ನು ಮಾಂಗಲ್ಯ ಭಾಗ್ಯ ಎಂದು ಮರುನಾಮಕರಣ ಮಾಡಿತು.

ಸರ್ಕಾರವು ತನ್ನ ಐದು ಖಾತರಿಗಳನ್ನು ಜಾರಿಗೆ ತರಲು ವಾರ್ಷಿಕ ಸುಮಾರು 60,000 ಕೋಟಿ ರೂ. ಹಣ ಹೊಂದಿಸಬೇಕಾಗಿದೆ. ಬುಧವಾರ ಚಿನ್ನದ ಬೆಲೆ 10 ಗ್ರಾಂಗೆ 62,800 ರೂ.ಗಳಾಗಿದ್ದು, ಇದು ಸರಕಾರದ ಆರ್ಥಿಕ ಹೊರೆಯನ್ನು ಇನ್ನಷ್ಟು ಹೆಚ್ಚಿಸಲಿದೆ. ಯೋಜನೆಯಡಿಯಲ್ಲಿ 2022 ರಿಂದ ಮಾರ್ಚ್ 2023 ರವರೆಗೆ ನಡೆದಿವೆ ಹಲವು ಸಾಮೂಹಿಕ ವಿವಾಹಗಳು ನಡೆದಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಯಾವುದೇ ಸಾಮೂಹಿಕ ವಿವಾಹಗಳು ನಡೆದಿಲ್ಲ.

ನವೆಂಬರ್, ಡಿಸೆಂಬರ್ ಮತ್ತು ಜನವರಿಯಲ್ಲಿ ಸಾಮೂಹಿಕ ವಿವಾಹಗಳಿಗೆ ದತ್ತಿ ಇಲಾಖೆ ಕೆಲವು ಶುಭ ದಿನಾಂಕಗಳನ್ನು ಅಂತಿಮಗೊಳಿಸಿದೆ ಎಂದು ಮೂಲಗಳು ತಿಳಿಸಿವೆ. ಸಂಕ್ರಾಂತಿಯ ನಂತರ ನಾವು ಕೆಲವು ಶುಭ ಮೂಹೂರ್ತ ಇರುವ  ದಿನಾಂಕಗಳನ್ನು ಹೊಂದಿರುವುದಾಗಿ ಮೂಲಗಳು ತಿಳಿಸಿವೆ.

ಈ ಯೋಜನೆಯಡಿಯಲ್ಲಿ ನಡೆಯುವ ಸಾಮೂಹಿಕ ವಿವಾಹಗಳಲ್ಲಿ ಹೆಚ್ಚಿನ ಸಂಖ್ಯೆಯ ಫಲಾನುಭವಿಗಳು ಪಾಲ್ಗೊಳ್ಳುವುದರಿಂದ ಹೆಚ್ಚಿನ ಹಣದ ಅಗತ್ಯವಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು. ಹೀಗಾಗಿ ಸರಕಾರ ಮುಂದಾಗುತ್ತಿಲ್ಲ. ದತ್ತಿ ಸಚಿವ ರಾಮಲಿಂಗಾ ರೆಡ್ಡಿ ಅವರು ಯೋಜನೆ ಜಾರಿಗೆ ತರುವುದಾಗಿ ಹೇಳಿದ್ದಾರೆ ಆದರೆ ಯಾವಾಗ ಎಂದು ಹೇಳಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com