ರೋಹಿಣಿ ಸಿಂಧೂರಿ ಖಾಸಗಿ ಫೋಟೋಗಳು ವೈರಲ್: ಹಲವರಿಂದ ಆಕ್ರೋಶ; ಐಪಿಎಸ್‌ ಅಧಿಕಾರಿ ರೂಪಾ ಮೌದ್ಗಿಲ್‌ ಸ್ಪಷ್ಟನೆ

ಐಪಿಎಸ್‌ ಅಧಿಕಾರಿ ಡಿ. ರೂಪಾ ಮೌದ್ಗಿಲ್‌ ಅವರು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಕೆಲ ವೈಯಕ್ತಿ ಫೋಟೋಗಳನ್ನು ಬಹಿರಂಗವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಕೆಲ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಐಪಿಎಸ್‌ ಅಧಿಕಾರಿ ಡಿ. ರೂಪಾ ಮೌದ್ಗಿಲ್‌ ಅವರು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಕೆಲ ವೈಯಕ್ತಿ ಫೋಟೋಗಳನ್ನು ಬಹಿರಂಗವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಕೆಲ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಈ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಕ್ಕೆ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದು, ಇದಕ್ಕೆ ಐಪಿಎಸ್‌ ಅಧಿಕಾರಿ ಡಿ. ರೂಪಾ ಮೌದ್ಗಿಲ್‌ ಸ್ಪಷ್ಟನೆ ನೀಡಿದ್ದಾರೆ.

ವೈಯಕ್ತಿಕ ಫೋಟೋಗಳನ್ನು ಈ ರೀತಿ ಬಹಿರಂಗವಾಗಿ ಹಾಕುವುದು ಎಷ್ಟು ಸರಿ? ಈ ರೀತಿ ಮತ್ತೊಬ್ಬರ ಫೋಟೋಗಳನ್ನು ಅವರ ಅನುಮತಿ ಇಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚುವುದು ನಿಮ್ಮ ಸರ್ಕಾರದ ನಾಗರಿಕ ಸೇವಾ ನಿಯಮಗಳ ಉಲ್ಲಂಘನೆಯಾಗುವುದಿಲ್ಲವೇ? ಅಥವಾ ಇಂಥ ನಿಯಮಗಳು ನಿಮಗೆ ಮಾತ್ರ ಅನ್ವಯಿಸುವುದಿಲ್ಲವಾ? ಎಂದೆಲ್ಲಾ ಹಲವರು ರೂಪಾ ವಿರುದ್ಧ ಗರಂ ಆಗಿದ್ದಾರೆ.

ಈ ಪ್ರಶ್ನೆಗಳಿಗೆ ರೂಪಾ ಅವರು ಖಡಕ್ ಆಗಿ ಉತ್ತರ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುವ ಮೂಲಕ ರೂಪಾ ಅವರು ಸ್ಪಷ್ಟನೆ ನೀಡಿದ್ದಾರೆ.

ನಾನು ಯಾಕೆ ಆಕೆಯ ಪಿಕ್ಚರ್ಸ್ ಹಾಕಿದೆ ಅಂತ ಕೇಳುವವರಿಗೆ ನಾನು ಹೇಳೋದು ಇಷ್ಟೇ. Pictures ಕಳಿಸುವಾಕೆಗೆ ಅದರ ದರ್ದು ಇಲ್ಲ ಅಂದ ಮೇಲೆ ಬೇರೆಯವರಿಗೆ ಯಾಕೆ ಇರಬೇಕು. ಈ ರೀತಿಯ ಪಿಕ್ಚರ್ಸ್ ( ಎಲ್ಲೂ ಅವರ social media ಲ್ಲೀ ಇದುವರೆ ಗಿಲ್ಲ). ಯಾರು ಯಾರಿಗೆ, ಯಾಕೆ ಕಳಿಸಿದರು ಅಂತ ಅವರೇ ಅವರ ಬಾಯಿಂದ ಹೇಳಲಿ. ಅದರ ಹಿಂದಿನ ಉದ್ದೇಶ ಏನು. ಸಂಸಾರಗಳಲ್ಲಿ ಹುಳಿ ಹಿಂಡಲು? ಒಬ್ಬ ಹೆಣ್ಣಾಗಿ ಅನೇಕ ಹೆಣ್ಣು ಮಕ್ಕಳಿಗೆ ಮುಳ್ಳು ಆದ ಈಕೆಯ ಮೇಲೆ ಕನಿಕರ ಇಟ್ಟುಕೊಂಡಿರುವ ಕೆಲವರೇ, ಕೇಳಿ, ನಿಮ್ಮದು misplaced sympathy ಎಂದು ಸ್ಪಷ್ಟಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com