ಮಾಜಿ ಡಿಐಜಿ ರೂಪಾ
ರಾಜ್ಯ
ಅಧಿಕಾರಿಗಳಿಗೆ ಖಾಸಗಿ ಫೋಟೋ ಕಳುಹಿಸುತ್ತಿದ್ದ ರೋಹಿಣಿ ಸಿಂಧೂರಿ: ಫೋಟೋ ಬಿಡುಗಡೆ ಮಾಡಿದ ಐಪಿಎಸ್ ಡಿ. ರೂಪಾ
ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಡಿ. ರೂಪಾ ನಡುವಿನ ಪೋಸ್ಟ್ ವಾರ್ ಮುಂದುವರೆದಿದೆ. ಐಎಎಸ್ ಅಧಿಕಾರಿಗಳಿಗೆ ತನ್ನ ಖಾಸಗಿ ಫೋಟೋಗಳನ್ನು ರೋಹಿಣಿ ಸಿಂಧೂರಿ ಅವರು ಕಳುಹಿಸಿದ್ದಾರೆ ಎಂದು ಡಿ. ರೂಪಾ ಆರೋಪ ಮಾಡಿದ್ದಾರೆ.
ಬೆಂಗಳೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಡಿ. ರೂಪಾ ನಡುವಿನ ಪೋಸ್ಟ್ ವಾರ್ ಮುಂದುವರೆದಿದೆ. ಐಎಎಸ್ ಅಧಿಕಾರಿಗಳಿಗೆ ತನ್ನ ಖಾಸಗಿ ಫೋಟೋಗಳನ್ನು ರೋಹಿಣಿ ಸಿಂಧೂರಿ ಅವರು ಕಳುಹಿಸಿದ್ದಾರೆ ಎಂದು ಡಿ. ರೂಪಾ ಆರೋಪ ಮಾಡಿದ್ದಾರೆ.
ಈಕೆ ಕೆಲವು ಐಎಎಸ್ ಅಧಿಕಾರಿಗಳಿಗೆ ಒಂದಲ್ಲ, ಎರಡಲ್ಲ, ಅನೇಕರಿಗೆ ತನ್ನ ಅಶ್ಲೀಲ ಚಿತ್ರಗಳನ್ನು ಕಳಿಸಿರುವ ಹಾಗೂ ಅವರನ್ನು ಉತ್ತೇಜಿಸುವ ಕಾರ್ಯ ಮಾಡಿರುವ ಆಪಾದನೆ ಇದೆ. ಆ ಪಿಕ್ಸ್ಗಳು ನನಗೆ ಸಿಕ್ಕಿವೆ. ಇದು ಖಾಸಗಿ ವಿಷಯ ಆಗುವುದಿಲ್ಲ.
ಆಲ್ ಇಂಡಿಯಾ ಸರ್ವಿಸ್ ಕಂಡಕ್ಟ್ ರೂಲ್ಸ್ ಪ್ರಕಾರ ಹಿರಿಯ ಅಧಿಕಾರಿಗಳು ಈ ರೀತಿಯ ಪಿಕ್ಸ್, ಸಂಭಾಷಣೆ ಮಾಡುವುದು ಅಪರಾಧ. ಈ ಆಪಾದನೆಗಳನ್ನು ಸರ್ಕಾರ ತನಿಖೆ ಮಾಡುವುದೇ, ನೋಡಬೇಕಿದೆ. ಏಕೆಂದರೆ ಸತ್ಯಾ ಸತ್ಯತೆ ಹೊರ ಬರಬೇಕಿದೆ ಎಂದು ಆರೋಪಿಸಿದ್ದಾರೆ.
ಇನ್ನು ಸಾಮಾಜಿಕ ಜಾಲತಾಣದಲ್ಲಿ 19 ಪ್ರಶ್ನೆಗಳನ್ನು ಕೇಳುವ ಮೂಲಕ ರೋಹಿಣಿ ಸಿಂಧೂರಿ ಈ ಪ್ರಶ್ನೆಗಳಿಗೆ ಉತ್ತರ ಕೊಡುತ್ತಾರಾ ಎಂದು ಡಿ.ರೂಪಾ ಕೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