ಕ್ಯೂಆರ್ ಕೋಡ್‌ ಟಿಕೆಟ್ಸ್, ಸ್ಮಾರ್ಟ್‌ ಕಾರ್ಡ್‌ಗಿಂತ ಮೆಟ್ರೋ ಟೋಕನ್‌ಗಳಿಗೆ ಪ್ರಯಾಣಿಕರು ಆದ್ಯತೆ ನೀಡುತ್ತಿರುವುದೇಕೆ?

QR ಕೋಟ್ ಟಿಕೆಟ್ ಮತ್ತು ಸ್ಮಾರ್ಟ್ ಕಾರ್ಡ್‌ಗಳ ಪ್ರಯಾಣ ದರದಲ್ಲಿ ಶೇ 5ರಷ್ಟು ದರ ಕಡಿತವನ್ನು ನೀಡುತ್ತಿದ್ದರೂ, ಬೆಂಗಳೂರು ಮೆಟ್ರೋ ಪ್ರಯಾಣಿಕರ ಗಣನೀಯ ಪ್ರಮಾಣವು ಇನ್ನೂ ಡಿಜಿಟಲ್ ಆಯ್ಕೆಗಳಿಗಿಂತ ಭೌತಿಕ ಟೋಕನ್ ಪಡೆಯುವಿಕೆಗೆ ಆದ್ಯತೆ ನೀಡುತ್ತಿದ್ದಾರೆ. 
ಬೆಂಗಳೂರು ಮೆಟ್ರೋ ನಿಲ್ದಾಣ (ಸಂಗ್ರಹ ಚಿತ್ರ)
ಬೆಂಗಳೂರು ಮೆಟ್ರೋ ನಿಲ್ದಾಣ (ಸಂಗ್ರಹ ಚಿತ್ರ)

ಬೆಂಗಳೂರು: QR ಕೋಟ್ ಟಿಕೆಟ್ ಮತ್ತು ಸ್ಮಾರ್ಟ್ ಕಾರ್ಡ್‌ಗಳ ಪ್ರಯಾಣ ದರದಲ್ಲಿ ಶೇ 5ರಷ್ಟು ದರ ಕಡಿತವನ್ನು ನೀಡುತ್ತಿದ್ದರೂ, ಬೆಂಗಳೂರು ಮೆಟ್ರೋ ಪ್ರಯಾಣಿಕರ ಗಣನೀಯ ಪ್ರಮಾಣವು ಇನ್ನೂ ಡಿಜಿಟಲ್ ಆಯ್ಕೆಗಳಿಗಿಂತ ಭೌತಿಕ ಟೋಕನ್ ಪಡೆಯುವಿಕೆಗೆ ಆದ್ಯತೆ ನೀಡುತ್ತಿದ್ದಾರೆ. 

ಬಿಎಂಆರ್‌ಸಿಎಲ್‌ನ ಕಾರ್ಯಾಚರಣೆ ಮತ್ತು ನಿರ್ವಹಣೆಯ ಕಾರ್ಯನಿರ್ವಾಹಕ ನಿರ್ದೇಶಕ ಎಎಸ್ ಶಂಕರ್ ಟಿಎನ್ಐಇ ಜೊತೆಗೆ ಮಾತನಾಡಿ, 'ನಾವು ಲಭ್ಯವಿರುವ ಹೊಸ ಪ್ರಯಾಣ ಸೌಲಭ್ಯಗಳನ್ನು ನಿಯಮಿತವಾಗಿ ಜನಪ್ರಿಯಗೊಳಿಸುತ್ತಿದ್ದೇವೆ. ಅದು ಕೂಡ ವೇಗವಾಗಿ ಮತ್ತು ಅಗ್ರಸ್ಥಾನದಲ್ಲಿದೆ. ಆದಾಗ್ಯೂ, ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಇನ್ನೂ ಸರದಿ ಸಾಲಿನಲ್ಲಿ ನಿಲ್ಲಲು ಬಯಸುತ್ತಾರೆ ಮತ್ತು ಕಿಕ್ಕಿರಿದ ಪ್ರಯಾಣಿಕರಿರುವ ಮೆಟ್ರೋ ನಿಲ್ದಾಣಗಳಲ್ಲಿ ಟೋಕನ್ ಅನ್ನು ಬಳಸುತ್ತಿದ್ದಾರೆ' ಎಂದರು.

ನವೆಂಬರ್‌ ತಿಂಗಳ ಮಾಹಿತಿಯನ್ನು ಹಂಚಿಕೊಂಡ ಶಂಕರ್, ಒಟ್ಟು 1,60,66,040 ಪ್ರಯಾಣಿಕರು ಮೆಟ್ರೋದಲ್ಲಿ ಪ್ರಯಾಣಿಸಿದ್ದಾರೆ. ಅಂಕಿ ಅಂಶಗಳ ಪ್ರಕಾರ, 55,54,647 ಪ್ರಯಾಣಿಕರು ಟೋಕನ್ ಖರೀದಿಸಿದ್ದಾರೆ. ಇದು QR ಕೋಡ್ ಟಿಕೆಟ್‌ಗಳನ್ನು ಬಳಸಿದವರ (18,76,894) ಸಂಖ್ಯೆಗಿಂತ ಮೂರು ಪಟ್ಟು ಹೆಚ್ಚಿದೆ. ಸ್ಮಾರ್ಟ್ ಕಾರ್ಡ್ ಬಳಕೆದಾರರ ಸಂಖ್ಯೆ 86,34,499 ಆಗಿದೆ ಎನ್ನುತ್ತಾರೆ.

