ವಿಧಾನಸಭಾ ಚುನಾವಣೆ: ಮಗನ ಗೆಲುವಿಗಾಗಿ ದರ್ಗಾದಲ್ಲಿ ಕಣ್ಣೀರಿಟ್ಟ ಸಿಎಂ ಇಬ್ರಾಹಿಂ; ವಿಡಿಯೋ ವೈರಲ್

ಹುಮನಾಬಾದ್ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿರುವ ತಮ್ಮ ಪುತ್ರ ಸಿ.ಎಂ.ಫೈಯಾಜ್ ಗೆಲ್ಲುವಂತೆ ಮಾಡೆಂದು ದರ್ಗಾದಲ್ಲಿ ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರು ಕಣ್ಣೀರು ಹಾಕಿದ್ದು, ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿರುವ ಸಿಎಂ ಇಬ್ರಾಹಿಂ.
ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿರುವ ಸಿಎಂ ಇಬ್ರಾಹಿಂ.

ಬೀದರ್: ಹುಮನಾಬಾದ್ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿರುವ ತಮ್ಮ ಪುತ್ರ ಸಿ.ಎಂ.ಫೈಯಾಜ್ ಗೆಲ್ಲುವಂತೆ ಮಾಡೆಂದು ದರ್ಗಾದಲ್ಲಿ ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರು ಕಣ್ಣೀರು ಹಾಕಿದ್ದು, ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಚಿಟಗುಪ್ಪದ ಹಜರತ್ ಸೈಯದ್ ಮಖಬೂಬ್ ಹುಸೇನಿ ದರ್ಗಾ ಎದುರು ಸಿಎಂ ಇಬ್ರಾಹಿಂ ಅವರು ಪ್ರಾರ್ಥನೆ ಸಲ್ಲಿಸುವ ವೇಳೆ ಕಣ್ಣೀರು ಹಾಕಿದ್ದಾರೆಂದು ತಿಳಿದುಬಂದಿದೆ.

ಈ ವೇಳೆ ಇಬ್ರಾಹಿಂ ಅವರ ಪುತ್ರ ಫೈಯಾಜ್ ಕೂಡ ಉಪಸ್ಥಿತರಿದ್ದು, ಅವರೂ ಕೂಡ ತಮ್ಮ ತಂದೆಯೊಂದಿಗೆ ಕಣ್ಣೀರು ಹಾಕಿರುವುದು ಕಂಡು ಬಂದಿದೆ.

ದರ್ಗಾ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಇಬ್ರಾಹಿಂ ಅವರು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಹುಮನಾಬಾದ ವಿಧಾನಸಭಾ ಕ್ಷೇತ್ರದಿಂದ ಜಯಗಳಿಸಲು ತಮ್ಮ ಪುತ್ರ ಸಿ.ಎಂ.ಫೈಯಾಜ್'ಗೆ ಆಶೀರ್ವಾದ ಹಾಗೂ ರಕ್ಷಣೆ ಮಾಡುವಂತೆ ಪ್ರಾರ್ಥನೆ ಸಲ್ಲಿಸಲು ಸುಮಾರು 700 ಕಿ.ಮೀ ದೂರ ಸಂಚರಿಸಿ ದರ್ಗಾಕ್ಕೆ ಬಂದಿದ್ದೇವೆಂದು ಹೇಳಿದರು.

ಇಬ್ರಾಹಿಂ ಅಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ವಿಡಿಯೋ ಜಿಲ್ಲೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇದೊಂದು ರಾಜಕೀಯ ತಂತ್ರ ಎಂದು ಹಲವರು ಹೇಳಿದ್ದಾರೆ.

ದಿವಂಗತ ಮಿರಾಜುದ್ದೀನ್ ಎನ್ ಪಟೇಲ್ 1994 ರಲ್ಲಿ ಹುಮನಾಬಾದ್ ಕ್ಷೇತ್ರದಿಂದ ಚುನಾಯಿತರಾದ ಕೊನೆಯ ಜೆಡಿಎಸ್ ಅಭ್ಯರ್ಥಿಯಾಗಿದ್ದರು. ಅವರು ಸಚಿವರಾಗಿ ಮತ್ತು ಪಕ್ಷದ ರಾಜ್ಯಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.

ಹುಮನಾಬಾದ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಗೆ ರಾಜಶೇಖರ್ ಬಿ.ಪಾಟೀಲ್ ಮಾತ್ರ ಅರ್ಜಿ ಸಲ್ಲಿಸಿದ್ದರು. ಪಾಟೀಲ್ ಅವರ ಸಹೋದರ ಸಂಬಂಧಿ ಸಿದ್ದು ಪಾಟೀಲ್ ಕೂಡ ಹುಮನಾಬಾದ್ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಪಡೆಯಲು ಪ್ರಬಲ ಆಕಾಂಕ್ಷಿಯಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com