ಮಾಲಿಕರಿಗೆ ಮಂತ್ರಿ ಸೆರೆನಿಟಿ ಫ್ಲ್ಯಾಟ್ ಗಳ ಹಸ್ತಾಂತರಕ್ಕೆ ಸುಪ್ರೀಂ ಕೋರ್ಟ್ ಆದೇಶ

ಮಂತ್ರಿ ಕ್ಯಾಸಲ್ಸ್ ಪ್ರೈವೇಟ್ ಲಿಮಿಟೆಡ್ ನಿರ್ಮಿಸಿರುವ ಮಂತ್ರಿ ಸೇರೇನಿಟಿ ಫ್ಲ್ಯಾಟ್ ಗಳನ್ನು ಮಾಲಿಕರಿಗೆ ಹಸ್ತಾಂತರಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.
ಸುಪ್ರೀಂ ಕೋರ್ಟ್- ಮಂತ್ರಿ ಅಪಾರ್ಟ್ಮೆಂಟ್ (ಸಂಗ್ರಹ ಚಿತ್ರ)
ಸುಪ್ರೀಂ ಕೋರ್ಟ್- ಮಂತ್ರಿ ಅಪಾರ್ಟ್ಮೆಂಟ್ (ಸಂಗ್ರಹ ಚಿತ್ರ)

ಬೆಂಗಳೂರು: ಮಂತ್ರಿ ಕ್ಯಾಸಲ್ಸ್ ಪ್ರೈವೇಟ್ ಲಿಮಿಟೆಡ್ ನಿರ್ಮಿಸಿರುವ ಮಂತ್ರಿ ಸೇರೇನಿಟಿ ಫ್ಲ್ಯಾಟ್ ಗಳನ್ನು ಮಾಲಿಕರಿಗೆ ಹಸ್ತಾಂತರಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.
 
ಮಾ.13 ಕ್ಕೂ ಮೊದಲು ಯಾರು ಪೂರ್ಣಪ್ರಮಾಣದಲ್ಲಿ ಪಾವತಿ ಮಾಡುತ್ತಾರೋ ಅವರಿಗೆ ಮಾಲಿಕತ್ವವನ್ನು ಹಸ್ತಾಂತರಿಸಬೇಕೆಂದು ಕೋರ್ಟ್ ಹೇಳಿದ್ದು, ಮನೆಗಳ ಹಸ್ತಾಂತರಕ್ಕಾಗಿ ಹೋರಾಡುತ್ತಿದ್ದ ಹಲವು ಗೃಹ ಖರೀದಿದಾರರಿಗೆ ರಿಲೀಫ್ ದೊರೆತಿದೆ.

ಮಂತ್ರಿ ಕ್ಯಾಸಲ್ಸ್ ಪ್ರೈವೇಟ್ ಲಿಮಿಟೆಡ್-ಸಂತೋಷ್ ನರಸಿಂಹ ಮೂರ್ತಿ ಮತ್ತು ಇತರರ ನಡುವಿನ ಪ್ರಕರಣದ ತೀರ್ಪನ್ನು ಫೆ.13 ರಂದು ನ್ಯಾಯಮೂರ್ತಿಗಳಾದ ಪಮಿಡಿಘಾಟಂ ಶ್ರೀ ನರಸಿಂಹ ಮತ್ತು ನ್ಯಾಯಮೂರ್ತಿ ಜೆ ಬಿ ಪಾರ್ದಿವಾಲಾ ಅವರಿದ್ದ ಪೀಠ ಪ್ರಕಟಿಸಿದೆ.    

ಬೆಂಗಳೂರು ದಕ್ಷಿಣ ತಾಲೂಕಿನ ಕನಕಪುರ ರಸ್ತೆಯಲ್ಲಿರುವ ಯೋಜನೆ ಇದಾಗಿದ್ದು, ಬಹುಮಹಡಿ ಕಟ್ಟಡ ಇದಾಗಿದೆ ಹಾಗೂ ಈ ಯೋಜನೆಗೆ ಸಂಬಂಧಿಸಿದಂತೆ ಬಿಲ್ಡರ್ ಹಾಗೂ ಮನೆ ಖರೀದಿದಾರರ ನಡುವೆ ಹಲವು ವರ್ಷಗಳಿಂದ ಸಮಸ್ಯೆ ಇತ್ತು. 

ಖರೀದಿದಾರರ ಒಪ್ಪಂದದ ಪ್ರಕಾರ ಶೇ.100 ರಷ್ಟು ಹಣ ಪಾವತಿ ಮಾಡಿರುವ ಎಲ್ಲಾ ಗೃಹ ಖರೀದಿದಾರರಿಗೂ ಮುಂದಿನ ವಿಚಾರಣೆಗೂ ಮುನ್ನ ಮನೆಗಳ ಮಾಲಿಕತ್ವವನ್ನು ಹಸ್ತಾಂತರಿಸಬೇಕು ಎಂದು ಕೋರ್ಟ್ ಮಂತ್ರಿ ಪರ ವಕೀಲರಿಗೆ ಸೂಚಿಸಿದೆ.
 
ಮಾ.13 ಕ್ಕೆ ವಿಚಾರಣೆಯನ್ನು ಮುಂದೂಡಲಾಗಿದ್ದು ಅದಕ್ಕೂ ಮುನ್ನ ಹಣ ಪಾವತಿ ಮಾಡುವವರಿಗೆ ಮಾಲಿಕತ್ವ ಸಿಗಲಿದೆ. 

ಡೆವಲಪರ್ ಫ್ಲಾಟ್ ಮಾಲಿಕರಿಗೆ ಮನೆಗಳನ್ನು ಹಸ್ತಾಂತರಿಸಲು ನಿರಾಕರಿಸುತ್ತಿದ್ದರು ಈ ಹಿನ್ನೆಲೆಯಲ್ಲಿ ಗೃಹ ಖರೀದಿದಾರರು ಕೋರ್ಟ್ ಮೊರೆ ಹೋಗಿದ್ದರು. 

ಕಳೆದ 2 ತಿಂಗಳ ಹಿಂದೆ ಬಿಡಿಎ ಈ ಯೋಜನೆಯನ್ನು ಭಾಗಶಃ ಆಕ್ಯುಪೆನ್ಸಿ ಪ್ರಮಾಣೀಕರಣವನ್ನು ಘೋಷಿಸಿತ್ತು. ಆರ್ಥಿಕ ವ್ಯವಹಾರಗಳ ಇಲಾಖೆಯ ಸ್ವಾಮಿ ಹೂಡಿಕೆ ನಿಧಿಯಿಂದ ಈ ಯೋಜನೆಗೆ ಆದ್ಯತೆಯ ಸಾಲದ ಹಣಕಾಸು ಒದಗಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com