ಹಾವೇರಿ: ಮದುವೆಗೆ ಮಾಡಿದ್ದ ಸಾಲ ತೀರಿಸಲಾಗದೆ ತಂದೆ-ತಾಯಿ ಆತ್ಮಹತ್ಯೆ; ಮನನೊಂದು ವಿವಾಹಿತ ಮಗಳು ನೇಣಿಗೆ ಶರಣು

ಸಾಲಬಾಧೆಯಿಂದ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ‌ಜಿಲ್ಲೆಯ ಸವಣೂರು ತಾಲ್ಲೂಕಿನ ತೊಂಡೂರು ಗ್ರಾಮದಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಹಾವೇರಿ: ಸಾಲಬಾಧೆಯಿಂದ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ‌ಜಿಲ್ಲೆಯ ಸವಣೂರು ತಾಲ್ಲೂಕಿನ ತೊಂಡೂರು ಗ್ರಾಮದಲ್ಲಿ ನಡೆದಿದೆ

ಹನುಮಂತಗೌಡ ಪಾಟೀಲ (54), ಅವರ ಪತ್ನಿ ಲಲಿತಾ ಪಾಟೀಲ(50) ಮತ್ತು ಮಗಳು ನೇತ್ರಾ ಪಾಟೀಲ(22) ಆತ್ಮಹತ್ಯೆಗೆ ಶರಣಾದ ದುರ್ದೈವಿಗಳು.

ಹನುಮಂತ ಗೌಡ ಪಾಟೀಲ ಅವರದ್ದು ಮಧ್ಯಮ ವರ್ಗದ ಕುಟುಂಬ. ಅವರು ಸಾಲ ಮಾಡಿ ಮಗಳು ನೇತ್ರಾಳ ಮದುವೆ ಮಾಡಿದ್ದರು. ಆದರೆ ಮಗಳ ಮದುವೆಗೆ ಮಾಡಿದ ಸಾಲವನ್ನು ತೀರಿಸಲಾಗದೆ ಭಾರಿ ಕಷ್ಟಪಡುತ್ತಿದ್ದರು.

ಹನುಮಂತಗೌಡ ಪಾಟೀಲ ದಂಪತಿ ಸುಮಾರು 25 ಲಕ್ಷ ರುಪಾಯಿ ಸಾಲ ಮಾಡಿ ಮಗಳ ಮದುವೆಯನ್ನು ಮಾಡಿದ್ದರು. ಈ ಸಾಲಬಾಧೆಯನ್ನು ತಾಳಲಾರದೆ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತನ್ನ ಕಾರಣಕ್ಕೆ ತಂದೆ-ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುವುದನ್ನು ತಿಳಿದು ನೊಂದ ಮಗಳು ತಾನೂ ನೇಣು ಬಿಗಿದು ಆತ್ಮಹತ್ಯೆಯನ್ನು ಮಾಡಿಕೊಂಡಿದ್ದಾಳೆ.

ಮಗಳು ಮನೆಗೆ ಬಂದ ವೇಳೆಯೇ ಅವರು ಆಕೆಗೆ ಗೊತ್ತಿಲ್ಲದಂತೆ ನೇಣು ಬಿಗಿದುಕೊಂಡಿದ್ದರು. ಮಗಳ ಜತೆ ಸಾಲ ಮತ್ತಿತರ ವಿಚಾರಗಳ ಬಗ್ಗೆ ಮೊದಲು ಚರ್ಚೆ ನಡೆಸಿರುವ ಸಾಧ್ಯತೆಗಳಿವೆ. ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಸವಣೂರು ಠಾಣೆಯ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com