ಡ್ರಗ್ಸ್ ಸೇವಿಸಿ ವಾಹನ ಚಾಲನೆ ಮಾಡಿದರೆ ಜೋಕೆ: ಕಠಿಣ ಕ್ರಮಕ್ಕೆ ಬೆಂಗಳೂರು ಸಂಚಾರಿ ಪೊಲೀಸರು ಮುಂದು!

ಮಾದಕ ದ್ರವ್ಯ ಸೇವಿಸಿ ವಾಹನ ಚಲಾಯಿಸುತ್ತಿದ್ದವರ ವಿರುದ್ಧ ಬೆಂಗಳೂರು ನಗರ ಸಂಚಾರ ಪೊಲೀಸರು (BTP) ಚಾಟಿ ಬೀಸಿದ್ದಾರೆ. ಇದುವರೆಗೆ, ಸಂಚಾರ ನಿಯಮ ಉಲ್ಲಂಘಿಸಿದ ಸವಾರರು ಹಾಗೂ ಚಾಲಕರನ್ನು ತಪಾಸಣೆ ನಡೆಸಿ, ಕುಡಿದು ವಾಹನ ಚಲಾಯಿಸುವ ಪ್ರಕರಣಗಳನ್ನು ದಾಖಲಿಸಲಾಗುತ್ತಿತ್ತು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಮಾದಕ ದ್ರವ್ಯ ಸೇವಿಸಿ ವಾಹನ ಚಲಾಯಿಸುತ್ತಿದ್ದವರ ವಿರುದ್ಧ ಬೆಂಗಳೂರು ನಗರ ಸಂಚಾರ ಪೊಲೀಸರು (BTP) ಚಾಟಿ ಬೀಸಿದ್ದಾರೆ. ಇದುವರೆಗೆ, ಸಂಚಾರ ನಿಯಮ ಉಲ್ಲಂಘಿಸಿದ ಸವಾರರು ಹಾಗೂ ಚಾಲಕರನ್ನು ತಪಾಸಣೆ ನಡೆಸಿ, ಕುಡಿದು ವಾಹನ ಚಲಾಯಿಸುವ ಪ್ರಕರಣಗಳನ್ನು ದಾಖಲಿಸಲಾಗುತ್ತಿತ್ತು. ಆದರೆ ಇನ್ನು ಮುಂದೆ ಮೋಜು, ಮಸ್ತಿಗೆಂದು ಜಾಲಿ ರೈಡ್ ಮಾಡುವವರು,  ಡ್ರ್ಯಾಗ್ ರೇಸ್‌ಗಳನ್ನು ಮಾಡುವವರು ಮತ್ತು ಮದ್ಯ, ಸೇವಿಸಿ ವಾಹನ ಚಾಲನೆ ಮಾಡುವವರನ್ನು ತಪಾಸಣೆ ಮಾಡಲಾಗುತ್ತಿತ್ತು. ಇನ್ನು ಮುಂದೆ ಮಾದಕ ವಸ್ತು ಸೇವಿಸಿ ರಸ್ತೆ ಅಪಘಾತಗಳಿಗೆ ಕಾರಣರಾದವರನ್ನು ಕಡ್ಡಾಯವಾಗಿ ಮಾರ್ಗ ಮಧ್ಯೆ ನಿಲ್ಲಿಸಿ ಪರೀಕ್ಷೆ ಮಾಡಲಾಗುತ್ತದೆ. 

ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪ್ರತಿನಿಧಿಗೆ ಮಾಹಿತಿ ನೀಡಿದ ಸಂಚಾರ ಪೊಲೀಸ್ ಇಲಾಖೆಯ ಜಂಟಿ ಆಯುಕ್ತ ಎಂಎನ್ ಅನುಚೇತ್, ರಸ್ತೆ ಅಪಘಾತಗಳ ನಂತರ ರಕ್ತ ಪರೀಕ್ಷೆಗಳು ನಿಯಮಿತವಾದವು, ಆದರೆ ಈಗ, ಪ್ರತಿ ರಸ್ತೆ ಅಪಘಾತ ಮತ್ತು ವೀಲಿಂಗ್ ಮಾಡುವವರು, ಡ್ರ್ಯಾಗ್ ರೇಸ್‌ಗಳಲ್ಲಿ ತೊಡಗಿರುವವರ ರಕ್ತದ ಮಾದರಿಯನ್ನು ಪರೀಕ್ಷೆ ಮಾಡಲಾಗುತ್ತದೆ. ರಸ್ತೆ ಅಪಘಾತಗಳಾದಾಗ ಮಾರಣಾಂತಿಕ ಮತ್ತು ಮಾರಣಾಂತಿಕವಲ್ಲದ ಪ್ರಕರಣಗಳಲ್ಲಿ ರಕ್ತದ ಆಲ್ಕೋಹಾಲ್ ಪರೀಕ್ಷೆಗಳನ್ನು ನಡೆಸುತ್ತೇವೆ. ಹಿಂದೆ, ಇದನ್ನು ಮಾರಣಾಂತಿಕ ಪ್ರಕರಣಗಳಲ್ಲಿ ಮಾತ್ರ ಮಾಡಲಾಗುತ್ತಿತ್ತು ಎಂದರು. 

