ಮೋದಿ ರೋಡ್ ಶೋಗೆ ಬೆಳಗಾವಿ ಕೇಸರಿಮಯ: ದಿ. ಸುರೇಶ್ ಅಂಗಡಿ ಫೋಟೋ ಮಿಸ್ಸಿಂಗ್, ಬೆಂಬಲಿಗರ ಬೇಸರ

ಪ್ರಧಾನಿ ಮೋದಿ ರೋಡ್ ಶೋಗೆ ಕುಂದಾನಗರಿ ಸಂಪೂರ್ಣ ಕೇಸರಿಮಯಗೊಂಡಿತ್ತು. ಎಲ್ಲೆಲ್ಲೂ ಮೋದಿ, ಬಿಜೆಪಿಯ ಬ್ಯಾನರ್, ಫ್ಲೆಕ್ಸ್, ಬಂಟಿಂಗ್ಸ್ ಗಳು ರಾರಾಜಿಸುತ್ತಿದ್ದವು. ಆದರೆ, ಈ ಹೋರ್ಡಿಂಗ್‌ಗಳಲ್ಲಿ ಮಾಜಿ ಕೇಂದ್ರ ಸಚಿವ ದಿವಂಗತ ಸುರೇಶ ಅಂಗಡಿ ಅವರ ಫೋಟೋಗಳು ಮಾತ್ರ ಎಲ್ಲಿಯೂ ಕಂಡು ಬಂದಿರಲಿಲ್ಲ...
ಸುರೇಶ್ ಅಂಗಡಿ
ಸುರೇಶ್ ಅಂಗಡಿ

ಬೆಳಗಾವಿ: ಪ್ರಧಾನಿ ಮೋದಿ ರೋಡ್ ಶೋಗೆ ಕುಂದಾನಗರಿ ಸಂಪೂರ್ಣ ಕೇಸರಿಮಯಗೊಂಡಿತ್ತು. ಎಲ್ಲೆಲ್ಲೂ ಮೋದಿ, ಬಿಜೆಪಿಯ ಬ್ಯಾನರ್, ಫ್ಲೆಕ್ಸ್, ಬಂಟಿಂಗ್ಸ್ ಗಳು ರಾರಾಜಿಸುತ್ತಿದ್ದವು. ಆದರೆ, ಈ ಹೋರ್ಡಿಂಗ್‌ಗಳಲ್ಲಿ ಮಾಜಿ ಕೇಂದ್ರ ಸಚಿವ ದಿವಂಗತ ಸುರೇಶ ಅಂಗಡಿ ಅವರ ಫೋಟೋಗಳು ಮಾತ್ರ ಎಲ್ಲಿಯೂ ಕಂಡು ಬಂದಿರಲಿಲ್ಲ. ಇದಕ್ಕೆ ಬಿಜೆಪಿ ಮುಖಂಡರು ಹಾಗೂ ಸಾರ್ವಜನಿಕ ಪ್ರತಿನಿಧಿಗಳ ವಿರುದ್ಧ ಸುರೇಶ್ ಅಂಗಡಿಯವರ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರ ಖಾತೆಗಳಿಗೆ 13ನೇ ಕಂತಿನ ಹಣವನ್ನು ಜಮೆ ಮಾಡುವುದರ ಜೊತೆಗೆ ಹೊಸದಾಗಿ ಅಭಿವೃದ್ಧಿಪಡಿಸಲಾದ ಬೆಳಗಾವಿ ರೈಲು ನಿಲ್ದಾಣ ಮತ್ತು ಬೆಳಗಾವಿ-ಲೋಂಡಾ ಡಬಲ್ ರೈಲು ಮಾರ್ಗ ಸೇರಿದಂತೆ ಎರಡು ಪ್ರಮುಖ ಯೋಜನೆಗಳನ್ನು ಉದ್ಘಾಟಿಸಲು ಪ್ರಧಾನಿ ಮೋದಿ ಅವರು ಸೋಮವಾರ ಬೆಳಗಾವಿಗೆ ಭೇಟಿ ನೀಡಿದ್ದರು.

