ಬೆಂಗಳೂರು: ಸಾಲಗಾರರ ಕಾಟಕ್ಕೆ ಬೇಸತ್ತು ವಿಡಿಯೋ ಮಾಡಿ ವ್ಯಕ್ತಿ ಆತ್ಮಹತ್ಯೆ

ಸಾಲಗಾರರ ಕಿರುಕುಳದಿಂದ ಬೇಸತ್ತ 34 ವರ್ಷದ ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಮನಗರ ಜಿಲ್ಲೆಯ ಕಗ್ಗಲೀಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಸಾಲಗಾರರ ಕಿರುಕುಳದಿಂದ ಬೇಸತ್ತ 34 ವರ್ಷದ ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಮನಗರ ಜಿಲ್ಲೆಯ ಕಗ್ಗಲೀಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮೃತರನ್ನು ಕಗ್ಗಲೀಪುರದ ಬನ್ನೇರುಘಟ್ಟ ರಸ್ತೆ ನಿವಾಸಿ ಶಿವರಾಜ್ ಅಲಿಯಾಸ್ ಅಪ್ಪಿ ಎಂದು ಗುರುತಿಸಲಾಗಿದ್ದು, ಸಲೂನ್ ನಡೆಸುತ್ತಿದ್ದರು. ಶಿವರಾಜ್ ಅವರ ಸ್ನೇಹಿತ ರೇಣುಕಾರಾಧ್ಯ ಅವರು ಧನು ಅವರಿಂದ 30,000 ರೂಪಾಯಿ ಸಾಲ ಪಡೆದಿದ್ದರು ಮತ್ತು ವೆಂಕಟೇಶ್ ಮತ್ತು ಶಿವರಾಜ್ ಅದಕ್ಕೆ ಶ್ಯೂರಿಟಿ ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ರೇಣುಕಾರಾಧ್ಯ  ಸಾಲದ ಹಣವನ್ನು ಮರುಪಾವತಿ ಮಾಡದಿದ್ದಾಗ, ಸಾಲ ನೀಡಿದವರು ಶಿವರಾಜ್‌ನಿಂದ ಹಲವಾರು ಸಾವಿರ ರೂಪಾಯಿ ಬಡ್ಡಿ ತೆಗೆದುಕೊಂಡಿದ್ದರೂ ಕಿರುಕುಳ ನೀಡಲು ಪ್ರಾರಂಭಿಸಿದರು ಮತ್ತು ಅವರ ಬೈಕ್ ಅನ್ನು ವಶಪಡಿಸಿಕೊಂಡಿದ್ದರು.

ಸಾಲಗಾರರ ಕಿರುಕುಳವನ್ನು ಸಹಿಸಲಾಗದ ಶಿವರಾಜ್ ಅವರು ತಮ್ಮ ಸಾವಿಗೆ ಸಾಲ ಕೊಟ್ಟವರು ಮತ್ತು ರೇಣುಕಾರಾಧ್ಯ ಅವರನ್ನು ಹೊಣೆಗಾರರನ್ನಾಗಿ ಮಾಡುವ ವೀಡಿಯೊವನ್ನು ರೆಕಾರ್ಡ್ ಮಾಡಿದ್ದಾರೆ.

ಶುಕ್ರವಾರ ತಮ್ಮ ನಿವಾಸದಲ್ಲಿ ನೇಣು ಹಾಕಿಕೊಳ್ಳುವ ಮೊದಲು ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಧನು, ವೆಂಕಟೇಶ್ ಮತ್ತು ರೇಣುಕಾರಾಧ್ಯ ಅವರ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com