ಭೂಮಿ ಕಳೆದುಕೊಂಡಿರುವ ರೈತರು ಸ್ವಂತ ಜಮೀನಿನಲ್ಲೇ ನಿವೇಶನ ಪಡೆಯಬಹುದು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ

ಭೂಮಿ ಕಳೆದುಕೊಳ್ಳುವ ರೈತರಿಗೆ ಅವರ ಸ್ವಂತ ಆಸ್ತಿಯಲ್ಲಿ ಅಭಿವೃದ್ಧಿಪಡಿಸಿದ ಭೂಮಿಯ ಒಂದು ಭಾಗವನ್ನು ಹಂಚಿಕೆ ಮಾಡಲು ಮತ್ತು ಅವರಿಗೆ ಪರಿಹಾರವಾಗಿ ಭೂಮಿಯನ್ನು ಮಂಜೂರು ಮಾಡಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಪ್ರಸ್ತಾಪಿಸಿದೆ.
ಬಿಡಿಎ( ಸಂಗ್ರಹ ಚಿತ್ರ)
ಬಿಡಿಎ( ಸಂಗ್ರಹ ಚಿತ್ರ)
Updated on

ಬೆಂಗಳೂರು: ಭೂಮಿ ಕಳೆದುಕೊಳ್ಳುವ ರೈತರಿಗೆ ಅವರ ಸ್ವಂತ ಆಸ್ತಿಯಲ್ಲಿ ಅಭಿವೃದ್ಧಿಪಡಿಸಿದ ಭೂಮಿಯ ಒಂದು ಭಾಗವನ್ನು ಹಂಚಿಕೆ ಮಾಡಲು ಮತ್ತು ಅವರಿಗೆ ಪರಿಹಾರವಾಗಿ ಭೂಮಿಯನ್ನು ಮಂಜೂರು ಮಾಡಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಕೇಂದ್ರ ಕಚೇರಿಯಲ್ಲಿ ಮಂಗಳವಾರ ಎಂಟು ಗಂಟೆಗಳ ಕಾಲ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಚರ್ಚಿಸಲಾಯಿತು.

ಬಿಡಿಎ ನಿವೇಶನಗಳ ಹಂಚಿಕೆಯಲ್ಲಿ ಗಣಕೀಕೃತ ನಿಯಮಗಳನ್ನು ಅನುಸರಿಸಲಾಗುತ್ತಿದ್ದು, ಇದೇ ಮೊದಲ ಬಾರಿಗೆ ಭೂಮಿ ಕಳೆದುಕೊಂಡವರಿಗೆ ಈ ಮಾದರಿಯಲ್ಲಿ ವಿನಿಮಯ ಭೂಮಿ ನೀಡಲಾಗುವುದು ಎಂದು ಎಲ್ಲಾ ಇಲಾಖೆಗಳ ಉನ್ನತ ಅಧಿಕಾರಿಗಳೊಂದಿಗೆ ಮ್ಯಾರಥಾನ್ ಸಭೆಯಲ್ಲಿ ಭಾಗವಹಿಸಿದ ಬಿಡಿಎ ಅಧಿಕಾರಿಯೊಬ್ಬರು ಹೇಳಿದರು. .

ಭೂಮಿ ಕಳೆದುಕೊಳ್ಳುವವರು ತಮ್ಮ ಭೂಮಿಯನ್ನು ವೀಕ್ಷಿಸುತ್ತಾರೆ, ಕೆಲವೊಮ್ಮೆ ಪ್ರಮುಖ ಸ್ಥಳಗಳಲ್ಲಿ ಬೇರೆಯವರಿಗೆ ಹಂಚಿಕೆ ಮಾಡಲಾಗಿರುತ್ತದೆ. ಅಂತಹ ಸಂದರ್ಭದಲ್ಲಿ ಸ್ವಲ್ಪ ದೂರದ ಸ್ಥಳದಲ್ಲಿ ಪರಿಹಾರವಾಗಿ ಸೈಟ್‌ಗಳನ್ನು ಪಡೆಯಬಹುದಾಗಿದೆ . ಅವರು ಕಳೆದುಕೊಂಡ ಭೂಮಿಯಲ್ಲಿ ಕನಿಷ್ಠ ಶೇ.10-20ರಷ್ಟು ನಿವೇಶನ ಹಂಚಿಕೆ ಮಾಡಿದರೆ ಅವರಿಗೆ ತೃಪ್ತಿ ಸಿಗಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭೂಮಿ ಕಳೆದುಕೊಂಡ ರೈತರಿಗೆ ನ್ಯಾಯ ದೊರಕಿಸಿಕೊಡಲು ಈ ವ್ಯವಸ್ಥೆ ಬಗ್ಗೆ ಪ್ರಸ್ತಾಪಿಸಲಾಗಿದೆ ಎಂದು ಬಿಡಿಎ ಆಯುಕ್ತ ಕುಮಾರ್ ಜಿ ನಾಯಕ್  ತಿಳಿಸಿದ್ದಾರೆ.

ಸಾರ್ವಜನಿಕರಿಗೆ ಉತ್ತಮ ಸೇವೆಗಳನ್ನು ಒದಗಿಸಲು ಬಿಡಿಎಯ ವಿವಿಧ ವಿಭಾಗಗಳ ನಡುವೆ ಹೆಚ್ಚಿನ ಸಮನ್ವಯತೆಗೆ ಒತ್ತಾಯಿಸಿದ್ದಾರೆ. ಅರ್ಕಾವತಿ ಮತ್ತು ನಾಡಪ್ರಭು ಕೆಂಪೇಗೌಡ ಲೇಔಟ್‌ನ ಹಂಚಿಕೆದಾರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ನಾನು ಅವಲೋಕನ ನಡೆಸಿದ್ದೇನೆ, ಎಲ್ಲಾ ವಿಭಾಗಗಳ ಸಮನ್ವಯತೆಯಿಂದ ಸಮಸ್ಯೆಗಳನ್ನು  ಶೀಘ್ರದಲ್ಲೇ ಪರಿಹರಿಸಬಹುದು ಎಂದು ಹೇಳಿದ್ದಾರೆ.

‘ಸಾರ್ವಜನಿಕರು ಯಾವುದೇ ಕಾಮಗಾರಿಗೆ ಸಂಬಂಧಿಸಿದಂತೆ ಬಿಡಿಎ ಕಚೇರಿಗೆ ಭೇಟಿ ನೀಡದಿರುವಂತೆ ನಮ್ಮ ಎಲ್ಲ ಪ್ರಕ್ರಿಯೆಗಳು ಆನ್‌ಲೈನ್‌ ಮಾಡಲು ಆಯುಕ್ತರು ಉತ್ಸುಕರಾಗಿದ್ದಾರೆ ಎಂದು ಸಭೆಯಲ್ಲಿ ಭಾಗವಹಿಸಿದ್ದ ಅಧಿಕಾರಿಯೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ. ಬಿಡಿಎಯಿಂದ ಮಾಡಲಾದ ಎಲ್ಲಾ ಕೆಲಸಗಳನ್ನು ತ್ವರಿತವಾಗಿ ಮಾಡಲು ಬ್ಲೂ ಪ್ರಿಂಟ್ ಜೊತೆ ಹೊರಬರಲು ಎಲ್ಲಾ ಅಧಿಕಾರಿಗಳಿಗೆ ಕುಮಾರ್ ಜಿ ನಾಯಕ್ ಸೂಚಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com