ವಿದ್ಯಾರ್ಥಿಗಳು ಪ್ರದರ್ಶಿಸಿದ ಸ್ಕಿಟ್ ನಲ್ಲಿ ಜಾತಿ ನಿಂದನೆ ಆರೋಪ: ತನಿಖೆಗೆ ಶಿಸ್ತು ಸಮಿತಿ ರಚಿಸಿದ ಜೈನ್ ವಿವಿ

ಮೊನ್ನೆ ಫೆಬ್ರವರಿ 6 ರಂದು ಸೆಂಟರ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್ (CMS) ನಲ್ಲಿ ವಿದ್ಯಾರ್ಥಿಗಳ ಗುಂಪೊಂದು ಪ್ರದರ್ಶಿಸಿದ ಸ್ಕಿಟ್‌ನಲ್ಲಿ ದಲಿತರ ಬಗ್ಗೆ ಅವಹೇಳನ ಮಾಡಲಾಗಿದೆ ಎಂಬ ವಿವಾದಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಜೈನ್ ವಿವಿ (Deemed-to-be University) ಶಿಸ್ತು ಸಮಿತಿಯನ್ನು ರಚಿಸಿದೆ.
ಜೈನ್ ವಿಶ್ವವಿದ್ಯಾಲಯ
ಜೈನ್ ವಿಶ್ವವಿದ್ಯಾಲಯ

ಬೆಂಗಳೂರು: ಮೊನ್ನೆ ಫೆಬ್ರವರಿ 6 ರಂದು ಸೆಂಟರ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್ (CMS) ನಲ್ಲಿ ವಿದ್ಯಾರ್ಥಿಗಳ ಗುಂಪೊಂದು ಪ್ರದರ್ಶಿಸಿದ ಸ್ಕಿಟ್‌ನಲ್ಲಿ ದಲಿತರ ಬಗ್ಗೆ ಅವಹೇಳನ ಮಾಡಲಾಗಿದೆ ಎಂಬ ವಿವಾದಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಜೈನ್ ವಿವಿ (Deemed-to-be University) ಶಿಸ್ತು ಸಮಿತಿಯನ್ನು ರಚಿಸಿದೆ.

ವಿಶ್ವವಿದ್ಯಾಲಯವು ಯಾವುದೇ ರೂಪದಲ್ಲಿ ಅಸಮಾನತೆ ಮತ್ತು ಜಾತೀಯತೆಯನ್ನು ಪ್ರೋತ್ಸಾಹಿಸುವುದಿಲ್ಲ ಮತ್ತು ಅಂತಹ ವಿಷಯಗಳನ್ನು ಪುರಸ್ಕರಿಸುವುದಿಲ್ಲ. ಆದ್ದರಿಂದ ಸ್ಕಿಟ್ ಪ್ರದರ್ಶಿಸಿದ ವಿದ್ಯಾರ್ಥಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ವಿಷಯವನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದೆ.

ವಿಶ್ವವಿದ್ಯಾನಲಯ ಧನಸಹಾಯ ಆಯೋಗದ (UGC) ಮಾರ್ಗಸೂಚಿಗಳಿಗೆ ಅನುಗುಣವಾಗಿ, ಈ ವಿಷಯವನ್ನು ತನಿಖೆ ಮಾಡಲು ಮತ್ತು ಅದರ ಪ್ರಕಾರ ಕಠಿಣ ಕ್ರಮ ತೆಗೆದುಕೊಳ್ಳಲು ಶಿಸ್ತು ಸಮಿತಿಯನ್ನು ರಚಿಸಲಾಗಿದೆ. ಈ ಬಗ್ಗೆ ಸ್ಕಿಟ್ ಮಾಡಿದ ವಿದ್ಯಾರ್ಥಿಗಳ ಪೋಷಕರನ್ನೂ ಕರೆಸಿ ಚರ್ಚಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಿ ಡೆಲ್ರಾಯ್ಸ್ ಬಾಯ್ಸ್ ತಂಡ ಪ್ರದರ್ಶಿಸಿದ ಸ್ಕಿಟ್ ನಲ್ಲಿ, ಜಾತಿವಾದಿ ಸಂಭಾಷಣೆಗಳಿದ್ದವು, ಭಾರತೀಯ ಸಂವಿಧಾನದ ಪಿತಾಮಹ ಮತ್ತು ಹಿಂದುಳಿದ ವರ್ಗಗಳ ನಾಯಕ ಡಾ ಬಿಆರ್ ಅಂಬೇಡ್ಕರ್ ಅವರನ್ನು ಗುರಿಯಾಗಿಸಿಕೊಂಡು ಅವಹೇಳನ ಮಾಡಿ ಅಸ್ಪೃಶ್ಯತೆ ಪದವನ್ನು ಬಳಸಲಾಗಿತ್ತು. ಮ್ಯಾಡ್ ಆಡ್ಸ್ ಎಂಬ ಕಾರ್ಯಕ್ರಮದಲ್ಲಿ ಹಾಸ್ಯಮಯ ರೀತಿಯಲ್ಲಿ ಕಾಲ್ಪನಿಕ ಉತ್ಪನ್ನಗಳನ್ನು ಜಾಹೀರಾತು ಮಾಡುವ ಕುರಿತು ಸ್ಕಿಟ್ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. 

ಈ ಬಗ್ಗೆ ದಲಿತ ಸಂಘಟನೆಗಳ ಸದಸ್ಯರು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಮತ್ತು ಸ್ಕಿಟ್ ಮಾಡಿರುವ ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ದಾಖಲಿಸಿದ್ದಾರೆ.

ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚಿಸಿದ ನಂತರ ಎಫ್‌ಐಆರ್ ದಾಖಲಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸ್ಕಿಟ್‌ನ ವೀಡಿಯೊ ವೈರಲ್ ಆದ ನಂತರ, ಡೆಲ್ರಾಯ್ಸ್ ಬಾಯ್ಸ್ ತಂಡ Instagram ನಲ್ಲಿ ಕ್ಷಮೆಯಾಚಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com