ಹಾಡಿ, ಗಡಿ ಗ್ರಾಮಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಜನರ ವಲಸೆ ತಪ್ಪಿಸುವಲ್ಲಿ ಉದ್ಯೋಗ ಖಾತ್ರಿ ವಿಫಲ

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯೂ ಅರ್ಜಿ ಸಲ್ಲಿಸಿದ 15 ದಿನಗಳಲ್ಲಿ ಪ್ರತಿ ಮನೆಗೆ ವರ್ಷಕ್ಕೆ 100 ದಿನಗಳ ಉದ್ಯೋಗ ಒದಗಿಸಿದೆ. ಆದರೂ ರಾಜ್ಯದಲ್ಲಿ ಹಳ್ಳಿಗಳಿಂದ ವಿಶೇಷವಾಗಿ ತಮಿಳುನಾಡು ಗಡಿ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಮೈಸೂರು: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯೂ ಅರ್ಜಿ ಸಲ್ಲಿಸಿದ 15 ದಿನಗಳಲ್ಲಿ ಪ್ರತಿ ಮನೆಗೆ ವರ್ಷಕ್ಕೆ 100 ದಿನಗಳ ಉದ್ಯೋಗ ಒದಗಿಸಿದೆ. ಆದರೂ ರಾಜ್ಯದಲ್ಲಿ ಹಳ್ಳಿಗಳಿಂದ ವಿಶೇಷವಾಗಿ ತಮಿಳುನಾಡು ಗಡಿ ಗ್ರಾಮಗಳಲ್ಲಿ ಮತ್ತು ಹಿಂದುಳಿದ ಚಾಮರಾಜನಗರ ಜಿಲ್ಲೆಗಳ ಬುಡಕಟ್ಟು ಕುಗ್ರಾಮಗಳಿಂದ ಎಸ್ಟೇಟ್ ಅಥವಾ ನಗರ ಪ್ರದೇಶಗಳಿಗೆ ಜನ ದೊಡ್ಡ ಪ್ರಮಾಣದಲ್ಲಿ ವಲಸೆ ಹೋಗುವುದನ್ನು ತಡೆಯಲು ವಿಫಲವಾಗಿದೆ. 

ಕಾರ್ಮಿಕರಿಗೆ ಹದಿನೈದು ದಿನಕ್ಕೊಮ್ಮೆ ವೇತನ ನೀಡಬೇಕು ಎಂದು ಎಂಜಿಎನ್‌ಆರ್‌ಇಜಿಎ ಹೇಳುತ್ತದೆ. ಆದರೆ ಕೆಲಸ ಮಾಡಿದೆ ಕಾರ್ಮಿಕರಿಗೆ ಇನ್ನೂ 11 ಕೋಟಿ ರೂ. ಬಾಕಿ ಉಳಿಸಿಕೊಳ್ಳಲಾಗಿದೆ. ಬರ ಪರಿಸ್ಥಿತಿ, ಬೆಳೆ ನಷ್ಟ ಮತ್ತು ಎಂಜಿಎನ್‌ಆರ್‌ಇಜಿಎ ಹಣಕ್ಕಾಗಿ ಹೆಚ್ಚು ಕಾಯಬೇಕಾಗಿರುವುದರಿಂದ ಅನೇಕರು ಬ್ಯಾಗ್ ಪ್ಯಾಕ್ ಮಾಡಿಕೊಂಡು ಕಾಫಿ ಎಸ್ಟೇಟ್‌ಗಳಿಗೆ ಮತ್ತು ನಗರ ಪ್ರದೇಶಗಳಿಗೆ ಹೊರಟಿದ್ದಾರೆ.

ಎಂಜಿಎನ್‌ಆರ್‌ಇಜಿಎ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ ಉದ್ಯೋಗದ ಭರವಸೆ ನೀಡಿದರೂ, ಗ್ರಾಮಸ್ಥರು ಎಂಜಿಆರ್‌ಇಜಿಎಯಲ್ಲಿ ದಿನಕ್ಕೆ 316 ರೂಪಾಯಿಗೆ ದುಡಿಯುವ ಬದಲು ಕಾಫಿ ಕೀಳುವ ಮೂಲಕ ದಿನಕ್ಕೆ 100 ರಿಂದ 150 ಗಳಿಸಬಹುದು ಮತ್ತು ವಾರಕ್ಕೊಮ್ಮೆ ಹಣ ಪಡೆಯುತ್ತಿರುವುದರಿಂದ  ಹಿಂತಿರುಗುವ ಮನಸ್ಥಿತಿಯಲ್ಲಿ ಇಲ್ಲ. ಆರ್ಥಿಕ ಮತ್ತು ಕೌಟುಂಬಿಕ ಬದ್ಧತೆಗಳನ್ನು ನೋಡಿಕೊಳ್ಳಲು ಸಹಾಯ ಮಾಡುವ ಎಸ್ಟೇಟ್‌ಗಳಲ್ಲಿ ವಾರಕ್ಕೊಮ್ಮೆ ಹಣ ಸಿಗುತ್ತಿರುವುದು ನಮಗೆ ಖುಷಿ ತಂದಿದೆ ಎನ್ನುತ್ತಾರೆ ಪುಣಜನೂರಿನ ಶಿವಣ್ಣ.