Drug(ಮಾದಕ ವಸ್ತು) ಡ್ರೈವಿಂಗ್ ಮಾಡಿದವರು ರಸ್ತೆಯಲ್ಲಿರುವವರಿಗೆ ಗಂಭೀರ ಅಪಾಯವನ್ನುಂಟುಮಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹೆಚ್ಚಿನ ಗಾಂಜಾ ಹೊಂದಿರುವ ವ್ಯಕ್ತಿಯು ವಾಹನ ಚಾಲನೆ ಮಾಡುವಾಗ ಸಮಯ ಮತ್ತು ದೂರದ ನಿರ್ಣಯ ಮಾಡಲು ದುರ್ಬಲನಾಗಿರುತ್ತಾನೆ, ಕಡಿಮೆ ಸಮನ್ವಯತೆ, ನಿಧಾನ ಪ್ರತಿಕ್ರಿಯೆ ಸಮಯವನ್ನು ಹೊಂದಿರುತ್ತಾನೆ. ಕೊಕೇನ್ ಅಥವಾ ಮೆಥಾಂಫೆಟಮೈನ್‌ನ ಪ್ರಭಾವದಲ್ಲಿರುವವರು ಚಾಲನೆ ಮಾಡುವಾಗ ಆಕ್ರಮಣಕಾರಿ ಮತ್ತು ಅಜಾಗರೂಕರಾಗಬಹುದು ಮತ್ತು ಬೆಂಜೊಡಿಯಜೆಪೈನ್‌ಗಳು (ಆತಂಕ, ಇತರ ಮಾನಸಿಕ ಆರೋಗ್ಯ ಪರಿಸ್ಥಿತಿಗಳು ಮತ್ತು ರೋಗಗ್ರಸ್ತವಾಗುವಿಕೆಗಳಿಗೆ ತೆಗೆದುಕೊಳ್ಳಲಾದ ಔಷಧಿಗಳ ಒಂದು ವರ್ಗ) ಮತ್ತು ಒಪಿಯಾಡ್‌ಗಳು ಸೇರಿದಂತೆ ಪ್ರಿಸ್ಕ್ರಿಪ್ಷನ್ ಔಷಧಿಗಳನ್ನು ಸೇವಿಸುವವರು ಅರೆನಿದ್ರಾವಸ್ಥೆ, ತಲೆತಿರುಗುವಿಕೆ ಅನುಭವವನ್ನು ಅನುಭವಿಸಬಹುದು. ಆಲೋಚನೆ ಮತ್ತು ನಿರ್ಣಯದಂತಹ ದುರ್ಬಲ ಅರಿವಿನ ಕೊರತೆಯುಂಟಾಗಬಹುದು. ಮಾದಕ ವ್ಯಸನದ ಚಾಲನೆಯು ವಾಹನ ಅಪಘಾತಗಳಿಗೆ ಮತ್ತು ಜೀವಹಾನಿಗೆ ಕಾರಣವಾಗಬಹುದು.

