ಕೆ.ಜಿ.ಲೇಔಟ್‌ನಲ್ಲಿ ಅಕ್ರಮ ನಿವೇಶನ ಮಾರಾಟ ಪ್ರಕರಣ: 35 ಎಂಜಿನಿಯರ್‌ಗಳ ವಿರುದ್ಧ ಪ್ರಕರಣ ದಾಖಲಿಸಲು ಬಿಡಿಎ ಮುಂದು

ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ನಾಗರಿಕ ಸೌಲಭ್ಯಗಳ (ಸಿಎ) ನಿವೇಶನಗಳನ್ನು ವಸತಿ ನಿವೇಶನಗಳನ್ನಾಗಿ ಪರಿವರ್ತಿಸಿ ಅಕ್ರಮವಾಗಿ ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 35 ಮಂದಿ ಎಂಜಿನಿಯರ್ ಗಳ ವಿರುದ್ಧ ಪ್ರಕರಣ ದಾಖಲಿಸಲು ಬಿಡಿಎ ಮುಂದಾಗಿದೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ನಾಗರಿಕ ಸೌಲಭ್ಯಗಳ (ಸಿಎ) ನಿವೇಶನಗಳನ್ನು ವಸತಿ ನಿವೇಶನಗಳನ್ನಾಗಿ ಪರಿವರ್ತಿಸಿ ಅಕ್ರಮವಾಗಿ ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 35 ಮಂದಿ ಎಂಜಿನಿಯರ್ ಗಳ ವಿರುದ್ಧ ಪ್ರಕರಣ ದಾಖಲಿಸಲು ಬಿಡಿಎ ಮುಂದಾಗಿದೆ ಎಂದು ತಿಳಿದುಬಂದಿದೆ.

ಈ ಸಂಬಂಧ ಬಿಡಿಎ ಅಧ್ಯಕ್ಷ ಎಸ್‌ಆರ್ ವಿಶ್ವನಾಥ್ ಅವರು ಮಾಹಿತಿ ನೀಡಿದ್ದು, ಲವು ಎಂಜಿನಿಯರ್‌ ಹಾಗೂ ದಲ್ಲಾಳಿಗಳು ಬಡಾವಣೆಯ ನಕ್ಷೆಯನ್ನು ಬದಲಿಸಲು ಒತ್ತಡ ಹಾಕಿದ್ದರು ಎಂದು ಖಾಸಗಿ ಸಂಸ್ಥೆ ಸಿದ್ಧಪಡಿಸಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿ 35 ಮಂದಿ ಎಂಜಿನಿಯರ್ ಗಳ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಲಾಗಿದೆ ಎಂದು ಹೇಳಿದ್ದಾರೆ.

ವರದಿಯ ಪ್ರಾಥಮಿಕ ಅಂಶಗಳ ಪ್ರಕಾರ, ಬಿಡಿಎ ಅಕ್ರಮವಾಗಿ ಕನಿಷ್ಠ 12 ಸಿಎ ನಿವೇಶನಗಳನ್ನು ವಸತಿ ನಿವೇಶನಗಳನ್ನಾಗಿ ಪರಿವರ್ತಿಸಿದ್ದು, ಇದು ಕೆಟಿಸಿಪಿ ಕಾಯ್ದೆ ಹಾಗೂ ಸುಪ್ರೀಂಕೋರ್ಟ್‌ನ ಇತ್ತೀಚಿನ ಆದೇಶ ಉಲ್ಲಂಘನೆಯಾಗಿದೆ. ಬಡಾವಣೆಯಲ್ಲಿ ಒಂದು ಬಾರಿ ಸಿಎ ನಿವೇಶನ, ಉದ್ಯಾನ ಅಥವಾ ಮೈದಾನ ಎಂದು ಅಧಿಸೂಚನೆ ಆದರೆ ಅದನ್ನು ಬದಲಿಸುವ ಅಧಿಕಾರ ಎಂಜಿನಿಯರ್‌ಗೆ ಇರುವುದಿಲ್ಲ. ಸಿಎ ನಿವೇಶನಗಳಲ್ಲದೆ ವಾಣಿಜ್ಯ ಉದ್ದೇಶಕ್ಕೆ ಅಭಿವೃದ್ಧಿಯಾಗಬೇಕಾದ 100 ಅಡಿ ಮತ್ತು 80 ಅಡಿ ರಸ್ತೆಯ ಸುತ್ತಮುತ್ತಲಿನ 180 ಎಕರೆ ಪ್ರದೇಶದ ನಿವೇಶನಗಳನ್ನು ವಸತಿ ನಿವೇಶನಗಳನ್ನಾಗಿ ಎಂಜಿನಿಯರ್‌ಗಳು ಪರಿವರ್ತಿಸಿದ್ದಾರೆಂದು ತಿಳಿದುಬಂದಿದೆ.

ಸಿಎ ನಿವೇಶನ ಹಾಗೂ ವಾಣಿಜ್ಯ ಬಳಕೆಯ ನಿವೇಶನಗಳನ್ನು ವಸತಿ ನಿವೇಶನಗಳನ್ನಾಗಿ ಪರಿವರ್ತಿಸಿರುವ ಎಂಜಿನಿಯರ್‌ಗಳ ಮೇಲೆ ತನಿಖೆ ಆಧರಿಸಿ ಎಫ್‌ಐಆರ್‌ ದಾಖಲಿಸಲಾಗುತ್ತದೆ. ರೈತರಿಗೆ ಪರಿಹಾರ ‌ರೂಪದಲ್ಲಿ ನೀಡಲಾಗಿರುವ ನಿವೇಶನಗಳನ್ನು ‌ಪರಿವರ್ತಿಸಿರುವುದು ಅಕ್ರಮ’ ಎಂದು ಬಿಡಿಎ ಅಧ್ಯಕ್ಷ ಎಸ್‌.ಆರ್. ವಿಶ್ವನಾಥ್‌ ಅವರು ಹೇಳಿದ್ದಾರೆ.

ನಿವೇಶನ ಪಡೆದವರೂ ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ. ಸಿಎ ನಿವೇಶನಗಳನ್ನು ಬೇರೆ ಪ್ರದೇಶಗಳಲ್ಲಿ ಗೊತ್ತುಪಡಿಸುವುದು (ಮಾರ್ಕಿಂಗ್) ಇದಕ್ಕೆ ಇರುವ ಒಂದು ಪರಿಹಾರವಾಗಿದೆ. ಬಿಡಿಎ ಎಂಜಿನಿಯರ್‌ಗಳು, ಉಪಕಾರ್ಯದರ್ಶಿ ಮತ್ತು ಸಬ್‌ರಿಜಿಸ್ಟ್ರಾರ್‌ ಕಚೇರಿಯಲ್ಲಿ ನಡೆದ ಇಂತಹ ಕಿಡಿಗೇಡಿತನದಿಂದ ಒಟ್ಟು 300 ಎಕರೆ ಬಿಡಿಎ ಆಸ್ತಿ ನಷ್ಟವಾಗಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com