ಬಿಎಂಆರ್‌ಸಿಎಲ್ ಇತ್ತೀಚೆಗೆ ಗರಿಷ್ಠ ಆರು ಪ್ರಯಾಣಿಕರಿಗೆ ಒಂದೇ QR ಟಿಕೆಟ್ ಅನ್ನು ಬಿಡುಗಡೆ ಮಾಡಿದೆ. ಕೋವಿಡ್ ನಂತರದ ಅವಧಿಯಲ್ಲಿ ಸ್ಮಾರ್ಟ್ ಕಾರ್ಡ್ ಬಳಕೆದಾರರು ಅನೇಕ ತೊಂದರೆಗಳನ್ನು ಎದುರಿಸಿದರು. ಅನೇಕರು ಅವುಗಳನ್ನು ಬ್ಯಾಕಪ್ ಆಗಿ ಇಟ್ಟುಕೊಂಡು, ಟೋಕನ್‌ಗಳನ್ನು ಖರೀದಿಸಲು ಪ್ರಾರಂಭಿಸಿದರು. ಆದರೆ, ಆ ಸಮಸ್ಯೆಗಳನ್ನು ಈಗ ಬಗೆಹರಿಸಲಾಗಿದೆ.

ಟೋಕನ್‌ಗಳನ್ನು ಇನ್ನೂ ಏಕೆ ಬಳಸಲಾಗುತ್ತಿದೆ ಎಂದು ಕೇಳಿದಾಗ, ಮೆಟ್ರೋ ಪ್ರಯಾಣಿಕರಾದ ನಿತಿಕಾ ಕುಮಾರ್ ಪ್ರತಿಕ್ರಿಯಿಸಿ, 'ನೀವು ನಿಯಮಿತವಾಗಿ ಮೆಟ್ರೋದಲ್ಲಿ ಪ್ರಯಾಣಿಸುವವರಾಗಿದ್ದರೆ ಸ್ಮಾರ್ಟ್ ಕಾರ್ಡ್ ಖರೀದಿಸುವುದು ಅರ್ಥಪೂರ್ಣ ಎಂದು ನಾನು ಭಾವಿಸುತ್ತೇನೆ. ಇಲ್ಲದಿದ್ದರೆ, ಯಾವುದೋ ಒಂದು ದಿನ ಮೆಟ್ರೋವನ್ನು ಬಳಸುವುದಕ್ಕೆ ಏಕೆ ಅದನ್ನು ಖರೀದಿಸಬೇಕು ಮತ್ತು ಅದನ್ನು ಪ್ರತಿದಿನ ಒಯ್ಯಬೇಕು?. ನಾನು ಪ್ರಯಾಣಿಸುವಾಗಲೆಲ್ಲ ಟೋಕನ್ ಖರೀದಿಸುವುದು ಮತ್ತು ಅದನ್ನು ವಿಲೇವಾರಿ ಮಾಡುವುದು ನನಗೆ ಹೆಚ್ಚು ಅರ್ಥಪೂರ್ಣವಾಗಿದೆ' ಎನ್ನುತ್ತಾರೆ.

ಮೆಟ್ರೋದಲ್ಲಿ ಪದೇ ಪದೆ ಪ್ರಯಾಣಿಸದ ಮತ್ತೊಬ್ಬ ಪ್ರಯಾಣಿಕರಾದ ಅಬ್ದುಲ್ ಅಲೀಮ್, 'ಮೆಟ್ರೋವನ್ನು ಆಗಾಗ್ಗೆ ಬಳಸದ ಬಳಕೆದಾರರು ಕಾರ್ಡ್ ಖರೀದಿಸುವಾಗ ಅನಗತ್ಯವಾಗಿ 50 ರೂ.ಗಳನ್ನು ಅದರಲ್ಲಿ ಬಿಡಬೇಕು ಎಂದು ನಾನು ಭಾವಿಸುತ್ತೇನೆ. ಹೆಚ್ಚು ಮಂದಿ ಕಾರ್ಡ್ ಬಳಸುವವರಾದರೆ ಅದರಿಂದ ಬಿಎಂಆರ್‌ಸಿಎಲ್‌ಗೆ ಹೆಚ್ಚಿನ ಆದಾಯ ಲಭ್ಯವಾಗುತ್ತದೆ. ಕಾರ್ಡ್‌ನಲ್ಲಿ ವಿಧಿಸಲಾದ ಶುಲ್ಕವನ್ನು ಮನ್ನಾ ಮಾಡಲು ಅವರು ಪರಿಗಣಿಸಬೇಕು ಎಂದು ನಾನು ಭಾವಿಸುತ್ತೇನೆ' ಎನ್ನುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com