ಕಳೆದ ಐದು ತಿಂಗಳುಗಳಲ್ಲಿ, ಬೆಂಗಳೂರು ಸಂಚಾರ ಪೊಲೀಸರು ಮೂರು ಮಾರಣಾಂತಿಕ ಮತ್ತು ಐದು ಮಾರಣಾಂತಿಕವಲ್ಲದ ಅಪಘಾತ ಪ್ರಕರಣಗಳನ್ನು ದಾಖಲಿಸಿದ್ದಾರೆ. ಆರೋಪಿಯು ಕಾನೂನು ಮಿತಿಗಿಂತ ಹೆಚ್ಚು ರಕ್ತದ ಆಲ್ಕೋಹಾಲ್ ಅಂಶವನ್ನು (BAC) ಹೊಂದಿರುವುದು ಕಂಡುಬಂದಿದೆ. ಮಾರಣಾಂತಿಕ ಪ್ರಕರಣಗಳಲ್ಲಿ, ನಾವು ಸೆಕ್ಷನ್ 304 ಭಾರತೀಯ ದಂಡ ಸಂಹಿತೆ (IPC) ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿದ್ದು, ಅದನ್ನು ಅಪಘಾತದಿಂದ ಅಪರಾಧಿ ನರಹತ್ಯೆ ಎಂದು ಪರಿಗಣಿಸುತ್ತೇವೆ ಎಂದು ಅನುಚೇತ್ ಹೇಳಿದರು.

ಐಪಿಸಿ ಸೆಕ್ಷನ್ 304 ರ ಅಡಿಯಲ್ಲಿ ಶಿಕ್ಷೆಗೆ 10 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ. ಮಾರಣಾಂತಿಕ ಅಪಘಾತಗಳಲ್ಲಿ ಭಾಗಿಯಾದವರು ಮತ್ತು ಮದ್ಯಪಾನದ ಪರೀಕ್ಷೆಯಲ್ಲಿ ನೆಗೆಟಿವ್ ಬಂದರೆ ಸಾವಿಗೆ ಕಾರಣವಾದ ನಿರ್ಲಕ್ಷ್ಯಕ್ಕಾಗಿ ಐಪಿಸಿ ಸೆಕ್ಷನ್ 304 ಎ ಅಡಿಯಲ್ಲಿ ದಾಖಲಿಸಲಾಗುತ್ತದೆ. ದಂಡದೊಂದಿಗೆ ಅಥವಾ ಇಲ್ಲದೆಯೇ ಎರಡು ವರ್ಷಗಳ ಶಿಕ್ಷೆಯಾಗಬಹುದು. ಮಾರಣಾಂತಿಕವಲ್ಲದ ಅಪಘಾತಗಳಲ್ಲಿ ಭಾಗಿಯಾಗಿರುವವರು ಮತ್ತು ಡ್ರಗ್ಸ್ ಪಾಸಿಟಿವ್ ಎಂದು ಪರೀಕ್ಷಿಸಿದವರ ವಿರುದ್ಧ ಐಪಿಸಿಯ ಸೆಕ್ಷನ್‌ಗಳ ಜೊತೆಗೆ ಎನ್‌ಡಿಪಿಎಸ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುತ್ತದೆ.

ಈ ತಿಂಗಳ ಆರಂಭದಲ್ಲಿ, ಕಾಮಾಕ್ಷಿಪಾಳ್ಯ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ವೀಲಿಂಗ್ ಪ್ರಕರಣದಲ್ಲಿ, ಆರೋಪಿಯೊಬ್ಬ ಗಾಂಜಾ ಸೇವಿಸಿದ್ದು ಪತ್ತೆಯಾಗಿದ್ದು, ಮಾದಕ ದ್ರವ್ಯ ಮತ್ತು ಸೈಕೋಟ್ರೋಪಿಕ್ ಪದಾರ್ಥಗಳ (NDPS) ಕಾಯ್ದೆಯಡಿ ಬಂಧಿಸಲಾಯಿತು. 

ಡ್ರಗ್ಸ್ ಹಾವಳಿ ವಿರುದ್ಧ ಪೊಲೀಸರು ಇತ್ತೀಚೆಗೆ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಹದಿನೈದು ದಿನಗಳ ಹಿಂದೆ ಕೇಂದ್ರ ಅಪರಾಧ ವಿಭಾಗದ ಪೊಲೀಸರು ನೈಜೀರಿಯಾ ಪ್ರಜೆಯೊಬ್ಬರನ್ನು ಬಂಧಿಸಿ 21 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಮಾದಕ ದ್ರವ್ಯಗಳನ್ನು ವಶಪಡಿಸಿಕೊಂಡಿದ್ದರು. ರಾಜ್ಯಾದ್ಯಂತ ಶಾಲಾ-ಕಾಲೇಜುಗಳಲ್ಲಿ ಮಾದಕ ವಸ್ತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಡಿಜಿ ಮತ್ತು ಐಜಿಪಿ ಅಲೋಕ್ ಮೋಹನ್ ಅವರು ಎಲ್ಲಾ ಘಟಕದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com