ಅಧಿಕಾರಿಯ ಸಾವಿನ ನಂತರವೂ ಬದಲಾಗದ ಸಿಂಧೂರಿ ಚೆಲ್ಲಾಟ; ರೂಪಾ ನಡೆ ಪ್ರಶ್ನಿಸುವವರು ಸಿಬಿಐ ವರದಿ ಓದಲಿ: ಉರಿವ ಬೆಂಕಿಗೆ ತುಪ್ಪ ಸುರಿದ ಕಾಂಗ್ರೆಸ್ ನಾಯಕ!

ಐಪಿಎಸ್ ಅಧಿಕಾರಿ ಡಿ.ರೂಪಾ ಮತ್ತು ಐಎಎಸ್ ರೋಹಿಣಿ ನಡುವಿನ ಹಾದಿ ಬೀದಿ ರಂಪಾಟದ ನಡುವೆ 8 ವರ್ಷಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡ ಡಿಕೆ ರವಿ ಸಾವು ಮತ್ತೆ ಸುದ್ದಿಯಾಗುತ್ತಿದೆ.
ರೋಹಿಣಿ ಸಿಂಧೂರಿ
ರೋಹಿಣಿ ಸಿಂಧೂರಿ

ಬೆಂಗಳೂರು : ಐಪಿಎಸ್ ಅಧಿಕಾರಿ ಡಿ.ರೂಪಾ ಮತ್ತು ಐಎಎಸ್ ರೋಹಿಣಿ ನಡುವಿನ ಹಾದಿ ಬೀದಿ ರಂಪಾಟದ ನಡುವೆ 8 ವರ್ಷಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡ ಡಿಕೆ ರವಿ ಸಾವು ಮತ್ತೆ ಸುದ್ದಿಯಾಗುತ್ತಿದೆ.

ಈ ಮಧ್ಯೆ ಕಾಂಗ್ರೆಸ್ ಮುಖಂಡ ವಕೀಲ ಸೂರ್ಯ ಮುಕುಂದರಾಜ್ ಹೊಸ ಬಾಂಬ್ ಸಿಡಿಸಿ ಡಿಕೆ ರವಿ ಸಾವಿನ ಸಿಬಿಐ ತನಿಖಾ ವರದಿ ಹಂಚಿಕೊಂಡಿದ್ದಾರೆ. ಸಿಂಧೂರಿಯ ಸಿಂಧುತ್ವದ ಬಗ್ಗೆ ಪ್ರಶ್ನೆ ಮಾಡಿರುವ ಕನ್ನಡ ಮಣ್ಣಿನ ಐಪಿಎಸ್ ಅಧಿಕಾರಿ ರೂಪ ಅವರ ನಡೆಯನ್ನು ಪ್ರಶ್ನೆ ಮಾಡುವವರು ಸಿಬಿಐ ಕೊಟ್ಟಿರುವ ಡಿಕೆ ರವಿ ಸಾವಿಗೆ ಕಾರಣವಾದ ಅಂಶಗಳ ವರದಿಯನ್ನು ಓದಬೇಕು ಎಂದಿದ್ದಾರೆ.

ಡಿಕೆ ರವಿ ಸಾವನ್ನು ಇಂದಿಗೂ ರಾಜಕೀಯ ಲಾಭಕ್ಕಾಗಿ ಬಿಜೆಪಿಗರು ಬಳಸಿಕೊಳ್ಳುತ್ತಿದ್ದಾರೆ. ಆತನ ಸಾವಿನಿಂದ ಅತಿ ಹೆಚ್ಚು ತೇಜೋವಧೆ, ಅವಮಾನಕ್ಕೀಡಾದವರು ಕುಸುಮ ಹನುಮಂತರಾಯಪ್ಪ ಅವರ ಕುಟುಂಬ ಮತ್ತು ಸಿದ್ದರಾಮಯ್ಯ.

<strong>ಸೂರ್ಯ ಮುಕುಂದರಾಜ್</strong>
ಸೂರ್ಯ ಮುಕುಂದರಾಜ್

ಆತ ಸಾವಿಗೀಡಾದ ನಂತರ ರೋಹಿಣಿ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣ ದಾಖಲಾಗಬೇಕಿತ್ತು. ಆದರೆ ರೋಹಿಣಿಯ ಅದೃಷ್ಟವೋ ಏನೋ ಆಕೆಯ ವಿರುದ್ಧ ಪ್ರಕರಣ ದಾಖಲಾಗಿಲಿಲ್ಲ. ಆ ನೋವನ್ನು ಕುಸುಮಾ ಮತ್ತು ಸಿದ್ದರಾಮಯ್ಯ ಸರ್ಕಾರ ಅನುಭವಿಸಬೇಕಾಯಿತು.

ಒಬ್ಬ ಅಧಿಕಾರಿಯ ಸಾವಿನ ನಂತರವೂ ಬದಲಾಗದ ಸಿಂಧೂರಿ, ತನ್ನ ಚೆಲ್ಲಾಟವನ್ನು ಮುಂದುವರೆಸಿದ್ದಾರೆ. ಈಗ ರೂಪ ಅದಕ್ಕೆ ಅಂತ್ಯವಾಡುತ್ತಿದ್ದಾರೆ. ಈ ರೀತಿಯ ಅಭಿಪ್ರಾಯವನ್ನ ತಮ್ಮ ಫೇಸ್ ಬುಕ್ ನಲ್ಲಿ ಸೂರ್ಯ ಮುಕುಂದ್ ರಾಜ್ ಪ್ರಸ್ತಾಪಿಸಿ ವಿವಾದಕ್ಕೆ ಮತ್ತಷ್ಟು ತುಪ್ಪ ಸುರಿದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com