ಮೋದಿಯವರು ನಿನ್ನೆ ಉದ್ಘಾಟಿಸಿದ ರೈಲ್ವೇ ಇಲಾಖೆಯ ಎರಡು ಯೋಜನೆಗಳಿಗೆ ದಿವಂಗತ ಸುರೇಶ್ ಅಂಗಡಿಯವರು ಕಾರಣಕರ್ತರಾಗಿದ್ದಾರೆ. ಅವರ ಸತತ ಪ್ರಯತ್ನದಿಂದಾಗಿ ಯೋಜನೆ ಉದ್ಘಾಟನೆಗೊಳ್ಳಲು ಸಾಧ್ಯವಾಗಿದೆ. ಆದರೆ, ಬೆಳಗಾವಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿನ್ನೆ ಪ್ರದರ್ಶಿಸಲಾದ ಬಿಜೆಪಿ ನಾಯಕರ ಬ್ಯಾನರ್‌ಗಳಲ್ಲಿ ಸುರೇಶ್ ಅಂಗಡಿ ಅವರ ಭಾವಚಿತ್ರಗಳು ಮಾತ್ರ ಎಲ್ಲಿಯೂ ಕಂಡು ಬಂದಿರಲಿಲ್ಲ. ಇದು ಅವರ ಅನುಯಾಯಿಗಳನ್ನು ಅಸಮಾಧಾನಗೊಳಿಸಿದೆ.

ಖಾಸಗಿ ಕಂಪನಿ ಉದ್ಯೋಗಿ ಅಮರ್ ಪಾವಾಶೆ ಮಾತನಾಡಿ, ಬೆಳಗಾವಿಯಲ್ಲಿ ರೈಲ್ವೆ ಪರಿವರ್ತನೆಗೆ ಅಂಗಡಿ ಪ್ರಯತ್ನ ಪ್ರಮುಖವಾಗಿತ್ತು. "ರೈಲ್ವೆ ಮೇಲೆ ಅವರ ಪ್ರಭಾವ ಇಂದಿಗೂ ಇದೆ, ಬಿಜೆಪಿ ನಾಯಕರು ಅದನ್ನು ಮರೆಯಬಾರದು. ನಗರದಾದ್ಯಂತ ಬಿಜೆಪಿ ನಾಯಕರು ಹಲವು ಹೋರ್ಡಿಂಗ್ಸ್ ಗಳನ್ನು ಅಳವಪಡಿಸಿದ್ದರೂ. ಆದರೆ, ಒಂದರಲ್ಲಿಯೂ ಸುರೇಶ್ ಅಂಗಡಿಯವರ ಫೋಟೋ ಕಾಣದಿರುವುದು ಬೇಸರವನ್ನು ತಂದಿದೆ ಎಂದು ಹೇಳಿದ್ದಾರೆ.

ಈ ಮಧ್ಯೆ ಈ ವಿಚಾರ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳು ಕೂಡ ಆರಂಭವಾಗಿವೆ. ಸುಲೋಚನಾ ಎಂಬ ಶಿಕ್ಷಕಿಯೊಬ್ಬರೂ ಕೂಡ ಸುರೇಶ್ ಅಂಗಡಿಯವರ ಫೋಟೋ ಕಾಣದಿರುವುದಕ್ಕೆ ಬೇಸರ ಹೊರಾಗಿದ್ದಾರೆ.

ಬಿಜೆಪಿ ಮತ್ತು ಆ ಪಕ್ಷದ ನಾಯಕರು ಬೆಳಗಾವಿ ಅಭಿವೃದ್ಧಿಯಲ್ಲಿ ಸುರೇಶ್ ಅಂಗಡಿಯವರ ಕೊಡುಗೆಯನ್ನು ಮರೆತಂತಿದೆ. ಈ ವರ್ತನೆ ಬಿಜೆಪಿಯ ನಿರ್ಲಕ್ಷ್ಯವನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com