"ಎಂಜಿಎನ್‌ಆರ್‌ಇಜಿಎ ಅಡಿಯಲ್ಲಿ ಹಣ ನೀಡಲು ವಿಳಂಬವಾದರೆ ನಾವು ಜೀವನ ನಡೆಸುವುದು ಹೇಗೆ? ಕಂತುಗಳನ್ನು ಪಾವತಿಸುವುದು ಹೇಗೆ?" ಎಂದು ಬುಡಕಟ್ಟು ಜನಾಂಗದ ಸೋಮಣ್ಣ ಅವರು ಪ್ರಶ್ನಿಸಿದ್ದಾರೆ.

ಆದರೆ, ರೈತ ಶಿವಮೂರ್ತಿ ಅವರು, ಕೃಷಿ ಕೂಲಿ ಕಾರ್ಮಿಕರು ಸಿಗದೆ ಪರದಾಡುತ್ತಿದ್ದಾರೆ. ಯುವಕರು, ದಂಪತಿಗಳು ಸೇರಿದಂತೆ ಅನೇಕರು ಕೊಡಗಿಗೆ ವಲಸೆ ಹೋಗಿದ್ದು, ಯುಗಾದಿ ಹಬ್ಬಕ್ಕೆ ವಾಪಸಾಗುತ್ತಾರೆ. ಸಾಗುವಳಿ ವೆಚ್ಚ ಹಾಗೂ ಸಾಮಾಗ್ರಿ ಹೆಚ್ಚಿರುವ ಸಂದರ್ಭದಲ್ಲಿ ಹೆಚ್ಚಿನ ಕೂಲಿ ನೀಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದಿದ್ದಾರೆ.

ಅನೇಕ ಬುಡಕಟ್ಟು ಹಾಡಿಗಳು ಮತ್ತು ಗಡಿ ಪ್ರದೇಶಗಳಲ್ಲಿನ ಹಳ್ಳಿಗಳು ಈಗಾಗಲೇ ಖಾಲಿಯಾಗಿವೆ. ಕೆಲವು ಯುವಕರು ಗಾರ್ಮೆಂಟ್ಸ್ ಕಾರ್ಖಾನೆಗಳಲ್ಲಿ ಕೆಲಸ ಮಾಡಲು ತಮಿಳುನಾಡಿನ ತಿರ್ಪುರ್ ಮತ್ತು ಸೇಲಂಗೆ ವಲಸೆ ಹೋಗಿದ್ದಾರೆ ಮತ್ತು ಕೆಲವರು ಕಾಂಡಿಮೆಂಟ್ಸ್ ಮತ್ತು ಹೋಟೆಲ್‌ಗಳಲ್ಲಿ ಕೆಲಸ ಹುಡುಕುತ್ತಿದ್ದಾರೆ.

ಏತನ್ಮಧ್ಯೆ, ಪಂಚಾಯತ್ ಮಟ್ಟದ ಅಧಿಕಾರಿಗಳು ವಲಸೆ ಹೋಗದಂತೆ ಅಭಿಯಾನವನ್ನು ಪ್ರಾರಂಭಿಸುವ ಮೂಲಕ ವಲಸೆಯನ್ನು ತಡೆಯಲು ಪ್ರಯತ್ನಿಸುತ್ತಿದ್ದಾರೆ ಮತ್ತು ವರ್ಷಕ್ಕೆ 100 ದಿನಗಳಿಂದ 160 ದಿನಗಳಿಗೆ ಉದ್ಯೋಗವನ್ನು ಹೆಚ್ಚಿಸಲು ಸರ್ಕಾರ ಯೋಜಿಸಿರುವುದರಿಂದ ಗ್ರಾಮಸ್ಥರಲ್ಲಿ ಉದ್ಯೋಗದ ಭರವಸೆ ಹೆಚ್ಚುತ್ತಿದೆ.

ಎಂಜಿಎನ್‌ಆರ್‌ಇಜಿಎ ಅಡಿಯಲ್ಲಿ ಉದ್ಯೋಗವಿಲ್ಲದಿದ್ದರೆ ಅಥವಾ ಈ ಪ್ರದೇಶದಲ್ಲಿ ಪೂರ್ವ ಮಾನ್ಸೂನ್ ಮಳೆಯಾಗದಿದ್ದರೆ ಮುಂದಿನ ದಿನಗಳಲ್ಲಿ ವಲಸೆ ಇನ್ನಷ್ಟು ಹೆಚ್ಚಾಗುತ್ತದೆ ಎಂದು ಹಲವರು ಆತಂಕ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com